ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ : ಮೀನುಗಾರಿಕೆ ಇಲಾಖೆಯಿಂದ ೨೦೨೩-೨೪ ನೇ ಸಾಲಿಗೆ ರಾಜ್ಯವಲಯ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ವಲಯ ಯೋಜನೆಗಳು:

ಜಲಾಶಯ, ನದಿಭಾಗದ, ಕೆರೆಗಳ – ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಹರಿಗೋಲು ಖರೀದಿಗೆ ಸಹಾಯಧನ,

ಮೀನುಮರಿ ಖರೀದಿಸಲು ನೆರವು ಯೋಜನೆ.

ಕೆರೆ, ಜಲಾಶಯಗಳ ಅಂಚಿನ ಕೊಳೆಗಳಲ್ಲಿ ಮೀನುಮರಿ ಪಾಲನೆಗೆ ನೆರವು,

ಕೆರೆಯನ್ನು ಗುತ್ತಿಗೆಗೆ ಪಡೆದ ಮೀನುಗಾರಿಕೆ ಸಹಕಾರ ಸಂಘ,

ವ್ಯಕ್ತಿಗಳಿಗೆ ಮೀನುಮರಿ ಬಿತ್ತನೆಗೆ ಸಹಾಯಧನ ನೆರವು ನೀಡಲಾಗುವುದು.

ಅರ್ಹ ಫಲಾನುಭವಿಗಳು ಆನ್‌ಲೈನ್‌ನ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು.

ಸಲ್ಲಿಸಿದ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳೊಡನೆ ಆಯಾ ತಾಲೂಕಿನ ಮೀನುಗಾರಿಗೆ ಇಲಾಖೆಯ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ:

ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ತಾಲೂಕು ವ್ಯಾಪ್ತಿಗೆ ಶಿವಣ್ಣ-ಮೊ.೯೪೪೯೫೯೩೧೫೬ ಹಾಗೂ ಸಂಡೂರು ವ್ಯಾಪ್ತಿಗೆ ಜಿ.ಶಾಂತಕುಮಾರ್-ಮೊ.೯೬೨೦೧೭೭೫೮೮ ಇವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment