ಗೃಹಲಕ್ಷ್ಮಿ ಯೋಜನೆಯ ಹಣ ಬರಲಾರದವರಿಗೆ ಸಿಹಿ ಸುದ್ದಿ ನೀಡಿದಂತಹ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷ್ಮಿ ಯೋಜನೆಯ ಹಣ ಬರಲಾರದವರಿಗೆ ಸಿಹಿ ಸುದ್ದಿ ನೀಡಿದಂತಹ ಲಕ್ಷ್ಮಿ ಹೆಬ್ಬಾಳ್ಕರ್

ಆತ್ಮೀಯ ಬಾಂಧವರೇ,ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಒಂದು ಕೋಟಿಗೂ ಅಧಿಕ ಫಲಾನುಭವಿಗಳ ಗಾತಿಗೆ ಸೇರಿದ್ದು ಇನ್ನೂ ಕೆಲವೊಂದಿಷ್ಟು ಜನರ ಖಾತೆಗೆ ಸೇರುವುದು ಬಾಕಿ ಇದೆ, ಅವರಿಗೆ ಸಿಹಿ ಸುದ್ದಿ ಕಾದಿದೆ.

ತಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ತರಿಗೆ ಪ್ರತಿ ತಿಂಗಳು 2000 ನೀಡುವಂತಹ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ಈಗಾಗಲೇ ಈ ಯೋಜನೆಯ ಮೊದಲ ಕಂತಿನ ಹಣವು ಫಲಾನುಭವಿಗಳ ಖಾತೆಗೆ ಸೇರಿದೆ.

ಪ್ರೀತಿಯ ಪ್ರಕಾರ ಒಂದು ಕೋಟಿಗೂ ಅಧಿಕ ಮಹಿಳೆಯರ ಖಾತೆಗಳಿಗೆ ಈಗಾಗಲೇ ಜಮೆಯಾಗಿದ್ದು, ಇನ್ನೂ ಕೆಲವೊಂದಿಷ್ಟು ಜನರ ಖಾತೆಗಳಿಗೆ ಬಾಕಿಯಾಗುವುದು ಉಳಿದಿದೆ, ಹಾಗಾಗಿ ಸದ್ಯದಲ್ಲಿ ಅದನ್ನು ಸರಿಪಡಿಸಿ ಅವರ ಖಾತೆಗಳಿಗೂ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಮೊದಲ ಹಾಗೂ ಎರಡನೇ ಕಂತಿನ ಜಮಾ ಸ್ಟೇಟಸ್ ಆಧಾರ್ ಕಾರ್ಡ್ ನಂಬರ್ ಮೂಲಕ ಇಲ್ಲಿ ಚೆಕ್ ಮಾಡಿ

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರ್ಕಾರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಆದಂತಹ ಗೃಹಲಕ್ಷ್ಮಿ (gruhalakshmi)ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ ಅದರ ಹಣವು ಬಿಡುಗಡೆಯಾಗಿದೆ ಹಾಗಾದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಖಾತೆಗಳಿಗೆ ಜಮೆ ಆಗಿದೆ ಎಂದು ನಿಮಗೆ ಗೊತ್ತಾಗುತ್ತಿಲ್ಲವೇ?.

ಇದನ್ನು ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ಸರಳವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಬನ್ನಿ ಹೇಗೆ ಚೆಕ್ ಮಾಡಬಹುದು ಎಂದು ತಿಳಿದುಕೊಳ್ಳೋಣ.

– ಮೊಟ್ಟ ಮೊದಲು ಆಧಾರ್ ಕಾರ್ಡನ್ ಅಧಿಕೃತ ಸ್ಥಾನವಾದಂತಹ UIADI ge ಭೇಟಿ ನೀಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ: https://resident.uidai.gov.in/bank-mapper

ಅಲ್ಲಿ ಕೇಳುವಂತಹ ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ, ಕ್ಯಾಚ್ಪಕೋಡನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ಆಗ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಆಗಿರುವಂತಹ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ.

ಆ ಒಟಿಪಿಯನ್ನು ನೀವು ಅಲ್ಲಿ ನಮೂದಿಸುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಖಾತೆಗೆ ಜಮ ಆಗಲಿದೆ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

ಈ ಖಾತೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿದ್ದು, ಸರ್ಕಾರದಿಂದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಬರುವಂತಹ ಎಲ್ಲಾ ಯೋಜನೆಗಳ ಸಹಾಯಧನ ಈ ಖಾತೆಗಳಿಗೆ ಜಮೆಯಾಗಲಿವೆ.

ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ನೀವು ಎಲ್ಲಿ ಚೆಕ್ ಮಾಡಬಹುದು ನಿಮಗೆ ಗೊತ್ತಿದೆಯೇ?

ಇಲ್ಲಿದೆ ನೋಡಿ ಉತ್ತರ,ನೀವು ಇದನ್ನು ಆನ್ಲೈನ್ ಮೂಲಕ ಚೆಕ್ ಮಾಡಲು ಬರುವುದಿಲ್ಲ, ಹಾಗಾಗಿ ನೀವು ನಿಮ್ಮ ಹತ್ತಿರದ ಗ್ರಾಮ ವನ್ ಅಥವಾ ಕರ್ನಾಟಕ ವನ್ ಅಥವಾ ಬಾಪೂಜಿ ಕೇಂದ್ರಕ್ಕೆ ಹೋಗುವ ಮೂಲಕ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಆನ್ಲೈನ್ ಮೂಲಕ ಇದನ್ನು ನೀವು ಚೆಕ್ ಮಾಡಲು ಬರುವುದಿಲ್ಲ, ಸದ್ಯಕ್ಕೆ ಬರುವುದಿಲ್ಲ ಮುಂದಿನ ದಿನಗಳಲ್ಲಿ ಸರ್ಕಾರ ಸಾಮಾನ್ಯ ಜನರಿಗೂ ಅವಕಾಶವನ್ನು ಕಲ್ಪಿಸಿ ಕೊಡಬಹುದಾಗಿದೆ.

ನೀವು ಚೆಕ್ ಮಾಡಿಸಲು ಹೋಗುವಾಗ ನಿಮ್ಮ ರೇಷನ್ ಕಾರ್ಡನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ನೀವು ಹೇಗೆ ಚೆಕ್ ಮಾಡಬಹುದು?

ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ಒಂದು ವೆಬ್ಸೈಟ್ ಇದ್ದು ಇದರ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

ವೆಬ್ಸೈಟ್ ಡೈರೆಕ್ಟ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://sevasindhugs.karnataka.gov.in/

ಅದರಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ

ಆಗ ನಿಮಗೆ ಅಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಿ ಎಂಬ ಒಂದು ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ವೆಬ್ಸೈಟ್ ಡೈರೆಕ್ಟ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ : https://sevasindhu.karnataka.gov.in/Gruha_lakshmi_DBT/Tracker_Eng

ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕುವ ಮೂಲಕ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

ಆದರೆ ಈ ಸರ್ವರ್ ತುಂಬಾ ಬ್ಯುಸಿ ಇರುವ ಕಾರಣಗಳಿಂದಾಗಿ, ಹಲವೊಂದಿಷ್ಟು ಬಾರಿ ಓಪನ್ ಆಗುವುದಿಲ್ಲ ಹಾಗಾಗಿ ನಿಮಗೆ ಇನ್ನೊಂದು ಸರಳ ಮಾರ್ಗವಿದೆ ಅದೇನೆಂದರೆ ನೀವು ನಿಮ್ಮ ಹತ್ತಿರದ ಗ್ರಾಮ ವನ್, ಕರ್ನಾಟಕ ವನ್ ಬಾಪೂಜಿ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ರೇಷನ್ ಕಾರ್ಡ್ ನಂಬರ್ ಮೂಲಕ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದಾಗಿದೆ.

Leave a Comment