first installment

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಬಹುತೇಕ ರೈತರ ಖಾತೆಗಳಿಗೆ ಎರಡು ಕಂತಿನ ಬರ ಪರಿಹಾರದ ಹಣವನ್ನು ಜಮಾ ಮಾಡಲಾಗಿದೆ.

ಆದರೆ ನಿಮ್ಮ ಖಾತೆಗೆ ಒಂದು ಕುಂತಿನ ಹಣ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ಕೆಲಸವನ್ನು ಮಾಡಿ ಹಾಗೂ ನಿಮ್ಮ ಬರ ಪರಿಹಾರದ ಹಣವನ್ನು ಪಡೆಯಿರಿ.

ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಪ್ರತಿಯೊಂದು ಜಿಲ್ಲೆಯಲ್ಲೂ ಕೂಡ ಹೆಲ್ಪಡೆಸ್ಕ್ ಗಳನ್ನು ಪ್ರಾರಂಭಿಸಲಾಗಿದ್ದು ಕೂಡಲೇ ತಾವು ತಮ್ಮ ಜಿಲ್ಲೆಯಲ್ಲಿ ಪ್ರಾರಂಭವಾಗಿರುವಂತಹ ದಾಖಲೆಗಳೊಂದಿಗೆ ಸಂಪರ್ಕಿಸುವ ಮೂಲಕ ಬರ ಪರಿಹಾರದ ಹಣವನ್ನು ಪಡೆಯಬಹುದಾಗಿದೆ.

ಗದಗ ಜಿಲ್ಲೆಯ ಮಾಹಿತಿಯನ್ನು ನಾವು ನೋಡುವುದಾದರೆ ಗದಗ್ ಜಿಲ್ಲೆಯ 1,13,328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸರ್ಕಾರದಿಂದ ಪರಿಹಾರ ಜಮೆ ಆಗಿರುತ್ತದೆ.

ಈ ಜಿಲ್ಲೆಯಲ್ಲಿ ಯಾವ ರೈತರಿಗೆ ಮೊದಲನೇ ಹಂತದ ಬರ ಪರಿಹಾರದ ಮೊತ್ತವು ಈ ವರೆಗೂ ಜಮೆ ಆಗಿರುವುದಿಲ್ಲವೋ ಅವರು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ತೆರೆಯಲಾದ ಹೆಲ್ಪಡೆಸ್‌ಗೆ ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ರೀತಿ ಪ್ರತಿಯೊಂದು ಜಿಲ್ಲೆಯಲ್ಲೂ ಕೂಡ ಹೆಲ್ಪಡೆಸ್‌ ಪ್ರಾರಂಭಿಸಲಾಗಿದ್ದು, ಸಂಪರ್ಕಿಸುವ ಮೂಲಕ ನೀವು ನಿಮ್ಮ ಬರ ಪರಿಹಾರದ ಹಣವನ್ನು ಪಡೆಯಬಹುದಾಗಿದೆ.

Read this also:

ನನ್ನ ಖಾತೆಗೆ 16,000  ರೂಪಾಯಿಗಳ ಬರ ಪರಿಹಾರ ಜಮಾ : ಮೊದಲ ಕಂತಿನಲ್ಲಿ1000 ರೂಪಾಯಿ ಜಮಾ ಆಗಿದ್ದವು

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಇನ್ಪುಟ್ ಸಬ್ಸಿಡಿಯ ಹಣವನ್ನು ರಾಜ್ಯ ಸರ್ಕಾರವು ರೈತರ ಖಾತೆಗಳಿಗೆ ಸೋಮವಾರದಿಂದ ಜಮಾ ಮಾಡಲು ಪ್ರಾರಂಭ ಮಾಡಿದೆ.

ನಮ್ಮ ತಮ್ಮನ ಖಾತೆಗೆ ಮೊದಲನೇ  ಕಂತಿನಲ್ಲಿ ಜನವರಿ ತಿಂಗಳಲ್ಲಿ 1000 ಮಾತ್ರ ಜಮಾ ಆಗಿತ್ತು, ಇದೀಗ ಎರಡನೇ ಕಂತಿನಲ್ಲಿ 16 ಸಾವಿರ ರೂಪಾಯಿಗಳು ಜಮಾ ಆಗಿವೆ.

ಸರ್ವೇ ನಂಬರ್ ಮೂಲಕ ಬೆಳೆ ಪರಿಹಾರ ಜಮೆ ಆಗಿರುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ,ತಮಗೆಲ್ಲ ತಿಳಿದಿರುವ ಹಾಗೆ ಈ ಬಾರಿ ಮುಂಗಾರಿನಲ್ಲಿ ಅನಾವೃಷ್ಟಿಯ ಕಾರಣದಿಂದಾಗಿ ರಾಜ್ಯದ ತುಂಬಾ ಬರ ಆವರಿಸಿದ್ದು, ಸರ್ಕಾರ ರೈತರ ನೆರವಿಗಾಗಿ ಬೆಳೆ ಪರಿಹಾರವನ್ನು ಘೋಷಿಸಿದ್ದು, ಮೊದಲ ಕಂತಿನ ಎರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಹಾಗಾದರೆ ನಿಮ್ಮ ಸರ್ವೇ ನಂಬರ್ ಮೂಲಕ ಆನ್ಲೈನ್ ನಲ್ಲಿ ಯಾವ ಖಾತೆಗೆ ಹಣ ಯಾವಾಗ ಎಷ್ಟು ಜಮೆಯಾಗಿದೆ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ನೋಡೋಣ ಬನ್ನಿ.

ಮೊಟ್ಟ ಮೊದಲು ಗೂಗಲ್ ನಲ್ಲಿ PARIHARA ಎಂದು ಸರ್ಚ್ ಮಾಡಿ.

ಆಗ ನಿಮಗೆ ಕಾಣುವಂತಹ ಮೊದಲ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಒತ್ತಿ :

https://parihara.karnataka.gov.in/Pariharahome/

ಆಗ ಅಲ್ಲಿ ಕಾಣುವಂತಹ NEW REPORT =2023 kharif drought season ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಒತ್ತಿ :

https://parihara.karnataka.gov.in/service92/

ಆಗ ಅಲ್ಲಿ

ವರ್ಷ =2023-24

ವೃತು =ಮುಂಗಾರು

ವಿಪತ್ತಿನ ವಿಧ = ಬರ ಆಯ್ಕೆ ಮಾಡಿ

ಮುಂದೆ ಬರುವಂತಹ ಹಲವಾರು ಆಯ್ಕೆಗಳಲ್ಲಿ search by survey number ಮೇಲೆ ಕ್ಲಿಕ್ ಮಾಡಿ.

ಇಲ್ಲಿ ನಿಮ್ಮ survey number ಹಾಕುವ ಮೂಲಕ ನೀವು ಯಾವ ಖಾತೆಗೆ ಯಾವಾಗ ಎಷ್ಟು ಹಣ ಜಮೆಯಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

READ THIS ALSO:

ಗದಗ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿದ್ದು, ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

ಪ್ರಸ್ತುತ ಅಳಿದುಳಿದಿರುವ ಮೆಣಸಿನಕಾಯನ್ನು ಬ್ಯಾಡಗಿ, ಹುಬ್ಬಳ್ಳಿ, ಗದಗ ಮಾರುಕಟ್ಟೆಗೆ ಒಯ್ದರೆ, ಕ್ವಿಂಟಾಲ್‌ಗೆ 20ರಿಂದ 35 ಸಾವಿರ ರೂ.ಗಳಿಗೆ ಆವಕವಾಗುತ್ತಿದೆ. ಕಳೆದ ವರ್ಷ ಕ್ವಿಂಟಾಲ್ ಒಂದಕ್ಕೆಗರಿಷ್ಠ 75 ಸಾವಿರ ರೂ.ಗಳಿಗೆ ಮಾರಾಟವಾಗಿತ್ತು.

ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಅತ್ಯಂತ ಮಹತ್ವ ಹೊಂದಿರುವ ಮೆಣಸಿನಕಾಯಿ ಬೆಳೆಗೆ ಈ ವರ್ಷದ ಬರಗಾಲ ತೀವ್ರ ನಷ್ಟ ತಂದೊಡ್ಡಿದ್ದು, ಸಾಲ- ಸೋಲ ಮಾಡಿ ಬಿತ್ತನೆ ಮಾಡಿದ ರೈತ ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ಹೆಚ್ಚಿನ ಮಳೆಯಾಗಿ ಬೆಳೆ ಹಾನಿಗೊಳಗಾಗಿತ್ತು.

ಈ ವರ್ಷ ಮಳೆ ಕೈಕೊಟ್ಟು ಬರಗಾಲಆವರಿಸಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣವನ್ನು ಮಧ್ಯಂತರ ಪರಿಹಾರವಾಗಿ ಜಮಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ ಎನ್ನುತ್ತಾರೆ ರೈತರು.

ಪೂರ್ಣ ಪ್ರಮಾಣದ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಆಗ್ರಹಿಸಿದ್ದಾರೆ.

ಬೆಳೆಹಾನಿ ಪರಿಹಾರ ಖಾತೆಗೆ ಜಮಾ ಆಗದಿದ್ದರೆ ಕೂಡಲೇ ಅಹವಾಲು ಸಲ್ಲಿಸಿ

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆ ಹಾನಿಗೆ ಪರಿಹಾರವನ್ನು ಗದಗ್ ಜಿಲ್ಲೆಯ 1,13,328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸರ್ಕಾರದಿಂದ ಜಮೆ ಆಗಿರುತ್ತದೆ.

ಈಗಾಗಲೇ ಜಮೆ ಆದ ರೈತ ಫಲಾನುಭವಿಗಳಿಗೆ ಪರಿಹಾರದ ಬಾಕಿ ಮೊತ್ತವನ್ನು ಜಮೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.

ಈ ಜಿಲ್ಲೆಯಲ್ಲಿ ಯಾವ ರೈತರಿಗೆ ಮೊದಲನೇ ಹಂತದ ಬರ ಪರಿಹಾರದ ಮೊತ್ತವು ಈ ವರೆಗೂ ಜಮೆ ಆಗಿರುವುದಿಲ್ಲವೋ ಅವರು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ತೆರೆಯಲಾದ ಹೆಲ್ಪಡೆಸ್‌ಗೆ ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

By Raju

Leave a Reply

Your email address will not be published. Required fields are marked *