ಆತ್ಮೀಯ ರೈತ ಬಾಂಧವರೇ, ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ಉದ್ಯೋಗವನ್ನು ಪಡೆಯಲು ಆಗುವುದಿಲ್ಲ, ಹಾಗಾಗಿ ಯುವಕರು ಉದ್ಯೋಗವನ್ನು ಹುಡುಕುವುದಕ್ಕಿಂತ ಉದ್ಯೋಗವನ್ನು ನೀಡುವಂತವರಾದರೆ ನಾವು ನಮ್ಮ ದೇಶವನ್ನು ಅತ್ಯುನ್ನತ ಸ್ಥಾನಕ್ಕೆ ಒಯ್ಯಬಹುದಾಗಿದೆ.

ಹಾಗಾಗಿ ಹೊಸ ಉದ್ಯೋಗವನ್ನು ಮಾಡಲು ನಿಮಗೆ ತರಬೇತಿ ಬೇಕಾಗಿದೆಯೇ?ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಕುರಿಸಾಕಾಣಿಕೆ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

ಕೊಪ್ಪಳ, ೨೫ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ೧೦ ದಿನಗಳ ಉಚಿತ ಮೊಬೈಲ್ ರಿಪೇರಿ, ವಿದ್ಯುತ್‌ ಮೋಟರ್ ರೀವೈಂಡಿಂಗ್ & ರಿಪೇರಿ ತರಬೇತಿ ಹಾಗೂ ಸಾಫ್ಟ್ ಟಾಯ್ಸ್ (ಮೃಧು ಆಟಿಕೆ) ತಯಾರಿಕಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಜಿದಾರರು ೧೮ ರಿಂದ ೪೫ ವರ್ಷ ಒಳಗಿನವರಾಗಿರಬೇಕು.

ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.

ಕೊಪ್ಪಳ ಜಿಲ್ಲೆಯ ಗ್ರಾಮೀಣಭಾಗದವರಾಗಿರಬೇಕು.

ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.

ಅರ್ಜಿ ಸಲ್ಲಿಸಲಿಕ್ಷೀಸುವ ಆಸಕ್ತರು ತಮ್ಮ ಆಧಾರಗ ಕಾರ್ಡ್ ಜೆರಾಕ್ಸ್ ಪ್ರತಿ,

ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ,

ಪಾಸ್‌ಪೋರ್ಟ್ ಸೈಜ್ ಮೂರು ಫೋಟೋ,

ಮಾರ್ಕ್ಸಕಾರ್ಡ ಜೆರಾಕ್ಸ್ ಪ್ರತಿಯೊಂದಿಗೆ

ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂ.ಸಂ: ೦೮೫೩೯-೨೩೧೦೩೮, ಇಲ್ಲಿಗೆ ಸಲ್ಲಿಸಬೇಕು.

ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಕುರಿಸಾಕಾಣಿಕೆ ತರಬೇತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಉಚಿತವಾಗಿ ನೀಡಲಾಗುವುದು. ತರಬೇತಿಗಾಗಿ ಜೂನ್ ೦೫ರಂದು ಸಂದರ್ಶನ ನಡೆಯಲಿದ್ದು, ಜೂನ್ ೦೬ರಿಂದ ತರಬೇತಿ ಪ್ರಾರಂಭವಾಗಲಿವೆ ಎಂದು ಕೊಪ್ಪಳ ಎಸ್‌ಬಿಐ ಆರ್‌ಸಿಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Raju

Leave a Reply

Your email address will not be published. Required fields are marked *