ಬಳ್ಳಾರಿ, ೨೫ : ಜಿಲ್ಲೆಯಲ್ಲಿನ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ರಾಷ್ಟ್ರೀಯ ಕೈಮಗ್ಗ ದಿನಾಚರಣೆ (೭ನೇ ಆಗಸ್ಟ್) ಸಂದರ್ಭದಲ್ಲಿ ಕೈಮಗ್ಗ ಉತ್ಪನ್ನಗಳ ಅಭಿವೃದ್ಧಿಗಾಗಿ ಕೈಮಗ್ಗ ನೇಯ್ದೆ ವೃತ್ತಿಯಲ್ಲಿ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ, ಉತ್ಕೃಷ್ಟತೆ ಹೊಂದಿರುವ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿರುವ ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿಗಳನ್ನು ನಗರದ ಅನಂತಪುರ ರಸ್ತೆಯ ಹೊಸ ಜಿಲ್ಲಾಡಳಿತ ಭವನದ ‘ಎ’ ಬ್ಲಾಕ್, ರೂ ನಂಎಫ್-೨೨೫ ಒಂದನೇ ಮಹಡಿಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರವರ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಮೇ ೩೧ ರೊಳಗಾಗಿ ಸಲ್ಲಿಸಬೇಕು.

ಸದರಿ ಪ್ರಶಸ್ತಿಯು ನಗದು ಬಹುಮಾನ, ಒಂದು ನೆನಪಿನ ಕಾಣಿಕೆ, ಒಂದು ಶಾಲು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ನಗದು ಬಹುಮಾನದ ವರ್ಗಗಳು:

ರೇಷ್ಮೆ ವಲಯದಲ್ಲಿ ಪ್ರಥಮ ಬಹುಮಾನ ೨೫ ಸಾವಿರ ರೂ.

ದ್ವಿತೀಯ ಬಹುಮಾನ ೨೦ ಸಾವಿರ ರೂ.,

ಹತ್ತಿ ವಲಯದಲ್ಲಿ ಪ್ರಥಮ ಬಹುಮಾನವಾಗಿ ೨೦ ಸಾವಿರ ರೂ.

ದ್ವಿತೀಯ ಬಹುಮಾನವಾಗಿ ೧೫ ಸಾವಿರ ರೂ. ಹಾಗೂ

ಉಣ್ಣೆ ವಲಯದಲ್ಲಿ ಪ್ರಥಮವಾಗಿ ೧೫ ಸಾವಿರ ರೂ. ಬಹುಮಾನ ನೀಡಲಾಗುವುದು.

ಅರ್ಹತೆಗಳು:

ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಕೈಮಗ್ಗ ನೇಕಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಕೈಮಗ್ಗ ನೇಕಾರರ ವಯಸ್ಸು ಕನಿಷ್ಠ ೩೦ ವರ್ಷ ಪೂರೈಸಿರಬೇಕು.

ಕೈಮಗ್ಗ ಉತ್ಪನ್ನಗಳ ಅಭಿವೃದ್ಧಿಗಾಗಿ ಕೈಮಗ್ಗ ನೇಯ್ದೆಯ ಅಸಾಧಾರಣ ಕೌಶಲ್ಯದಲ್ಲಿ ಸುಮಾರು ೧೦ ವರ್ಷಗಳ ಅನುಭವ ಇರತಕ್ಕದ್ದು.

ಪ್ರಶಸ್ತಿಗಾಗಿ ಸಲ್ಲಿಸುವ ಉತ್ಪನ್ನದ ಮಾದರಿ (ಖಚಿಟಠಿಟಜ) ಸ್ವತಃ ಅರ್ಜಿದಾರರೇ ತಯಾರಿಸಿದ ಉತ್ಪನ್ನವೇ ಆಗಿರತಕ್ಕದ್ದು,

ಅರ್ಜಿದಾರರು ಪ್ರಶಸ್ತಿಗೆ ನಿಗದಿಪಡಿಸಿರುವ ಅರ್ಹತೆ ಮಾನದಂಡವನ್ನು ಪೂರೈಸತಕ್ಕದ್ದು ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಅಥವಾ ಮೊ.೯೯೦೨೭೭೨೯೩೬, ೯೮೪೪೮೩೭೨೬೪ ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

By Raju

Leave a Reply

Your email address will not be published. Required fields are marked *