FID number is compulsory for drought relief fund:ಬರ ಪರಿಹಾರ ಪಡೆಯಬೇಕೆಂದರೆ fid ನಂಬರು ನಿಮ್ಮ ಸರ್ವೇ ನಂಬರಿಗೆ ಲಿಂಕ್ ಆಗಿದ್ದರೆ ಮಾತ್ರ ಬರ ಪರಿಹಾರದ ಹಣ ಸಿಗುತ್ತದೆ.

Fid is compulsory for drought relief fund:ನಮಸ್ಕಾರ ಆತ್ಮೀಯ ರೈತ ಬಾಂಧವರೇ ನಿಮಗೆಲ್ಲಾ ತಿಳಿಸುವುದೇನೆಂದರೆ ರಾಜ್ಯ ಸರ್ಕಾರವು ಈಗಾಗಲೇ ಹೇಳಿರುವಂತೆ ಯಾರ ಜಮೀನಿಗೆ fid ನಂಬರ್ ಲಿಂಕ್ ಇರುತ್ತದೆ ಅಂತವರಿಗೆ ಮಾತ್ರ ಬರ ಪರಿಹಾರದ ಹಣ ಮತ್ತು ಸರ್ಕಾರದ  ಸೌಲತ್ತುಗಳು ದೊರೆಯಲಿದೆ.

 ಆದಕಾರಣ ರೈತರು ಆದಷ್ಟು ಬೇಗನೆ ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನುಗಳಿಗೆ ಎಫ್ ಐಡಿ ನಂಬರ್ ಅನ್ನು ಲಿಂಕ್ ಮಾಡಿಕೊಳ್ಳಬೇಕು. ಆಗ ಮಾತ್ರ ನಿಮಗೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲು ಅರ್ಹರಾಗುತ್ತೀರಿ. 

Farmer Registration and unified beneficiary information system (FRUITS) B ಆಗಿದೆ. ನೌಕರರಿಗೆ ಐಡಿ ಪೂಫ್ ಇದ್ಯಂತೆ ರೈತರಿಗೆ ಐಡಿ ಪ್ರೊಫ್ ಆಗಿದೆ.  ಒಂದುಸಲ ರೈತರು ಈ ಐಡಿ ಕಾರ್ಡ್ ಪಡೆದುಕೊಂಡರೆ ಸಾಕು ಜೀವನಪರ್ಯಂತ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಇದು ಅನುಕೂಲವಾಗುತ್ತದೆ.

 ಹಾಗಾದರೆ ಬನ್ನಿ ರೈತರೇ ಈಗ ನಿಮ್ಮ ಹೆಸರಿನಲ್ಲಿ ನಾಲ್ಕೈದು ಸರ್ವೆ ನಂಬರ್ ಗಳಿದ್ದು ಅದರಲ್ಲಿ ಯಾವುದಾದರೂ ಒಂದು ಜಮೀನಿನ ಸರ್ವೇ ನಂಬರ್ fid ನಂಬರಿಗೆ ಲಿಂಕ್ ಆಗಿಲ್ಲವೆಂದರೆ ನಿಮಗೆ ಆ ಜಮೀನಿನಲ್ಲಿ ಬರುತ್ತಕ್ಕಂತಹ ಪರಿಹಾರ ಹಣ ಆಗಲಿ ಅಥವಾ ವಿಮೆ ಹಣವಾಗಲಿ ಬರುವುದಿಲ್ಲ.

How to check FID by Aadhar number?

ಆತ್ಮೀಯ ರೈತ ಬಾಂಧವರೇ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗೆ ಬರುವಂತಹ ಅನೇಕ ಯೋಜನೆಗಳ ಲಾಭವನ್ನು ಪಡೆಯಲು FID ಬಹು ಮುಖ್ಯವಾಗಿದ್ದು, ಇದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಪಡೆಯಬಹುದೆಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

How to check FID by Aadhar number? 

 ರೈತರು ನಿಮ್ಮ ಮೊಬೈಲ್ ನಲ್ಲಿ ಎಫ್ ಐ ಡಿ  ( F I D ) ಪಡೆಯಲು

 ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

step 1. ಎಫ್ ಐ ಡಿ ಪಡೆಯಲು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಕ್ರೋಮ್ ಗೆ ಭೇಟಿ ನೀಡಿ. ನಂತರ ಸರ್ಚ್ ಆಪ್ಷನ್ ನಲ್ಲಿ

F I D ಎಂದು ಟೈಪ್ ಮಾಡಿ.

 ಅಥವಾ ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

Direct link –

https://fruitspmk.karnataka.gov.in/MISReport/GetDetailsByAadhaar.aspx

 

step 2. ಮೇಲಿನ ಲಿಂಕ್ ಕ್ಲಿಕ್ ಮಾಡಿದ ಮೇಲೆ ನಿಮಗೆ ಫ್ರೂಟ್ಸ್ ಐಡಿಯ ಅಧಿಕೃತ ಜಾಲತಾಣ ಕಾಣುತ್ತದೆ. ಅಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಎಂಟರ್ ಮಾಡಿ ( Enter your Adhar number ).

Step 3. ಆಧಾರ್ ನಂಬರ್ ಎಂಟರ್ ಮಾಡಿದ ಮೇಲೆ ಸರ್ಚ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಫಾರ್ಮರ್ ಡಿಟೇಲ್ಸ್

( Farmer Details ) ಎಂಬ ಮುಖಪುಟ ತೆರೆದುಕೊಳ್ಳುತ್ತದೆ.

 ಈ ರೀತಿ ರೈತರು ತಮ್ಮ ಮೊಬೈಲ್ ನಲ್ಲಿಯೇ ಎಫ್ ಐ ಡಿ ಸಂಖ್ಯೆಯನ್ನು ಪಡೆಯಬಹುದು.

How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://fruits.karnataka.gov.in/Login.aspx

Cyclone Michaung:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡು ಮಾರುತದಿಂದ ರಾಜ್ಯದಲ್ಲಿ ಡಿಸೆಂಬರ್ 9 ರವರೆಗೆ ತೀವ್ರ ಚಳಿ ಮತ್ತು ಅಲ್ಲಲ್ಲಿ ಸೋನೆ ಮಳೆ ಆಗಲಿದೆ.

READ THIS ALSO:

1.ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?

ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ? ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

2.Mailara Lingeshwar Karnika 2023: ರೈತರ ಕಷ್ಟದ ಬಗ್ಗೆ ಭವಿಷ್ಯ ಹೇಳಿದ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ.

“ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್”! ಎಂಬ ನುಡಿಯನ್ನು ಐತಿಹಾಸಿಕ ಸ್ಥಳವಾದ ದೇವರಗುಡ್ಡದ ಗೊರವಜ್ಜನ ಕಾರ್ಣಿಕ ಇದಾಗಿದೆ. ಈ ನುಡಿಯು ರೈತರ ಬರಗಾಲದ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದವರು ಹೇಳಿದ್ದಾರೆ.

3.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

5.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

6.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

1 thought on “FID number is compulsory for drought relief fund:ಬರ ಪರಿಹಾರ ಪಡೆಯಬೇಕೆಂದರೆ fid ನಂಬರು ನಿಮ್ಮ ಸರ್ವೇ ನಂಬರಿಗೆ ಲಿಂಕ್ ಆಗಿದ್ದರೆ ಮಾತ್ರ ಬರ ಪರಿಹಾರದ ಹಣ ಸಿಗುತ್ತದೆ.”

Leave a Comment