2023 ರ ಅಂತಿಮ ಮತಪಟ್ಟಿ ಬಿಡುಗಡೆ : ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಮುಂದಿನ ತಿಂಗಳು ಅಂದರೆ ಮೇ ಹತ್ತರಂದು ಕರ್ನಾಟಕ ರಾಜ್ಯದ ವಿಧಾನಸಭೆಯ ಚುನಾವಣೆಗಳು ನಡೆಯಲಿದ್ದು, ಅದಕ್ಕಾಗಿ ಸರ್ಕಾರವು 2023 ನೇ ಸಾಲಿನ ಹೊಸ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ.

-ಮೊತ್ತ ಮೊದಲು ಗೂಗಲ್ ನಲ್ಲಿ CEO ಎಂದು ಟೈಪ್ ಮಾಡಿ.

ಡೈರೆಕ್ಟ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:https://ceo.karnataka.gov.in/

ಈಗ ನೀವು ಕರ್ನಾಟಕ ವಿಧಾನಸಭೆ ಚುನಾವಣೆ 2023, ಮುಖ್ಯ ಚುನಾವಣಾ ಅಧಿಕಾರಿ ಕರ್ನಾಟಕದ ಮೇನ್ ಪೇಜ್ ನಲ್ಲಿ ಇದ್ದೀರಿ.

election

ಅಲ್ಲಿ ಮೇಲೆ ಬಲಗಡೆ ಕಾಣುವಂತಹ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ

ಆಗ ಬರುವಂಥ ಹಲವಾರು ಆಯ್ಕೆಗಳಲ್ಲಿ ಅಂತಿಮ ಮತದಾರರ ಪಟ್ಟಿ 2023 ಆಪ್ಷನ್ ಮೇಲೆ ಕ್ಲಿಕ್ ಮಾಡಿ

ನಂತರದ ಪೇಜ್ ನಲ್ಲಿ ನಿಮಗೆ ನಮ್ಮ ರಾಜ್ಯದ ಪ್ರತಿಯೊಂದು ಜಿಲ್ಲೆಯ ಹೆಸರು ಅಲ್ಲಿ ನಿಮಗೆ ಕಾಣಿಸುತ್ತದೆ, ಆಗ ನೀವು ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ

elecvtion

ನಂತರ ನಿಮ್ಮ ಜಿಲ್ಲೆಯಲ್ಲಿ ಬರುವಂತಹ ವಿಧಾನಸಭಾ ಕ್ಷೇತ್ರಗಳ ಪಟ್ಟಿ ನಿಮ್ಮ ಸ್ಕ್ರೀನ್ ಮೇಲೆ ಡಿಸ್ಪ್ಲೇ ಆಗುತ್ತದೆ, ಅದರಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರದ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಬರುವಂತಹ ಪ್ರತಿಯೊಂದು ಗ್ರಾಮಗಳ ಹಾಗೂ ಪ್ರತಿಯೊಂದು ಗ್ರಾಮಗಳ ವಾರ್ಡ್ ಗಳ ಸಂಖ್ಯೆಯನ್ನು ಸಹ ಅಲ್ಲಿ ತೋರಿಸಲಾಗುತ್ತದೆ, ಅದರಲ್ಲಿ ನಿಮ್ಮದು ಯಾವ ಗ್ರಾಮದ ಯಾವ ವಾರ್ಡ್ ನಲ್ಲಿ ಬರುತ್ತದೆ ಆಪ್ಷನ್ ಮೇಲೆ ಕ್ಲಿಕ್ ಮಾಡಿ

election

ಆಗ ನೀವು ನಿಮ್ಮ ಗ್ರಾಮ ಹಾಗೂ ವಾರ್ಡ್ ನಂಬರ್ ಮುಂದೆ ಇರುವಂತಹ MR ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಗ್ರಾಮದ ಪರಿಷ್ಕೃತ ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

ಹೀಗೆ ಮಾಡುವ ಮೂಲಕ ಆನ್ಲೈನ್ ನಲ್ಲಿ ನೀವು ನಿಮ್ಮ ಗ್ರಾಮದ ಹಾಗೂ ನಿಮ್ಮ ವಾರ್ಡಿನ ಮತದಾರರ ಅಂತಿಮ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ಕೇವಲ ಎರಡು ನಿಮಿಷದಲ್ಲಿ ವೀಕ್ಷಿಸಬಹುದಾಗಿದೆ.

Read this also:

1.2019-23 ವರೆಗಿನ ಬೆಳೆ ವಿಮೆ ನಿಮಗೆ ಬಂದಿಲ್ಲವೇ? ಹಾಗಾದರೆ ಈ ಪಟ್ಟಿಯಲ್ಲಿ ಹೆಸರಿದ್ದರೆ ನಿಮಗೆ ಬರಲಿದೆ ಬೆಳೆ ವಿಮೆಯ ಹಣ

ಆತ್ಮೀಯ ರೈತ ಬಾಂಧವರೆ, 2019 ರಿಂದ 2023 ವರೆಗಿನ ಬೆಳೆ ವಿಮೆ ನಿಮ್ಮ ಖಾತೆಗಳಿಗೆ ಜಮಯಾಗಿಲ್ಲವೇ, ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ, ಸರ್ಕಾರವು 2019 ರಿಂದ 2023ರ ವರೆಗಿನ ಬೆಳೆ ವಿಮೆ ಜಮಾ ಆಗದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಾವು ಹೇಳುವ ಕೆಲಸವನ್ನು ಮಾಡುವ ಮೂಲಕ ನೀವು ನಿಮ್ಮ ಬೆಳೆ ವಿಮೆಯ ಹಣವನ್ನು ಪಡೆಯಬಹುದಾಗಿದೆ.

2.ನನ್ನ ಖಾತೆಗೆ ಬೆಳೆ ವಿಮೆಯ ಹಣ ಜಮಾ: ನಿಮ್ಮ ಖಾತೆಗೂ ಜಮಯಿ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಇಂದು ರೈತರಿಗೆ ಸುದಿನ ಎಂದೇ ಹೇಳಬಹುದು, ಯಾಕೆಂದರೆ ಇಂದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೇಳಿ ಬೆಳೆವಿಮೆ ಮಾಡಿದಂತಹ ರೈತರಿಗೆ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು, ನನ್ನ ಖಾತೆಗೆ ಬೆಳಗಿದ್ದು ನಿಮ್ಮ ಖಾತೆಗೂ ಜಮಯಿ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ.

For more information visit www.krishisuddi.com

 

2 thoughts on “2023 ರ ಅಂತಿಮ ಮತಪಟ್ಟಿ ಬಿಡುಗಡೆ : ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ”

Leave a Comment