ಗೃಹಲಕ್ಷ್ಮಿ ಯೋಜನೆಯ ಹಣ ಬರಲಾರದವರಿಗೆ ಹೊಸ ಅಪ್ಡೇಟ್: ಈ ದಿನಾಂಕದಂದು ನಿಮ್ಮ ಖಾತೆಗಳಿಗೆ ಬರಲಿದೆ ಮೊದಲನೇ ಕಂತಿನ ಹಣ

 ಆತ್ಮೀಯ ಬಾಂಧವರೇ, ಹಲವಾರು ಜನರಿಗೆ  ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಜಮೆಯಾಗಿಲ್ಲ, ಅಂತವರಿಗಾಗಿ ಒಂದು ಹೊಸ ಅಪ್ಡೇಟ್ ಲಭ್ಯವಿದ್ದು ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

 ಎಲ್ಲವೂ ಸರಿ ಹೋಗಿದ್ದರೆ ಇಂದಿನಿಂದ ಎರಡನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಯಾಗಬೇಕಿತ್ತು, ಆದರೆ ತಾಂತ್ರಿಕ ದೋಷದ ಕಾರಣಗಳಿಂದಾಗಿ ಇನ್ನೂ ಹಲವಾರು ಜನರಿಗೆ ಮೊದಲನೇ  ಕಂತಿನ ಹಣವೇ ಜಮೆಯಾಗಿಲ್ಲ.

 ಹಾಗಾಗಿ  ಸರ್ಕಾರ ಎರಡನೇ ಕಂತಿನ ಹಣವನ್ನು ಅಕ್ಟೋಬರ್ ಮೊದಲ ವಾರದಿಂದ ನೀಡುವ ಬಗ್ಗೆ ಚಿಂತಿಸುತ್ತಿದ್ದು, ಈ ತಿಂಗಳು ಮುಗಿಯುವುದರೊಳಗಾಗಿ ಮೊದಲನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸರ್ಕಾರ ಮುಂದಾಗಿದೆ  ಎಂದು ಮಾಹಿತಿ ತಿಳಿದು ಬಂದಿದೆ.

 ಹಾಗಾಗಿ ಇಂದಿನಿಂದ ಯಾರ ಖಾತೆಗೆ ಮೊದಲನೇ ಕಂತಿನ ಹಣ ಬಂದಿಲ್ಲವೋ   ಇಂದಿನಿಂದ 30 ನೇ ತಾರೀಖಿನ ಒಳಗಾಗಿ  ಬರಬಹುದು ಎಂದು ಮಾಹಿತಿ ಬಂದಿದೆ.

 ಈ ತಿಂಗಳೊಳಗಾಗಿ ಮೊದಲನೇ ಕಂತಿನ ಬಾಕಿ ಇರುವ ಜನರೆಲ್ಲರ ಕಂತನ್ನು ಪೂರ್ಣಗೊಳಿಸಿ ಮುಂದಿನ ತಿಂಗಳು ಅಂದರೆ ಮೊದಲ ವಾರದಿಂದ ಎರಡನೇ ಕಂತಿನ ಹಣವನ್ನು ಜಮೆ ಮಾಡಲು ಚಿಂತನೆ ನಡೆಸುತ್ತಿದೆ ಎಂದು ಮಾಹಿತಿ ಬಂದಿದೆ.

 ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ನೀವು ಹೇಗೆ ಚೆಕ್ ಮಾಡಬಹುದು?

 ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ಒಂದು ವೆಬ್ಸೈಟ್ ಇದ್ದು  ಇದರ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

 ವೆಬ್ಸೈಟ್ ಡೈರೆಕ್ಟ  ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://sevasindhugs.karnataka.gov.in/

ಅದರಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ

ಆಗ ನಿಮಗೆ ಅಲ್ಲಿ ನಿಮ್ಮ ಅರ್ಜಿಯ  ಸ್ಥಿತಿಯನ್ನು ತಿಳಿದುಕೊಳ್ಳಿ ಎಂಬ ಒಂದು ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ವೆಬ್ಸೈಟ್ ಡೈರೆಕ್ಟ  ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ : https://sevasindhu.karnataka.gov.in/Gruha_lakshmi_DBT/Tracker_Eng

ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕುವ ಮೂಲಕ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

 ಆದರೆ  ಈ ಸರ್ವರ್ ತುಂಬಾ ಬ್ಯುಸಿ ಇರುವ ಕಾರಣಗಳಿಂದಾಗಿ,   ಹಲವೊಂದಿಷ್ಟು ಬಾರಿ ಓಪನ್ ಆಗುವುದಿಲ್ಲ  ಹಾಗಾಗಿ ನಿಮಗೆ ಇನ್ನೊಂದು ಸರಳ ಮಾರ್ಗವಿದೆ ಅದೇನೆಂದರೆ  ನೀವು ನಿಮ್ಮ ಹತ್ತಿರದ ಗ್ರಾಮ ವನ್,  ಕರ್ನಾಟಕ ವನ್  ಬಾಪೂಜಿ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ರೇಷನ್ ಕಾರ್ಡ್ ನಂಬರ್ ಮೂಲಕ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದಾಗಿದೆ.

 

Leave a Comment