ನ್ಯಾಯಬೆಲೆ(Ration) ಅಂಗಡಿಯವರು ಸರಿಯಾಗಿ ಕೆಲಸ ಮಾಡುತ್ತಿಲ್ಲವೇ? ಸರಿಯಾದ ಸಮಯಕ್ಕೆ ಅಂಗಡಿ ತೆರೆಯುತ್ತಿಲ್ಲವೇ? ಸರಿಯಾದ ಸಮಯಕ್ಕೆ ಪಡಿತರ ಕೊಡುತ್ತಿಲ್ಲವೇ? ಹಾಗಾದರೆ ಏನು ಮಾಡಬೇಕು ಇಲ್ಲಿದೆ ನೋಡಿ ಅದಕ್ಕೆ ಪರಿಹಾರ.

ನೇರ ನಗದು ಹಣ ವರ್ಗಾವಣೆ ಕುರಿತು ಗದಗ ಪಡಿತರ(ration) ಪ್ರದೇಶದ (ಶಹರ) ನ್ಯಾಯಬೆಲೆ ಅಂಗಡಿಯವರು ಪಡಿತರ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡದೇ ಇರುವುದು ಹಾಗೂ ನ್ಯಾಯಬೆಲೆ ಅಂಗಡಿಗಳನ್ನು ನಿಗದಿತ ಸಮಯದಲ್ಲಿ ತೆರೆಯದೇ ಇರುವುದು ಹಾಗೂ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸದೇ ಇರುವ ದೂರುಗಳು ಸ್ವೀಕೃತವಾಗಿರುತ್ತದೆ.

https://samrakshane.karnataka.gov.in/Premium/CheckStatusMain_aadhaar.aspx

ಜಿಲ್ಲೆಯಲ್ಲಿ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಬೆ.೮ ಗಂಟೆಯಿಂದ ಮ.೧ ಗಂಟೆಯವರೆಗೆ ಹಾಗೂ ಸಂಜೆ ೪ ಗಂಟೆಯಿಂದ ೮ ಗಂಟೆಯವರೆಗೆ ತೆರೆದಿರಬೇಕು.

ಪಡಿತರವನ್ನು ನಿಯಮಾನುಸಾರವಾಗಿ ಹಂಚಿಕೆ ಮಾಡುವುದು, ನೇರ ನಗದು ಹಣ ವರ್ಗಾವಣೆ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಫಲಾನುಭವಿಗಳು/ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ಆಗಮಿಸಿದಾಗ ಅವರಿಗೆ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಗುವ ಪರಿಹಾರಗಳನ್ನು (ಇ- ಕೆವೈಸಿ ಇತರೆ) ತಕ್ಷಣವೇ ಮಾಡುವುದು,

ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸುವಂತಿಲ್ಲ. ನ್ಯಾಯಬೆಲೆ ಅಂಗಡಿಯವರು ಯಾವುದೇ ರೀತಿಯ ಸಹಕರಿಸದೇ ಇದ್ದಲ್ಲಿ ಅಥವಾ ಕಚೇರಿಗಳಿಗೆ ಅಲೆದಾಡಿಸುತ್ತಿರುವುದು ಕಂಡು ಬಂದಲ್ಲಿ ಹಾಗೂ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಯಾವುದೇ ನೋಟೀಸು ನೀಡದೇ ಅಮಾನತ್ತುಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read this also:

1.ಆಧಾರ್ ಕಾರ್ಡ್ ನಂಬರ್ ಮೂಲಕ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನಿಮ್ಮ mobile ಮೂಲಕ ನೀವೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ಆಧಾರ್ ಕಾರ್ಡ(aadhar card) ನಂಬರ್ ಮೂಲಕ ನೀವು ನಿಮ್ಮ crop insurance  status ಅನ್ನು ಚೆಕ್ ಮಾಡಿಕೊಳ್ಳಬಹುದು, ಅದು ಕೂಡ ನಿಮ್ಮ mobileಲಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದು. ಬನ್ನಿ ಹೇಗೆ ಅಂತ ತಿಳಿದುಕೊಳ್ಳೋಣ.

ಮೊಟ್ಟ ಮೊದಲು googleನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ : https://samrakshane.karnataka.gov.in/

Leave a Comment