ತೆಂಗಿನ ಸಸಿ

ಆತ್ಮೀಯ ರೈತ ಬಾಂಧವರೇ, ನೀವೇನಾದರೂ ನಿಮ್ಮ ಹೊಲದಲ್ಲಿ ತೆಂಗಿನ ಸಸಿಗಳನ್ನು ನಾಟಿ ಮಾಡಬೇಕೆಂದು ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ ನಿಮಗೆ ಇಲ್ಲಿ ಒಂದು ಸಿಹಿ ಸುದ್ದಿ ಇದ್ದು ನಿಮಗೆ ಬೇಕಾದಂತಹ ಒಳ್ಳೆಯ ತೆಂಗಿನ ಸಸಿಗಳನ್ನು ತೆಂಗು ಅಭಿವೃದ್ಧಿ ಮಂಡಳಿ ಉತ್ಪಾದನೆ ಮಾಡಿದ್ದು, ರೈತರಿಗಾಗಿ ರಿಯಾಯಿತಿ ದರದಲ್ಲಿ ಕೇವಲ 40 ರೂಪಾಯಿಗಳಿಗೆ ತೆಂಗಿನ ಸಸಿಗಳನ್ನು ವಿತರಿಸಲಾಗುತ್ತಿದೆ.

ಎಲ್ಲಿ ತೆಂಗಿನ ಸಸಿಗಳನ್ನು ವಿತರಿಸಲಾಗುತ್ತಿದೆ?

ತೆಂಗು ಅಭಿವೃದ್ಧಿ ಮಂಡಳಿ, ಡಿ.ಎಸ್.ಪಿ ಫಾರ್ಮ್, ಮಂಡ್ಯ ಜಿಲ್ಲೆಯ ಲೋಕಸರ ಗ್ರಾಮದಲ್ಲಿ ಅತಿ ಹೆಚ್ಚು ಇಳುವರಿ ನೀಡುವ ಒಳ್ಳೆಯ ಗುಣಮಟ್ಟದ ಬೀಜಕಾಯಿಗಳಿಂದ ಉತ್ಪಾದನೆ ಮಾಡಿದ ನಾಟಿ ತಳಿಯ ತೆಂಗಿನ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ.

ಯಾವಾಗಿನಿಂದ ಯಾವಾಗಿನವರೆಗೆ ನಾವು ತೆಂಗಿನ ಸಸಿಗಳನ್ನು ತೆಗೆದುಕೊಂಡು ಹೋಗಲು ಬರಬಹುದು?

ಆಸಕ್ತ ರೈತ ಬಾಂಧವರು ಲೋಕಸರದಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿಯ ಕೆಲಸ ದಿನಗಳಲ್ಲಿ ಕಛೇರಿ ಸಮಯ ಬೆಳಿಗ್ಗೆ 8.00 ರಿಂದ ಸಂಜೆ 3.00ರ ಒಳಗೆ ಭೇಟಿ ನೀಡಿ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ಕೊಂಡುಕೊಳ್ಳಬಹುದು.

ಒಂದು ತೆಂಗಿನ ಸಸಿಯ ದರವೆಷ್ಟು?

ಒಂದು ನಾಟಿ ತೆಂಗಿನ ಸಸಿಯ ಬೆಲೆ ರೂ. 80/-

, ರೈತ ಬಾಂಧವರು ಗಮನಿಸಬೇಕಾದ ವಿಷಯವೆಂದರೆ ನಮ್ಮಲ್ಲಿ ತೆಂಗಿನ ಸಸಿಯನ್ನು ಕೊಂಡುಕೊಳ್ಳುವವರಿಗೆ ಅರ್ಧದಷ್ಟು ಹಣವನ್ನು ನೀವು ಮರಳಿ ಸಹಾಯಧನವಾಗಿ ಪಡೆಯಬಹುದು.

ತೆಂಗಿನ ಸಸಿಗಳನ್ನು ಕೊಂಡುಕೊಳ್ಳುವಾಗ ಅದರ ಜೊತೆಯಲ್ಲಿ ಸಹಾಯಧನದ ಅರ್ಜಿಯನ್ನು ಕೂಡ ನೀಡಲಾಗುತ್ತದೆ.

ತೆಂಗಿನ ಸಸಿಗಳನ್ನು ನೆಟ್ಟನಂತರ ರೈತರು ಅರ್ಜಿಯೊಂದಿಗೆ ನಾವು ಕೊಟ್ಟ ರಶೀದಿಯನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 08232-298015/ 9438803651/ 9945740889.

By Raju

Leave a Reply

Your email address will not be published. Required fields are marked *