ಕುಸುಬೆ ಖರೀದಿ ಕೇಂದ್ರ ಆರಂಭ:ಪ್ರತಿ ಕ್ವಿಂಟಲ್ ಗೆ 5,650 ರೂಪಾಯಿ

ಆತ್ಮೀಯ ರೈತ ಬಾಂಧವರೇ, ಕುಸುಬಿಯನ್ನು ಬೆಳೆದು ಬೆಳೆ ಇಳಿಕೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲೂ ಸರಕಾರವು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕುಸುಬೆ ಖರೀದಿಸಲು ಮುಂದಾಗಿದ್ದು, ಆದಷ್ಟು ಬೇಗ ರೈತರು ಕುಸುಬಿಯನ್ನು ನೀಡಿ ಸರ್ಕಾರದ ಸೌಲತನ್ನು ಪಡೆಯಬೇಕಾಗಿ ವಿನಂತಿ.

ಧಾರವಾಡ, ೨೫ : ೨೦೨೨-೨೩ ನೇ ಸಾಲಿನ ಹಿಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಕುಸುಬೆ ಉತ್ಪನ್ನ ಖರೀದಿಸಲು ಧಾರವಾಡ ಜಿಲ್ಲೆಯ ರೈತರಿಗೆ ಖರೀದಿ ಕೇಂದ್ರ ತೆರೆಯಲಾಗಿದ್ದು, ಜಿಲ್ಲೆಯ ಎಲ್ಲ ರೈತರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಟಾಸ್ಕ್‌ ಪೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕುಸುಬೆಕಾಳು ಖರೀದಿಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಎಪಿಎಂಸಿಗಳ ಮೂಲಕ ಈಗಾಗಲೇ ರೈತರಿಗೆ ಮಾಹಿತಿ ನೀಡಲಾಗಿದ್ದು, ಕುಸುಬೆ ಖರೀದಿ ಕೇಂದ್ರಗಳಲ್ಲಿ ರೈತರು ಮೇ ೨೯ ರ ವರೆಗೆ ನೊಂದಣಿ ಮಾಡಬಹುದು.

ಖರೀದಿ ಪ್ರಕ್ರಿಯೆಯನ್ನು ೯೦ ದಿನಗಳವರೆಗೆ ಅಂದರೆ ಖರೀದಿ ಕಾಲಾವಧಿಯನ್ನು ಜೂನ್‌ ೧೩ ರ ವರೆಗೆ ನಿಗದಿಪಡಿಸಲಾಗಿದೆ.

ರೈತರ ಕುಸುಬೆ ಉತ್ಪನ್ನಕ್ಕೆ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ ರೂ. ೫,೬೫೦ ಇರುತ್ತದೆ. ಆಗಸ್ಟ್ ೧೩. ೨೦೨೩ ರ ವರೆಗೆ ಸರಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಕುಸುಬೆ ಕಾಳು ಉತ್ಪನ್ನ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಖರೀದಿ ಕೇಂದ್ರಗಳ ಸ್ಥಳ:

ಎಪಿಎಂಸಿ ಕುಂದಗೋಳ:ಎಣ್ಣೆ ಬೆಳೆಗಾರರ ಸಹಕಾರ ಸಂಘ ನಿ. ಯರಗುಪ್ಪಿ ಅಂದಪ್ಪ ಬಡದಾಳಶೆಟ್ಟರ್ ೯೯೦೧೫೮೩೮೯೫,

ಕಮಡೊಳ್ಳಿ: ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ನಿ. ತಾ. ಕುಂದಗೋಳ -ಎನ್. ಟಿ ಬ್ಯಾಹಟ್ಟಿ -೮೭೯೨೩೦೧೧೬೫,

ಸಂಶಿ: ಎಣ್ಣಿಬೀಜ ಬೆಳೆಗಾರರ ಸಹಕಾರ ಸಂಘ ನಿ. ಯರಗುಪ್ಪಿ ತಾ, ಕುಂದಗೋಳ – ಸಮಂತಾ ಜಿ. ಪಾಟೀಲ್ -೮೫೪೯೦೯೫೫೯೨,

ಇಂಗಳಗಿ: ಎಣ್ಣಿ ಬೀಜ ಬೆಳೆಗಾರರ ಸಹಕಾರ ಸಂಘ ನಿ. ಹಿರೇಹರಕುಣಿ ತಾ, ಕುಂದಗೋಳ, ವೆಂಕನಗೌಡ ಎಸ್‌. ಪಾಟೀಲ್ ೯೮೪೪೧೯೮೧೬೯,

ಶಿರಗುಪ್ಪಿ: ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ನಿ. ಶಿರಗುಪ್ಪಿ ತಾ, ಹುಬ್ಬಳ್ಳಿ -ಶೇಖಣ್ಣ ನೆಲಗುಡ್ಡ ೯೫೩೮೬೯೬೭೧೮,

ಶಿರೂರು: ಎಣ್ಣಿಬೀಜ ಬೆಳೆಗಾರರ ಸಹಕಾರ ಸಂಘ ನಿ. ತಾ. ನವಲಗುಂದ, ಪ್ರಕಾಶಗೌಡ ಎಮ್. ಬಾಳನಗೌಡ್ರ ೯೬೧೧೪೯೮೪೭೬

ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment