ಅಂತೂ ಬಂತು ತುರ್ತು ಪರಿಹಾರ: ಸಂತ್ರಸ್ತರ ಖಾತೆಗೆ ಮೊದಲ ಕಂತಿನ ಹಣ ಜಮೆ

ಪ್ರಸಕ್ತ ಮುಂಗಾರು ಮಳೆಯಾಗದ ಕಾರಣ ಜಿಲ್ಲೆಯ ಎಲ್ಲ ತಾಲೂಕುಗಳೂ ಬರಪೀಡಿತವಾಗಿವೆ. ಮುಂಗಾರು ಆರಂಭದಲ್ಲಿ ಸುರಿದ ಅಷ್ಟಿಷ್ಟು ಮಳೆಗೆ ಜಿಲ್ಲೆಯಲ್ಲಿ 707 ಮನೆಗಳಿಗೆ ಹಾನಿಯಾಗಿದೆ. ಜುಲೈ- ಆಗಸ್ಟ್‌ನಲ್ಲಾದ ಹಾನಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಮೊದಲ ಕಂತಿನ ಹಣ ಸಂತ್ರಸ್ತರ ಖಾತೆಗೆ ಜಮೆಯಾಗಿದೆ.

ಅಳ್ಳಾವರ ತಾಲೂಕಿನಲ್ಲಿ ಬಿ2 ಕೆಟಗರಿಯ 3. ಸಿ- 1, 2-3, 01-4,8-9, adad92-192,01- 1 ಹಾಗೂ ಸಿ ವರ್ಗದ 141 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ಶಹರದಲ್ಲಿ ಬಿ2- 8, ಬಿ1- 3, ಸಿ- 39, ಹುಬ್ಬಳ್ಳಿ ಗ್ರಾಮೀಣದಲ್ಲಿ ಬಿ2- 6, ಬಿ1- 2, ಸಿ- 29, ಹು. ಶಹರ ತಾಲೂಕಿನಲ್ಲಿ ಬಿ2- 7. ಬಿ1- 3. ಸಿ-17. ຮຍ-63A 02-84, 21-1, 3-53, ಬಿ2- 12, ಸಿ- 48, ನವಲಗುಂದ ತಾಲೂಕಿನಲ್ಲಿ ಬಿ2- 12, ಬಿ1- 14 ಹಾಗೂ ಸಿ ಕೆಟಗರಿಯ 15 ಮನೆಗಳಿಗೆ ಹಾನಿಯಾಗಿದೆ.

ಜಿಲ್ಲೆಯಾದ್ಯಂತ ಬಿ2- 327, ಬಿ1- 28. ಸಿ- 352 ಸೇರಿ ಒಟ್ಟು 707 ಮನೆಗಳಿಗೆ ಹಾನಿಯಾಗಿದೆ.ವಿ ವಿ ಶೇ ಷ ಬಿ2 ಕೆಟಗರಿಯಡಿ 5 ಲಕ್ಷ ರೂ. ಪರಿಹಾರಕ್ಕೆ ಅರ್ಹವಾದ ಫಲಾನುಭವಿಗಳ ಖಾತೆಗೆ 2023ಕ್ಕೂ ಮೊದಲು ಎಸ್‌ಡಿಆರ್ ಎಫ್ ಮಾನದಂಡಗಳ ಅನ್ವಯ ಮೊದಲ ಕಂತು 95,100 ರೂ. ಜಮೆ ಮಾಡಲಾಗುತ್ತಿತ್ತು. ಮನೆ ನಿರ್ಮಾಣವಾದಂತೆ ಹಂತಗಳಿಗೆ ಅನುಗುಣವಾಗಿ 1 ಲಕ್ಷ ರೂ.ಗಳ 3 ಕಂತು, ಮನೆ ನಿರ್ಮಾಣ ಮುಕ್ತಾಯವಾದಾಗ ಕೊನೇ ಕಂತಿನ 1,04,900 ರೂ. ಜಮೆ ಮಾಡಲಾಗುತ್ತಿತ್ತು.

ಆದರೆ, ಈ ಬಾರಿ ತುರ್ತು ಪರಿಹಾರವಾಗಿ 1.20 ಲಕ್ಷ ರೂ., ನಂತರ 1 ಲಕ್ಷ ರೂ.ಗಳ 3 ಕಂತು, ಮುಕ್ತಾಯದ ಕೊನೇ ಕಂತಿನ 80,000 ರೂ. ಜಮೆ ಮಾಡಲು ತಿದ್ದುಪಡಿ ಮಾಡಲಾಗಿದೆ.

ಹಾನಿಯಾದ ಮನೆಗಳನ್ನು ನೆಲಸಮ ಮಾಡಿ ಪುನರ್ ನಿರ್ಮಿಸಿಕೊಳ್ಳಲು ಸಂತ್ರಸ್ತರಿಗೆ 1.20 ಲಕ್ಷ ರೂ. ತುರ್ತು ಪರಿಹಾರ ಜಮೆಯಾಗಬೇಕಿತ್ತು. ಆದರೆ, ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸುವತ್ತ ಗಮನ ಹರಿಸಿದ ಪರಿಣಾಮವೇನೋ ಎಂಬಂತೆ ಮನೆ ಹಾನಿ ಸಂತ್ರಸ್ತರನ್ನು ಮರೆತಿತ್ತು.

ಈ ಬಗ್ಗೆ ಸಂತ್ರಸ್ತರು ಆಯಾ ತಹಸೀಲ್ದಾರರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸರ್ಕಾರದಿಂದ ಹಣ ಬಿಡುಗಡೆಯಾದಾಗ ನಿಮ್ಮ ಖಾತೆಗೆ ನೇರವಾಗಿ ಜಮೆಯಾಗುತ್ತದೆ ಎಂದು ಅಧಿಕಾರಿಗಳು ಸಬೂಬು ಹೇಳಿ ಕಳುಹಿಸುತ್ತಿದ್ದರು. ಕೊನೆಗೂ ಮೊದಲ ಕಂತಿನ ಹಣ  ಜಮೆಯಾಗಿದ್ದು, ಇನ್ನು ಮನೆಗಳ ನಿರ್ಮಾಣ ಕಾರ್ಯ ಸುಗಮವಾಗಲಿದೆ.

Read this also:

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯ 16ನೇ ಕಂತಿನ ಪಡೆಯುವವರ ಲೇಟೆಸ್ಟ್ ಅಪ್ಡೇಟೆಡ್ ಲಿಸ್ಟ್ ಬಿಡುಗಡೆಯಾಗಿದ್ದು ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆದಷ್ಟು ಬೇಗ ಚೆಕ್ ಮಾಡಿಕೊಳ್ಳಿ.

ಈಗಾಗಲೇ ಪಿ ಎಮ್ ಕಿಸಾನ್ ಯೋಜನೆ ಅಡಿ 15 ಕಂತುಗಳು ರೈತರ ಖಾತೆಗಳಿಗೆ ಜಮೆಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 16ನೇ ಕಂತೆನ ಹಣವು ಕೂಡ ರೈತರ ಖಾತೆಗಳಿಗೆ ಜಮೆಯಾಗಲಿದೆ.

ಆನ್ಲೈನ್ ಮೂಲಕ ಲೇಟೆಸ್ಟ್ ಅಪ್ಡೇಟೆಡ್ ಲಿಸ್ಟ್ ಚೆಕ್ ಮಾಡುವುದು ಹೇಗೆ?

ಮೊಟ್ಟಮೊದಲು ಗೂಗಲ್ ನಲ್ಲಿ ಪಿಎಂ ಕಿಸಾನ್ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://pmkisan.gov.in/

ಈಗ ನೀವು ಪಿಎಂ ಕಿಸಾನ್ ಯೋಜನೆಯ ಮುಖ್ಯ ಪೇಜ್ ನಲ್ಲಿ ಇದ್ದೀರಿ, ಅದರಲ್ಲಿ ಫಾರ್ಮರ್ಸ್ ಕಾರ್ನರ್ ನಲ್ಲಿ ಕಾಣುವಂತಹ beneficiary list ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

Direct link:https://pmkisan.gov.in/Rpt_BeneficiaryStatus_pub.aspx

ಅದರಲ್ಲಿ ಕೇಳುವಂತಹ ನಿಮ್ಮ ಎಲ್ಲ ಮಾಹಿತಿಯನ್ನು ನಮೂದಿಸಿ get report ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ಈ ಮೂಲಕ ನೀವು ಅಪ್ಡೇಟೆಡ್ ಲಿಸ್ಟ್ ಅನ್ನು ಪಡೆಯಬಹುದಾಗಿದೆ.

ಆತ್ಮೀಯ ರೈತ ಬಾಂಧವರೇ, ಪಿಎಂ ಕಿಸಾನ್ ಯೋಜನೆಯ ಹದಿನಾಲ್ಕನೇ ಕಂತಿನ ಹಣ ಇನ್ನೇನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆ ಯಾಗಲಿದ್ದು, ಯಾರು ಇನ್ನೂ E-KYC ಮಾಡಿಸಿಕೊಂಡಿಲ್ಲವೂ ಆದಷ್ಟು ಬೇಗ E-KYC ಮಾಡಿಕೊಳ್ಳಬೇಕಾಗಿ ವಿನಂತಿಸಲಾಗುತ್ತಿದೆ.

ತಮಗೆಲ್ಲ ಗೊತ್ತಿರುವ ಹಾಗೆ ಅನೇಕ ಅನರ್ಹ ವ್ಯಕ್ತಿಗಳು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದು, ಇದನ್ನು ತಪ್ಪಿಸಲು ಸರ್ಕಾರವು E-KYC ಅನ್ನು ಕಡ್ಡಾಯಗೊಳಿಸಿತ್ತು, ಹೀಗಾಗಿ ಇನ್ನು ಯಾರು E-KYC ಮಾಡಿಸಿಕೊಳ್ಳಬೇಕಾಗಿ ವಿನಂತಿ.

ಆನ್ಲೈನ್ ಮೂಲಕ ನಮ್ಮ ಮೊಬೈಲ್ ನಲ್ಲಿ E-KYC ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ PMKISAN ಎಂದು ಸರ್ಚ್ ಮಾಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://pmkisan.gov.in/

ಅಲ್ಲಿ ಬಲಗಡೆ farmers corner ಅಲ್ಲಿ e-kyc ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://exlink.pmkisan.gov.in/aadharekyc.aspx

ಅಲ್ಲಿ ಕೇಳುವಂತಹ ನಿಮ್ಮ ಆಧಾರ್ number ಅನ್ನು ನಮೂದಿಸಿ ನಂತರ ನಿಮ್ಮ aadhar ನೊಂದಿಗೆ ಲಿಂಕ್ ಆಗಿರುವಂತಹ mobile ಸಂಖ್ಯೆಗೆ ಒಂದು otp ಬರುತ್ತದೆ, ಅದನ್ನು ನಮೂಡಿಸುವ ಮೂಲಕ ನೀವು ಯಶಸ್ವಿಯಾಗಿ ನಿಮ್ಮ mobile ನಲ್ಲಿಯೇ E-kyc ಅನ್ನು ಮಾಡಬಹುದಾಗಿದೆ.

ಆಧಾರ್ ಕಾರ್ಡ್ನೊಂದಿಗೆ mobile ನಂಬರ್ ಲಿಂಕ್ ಇರದಿದ್ದರೆ ಏನು ಮಾಡಬೇಕು?

ಆಧಾರ್ ಕಾರ್ಡ್ ನೊಂದಿಗೆ mobile ನಂಬರ್ ಲಿಂಕ್ ಇರದಿದ್ದರೆ ನಿಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ e-kyc ಅನ್ನು ಮಾಡಿಸಿಕೊಳ್ಳಬಹುದಾಗಿದೆ.

ಬೇಕಾಗುವ ದಾಖಲೆಗಳು:

-ಆಧಾರ್ ಕಾರ್ಡ್

ಆದಷ್ಟು ಬೇಗ E-KYC ಮಾಡಿಸಿಕೊಂಡು ಮುಂದಿನ ಕಂತಿನ ಹಣ ಪಡೆಯಬೇಕಾಗಿ ವಿನಂತಿ.

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಒಂದು ಅತ್ಯದ್ಭುತ ಯೋಜನೆಯಾಗಿದ್ದು, ದೇಶದ ಎಲ್ಲಾ ಸಣ್ಣ ಅತಿ ಸಣ್ಣ ಮಧ್ಯಮ ಹಾಗೂ ದೊಡ್ಡ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ವಾರ್ಷಿಕವಾಗಿ 6,000ಗಳನ್ನು 3 ಕಂತುಗಳಲ್ಲಿ ಪಡೆಯಬೇಕಾಗಿ ವಿನಂತಿ.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

 

 

 

Leave a Comment