loan

ಆತ್ಮೀಯ ಬಾಂಧವರೇ, ನಿಮಗೆ ಸಾಲದ ಅವಶ್ಯಕತೆ ಇದೆಯೇ? ಹಾಗಾದರೆ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಸಾಲವನ್ನು(loan) ನೀಡುತ್ತಿದ್ದು, ನಿಮಗೂ ಸಾಲ ಬೇಕಾದಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ೨೦೨೩-೨೪ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆಗಳನ್ನು  ಅನುಷ್ಠಾನಗೊಳಿಸಲಾಗುತ್ತಿದೆ.

ಈ ಯೋಜನೆಗಳಡಿ ಸಾಲ-ಸೌಲಭ್ಯವನ್ನು > ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆನ್‌ಲೈನ್ ವಿಳಾಸ:

kacdc. karnataka.gov.in

ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೧೮ ಕೊನೆಯ ದಿನವಾಗಿದೆ.

ಅರ್ಹತೆಗಳು :

ಆಸಕ್ತರು ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು,

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-ಜಿ ಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು),

ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು

ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.

ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು,

ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು.

ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.೩೩%, ವಿಕಲಚೇತನರಿಗೆ ಶೇ.೫% ಹಾಗೂ ತೃತೀಯ ಲಿಂಗಳಿಗೆ ಶೇ.೫% ಮೀಸಲಾತಿ ಇರಿಸಿದೆ.

ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. (ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮಾತ್ರ ಇಬ್ಬರಿಗೆ ಅವಕಾಶವಿರುತ್ತದೆ.)

ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?

ಹೆಚ್ಚಿನ ವಿವರಗಳಿಗಾಗಿ ನಿಗಮದ ಸಹಾಯವಾಣಿ: ೯೪೪೮೪ ೫೧೧೧೧ ಗದಗ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆ: ಬೆಳಿಗ್ಗೆ:೧೦.೦೦ ರಿಂದ ಸಂಜೆ:೫.೩೦ ವರೆಗೆ ಸಂಪರ್ಕಿಸಬಹುದಾಗಿದೆ.

ಯೋಜನೆಗಳ ಮಾರ್ಗಸೂಚಿಗಳು, ಸಲ್ಲಿಸಬೇಕಾದ ದಾಖಲೆಗಳು, ಜಿಲ್ಲಾ ವ್ಯವಸ್ಥಾಪಕರಕಛೇರಿ ಜಿಲ್ಲಾ ಆಡಳಿತ ಭವನ ರೂ.ನಂ:೨೦೨, ೨ನೇ ಮಹಡಿ, ಗದಗ ಜಿಲ್ಲೆ ಹಾಗೂ ಎಲ್ಲಾ ವಿವರಗಳನ್ನು

http://www.kacdc.karnataka.gov.in

ಇಲ್ಲಿ ತಿಳಿಯಬಹುದಾಗಿದೆ.

Read this also:

1.ನನ್ನ ಖಾತೆಗೆ ಇಂದು ಎರಡನೇ ತಿಂಗಳ ಅನ್ನಭಾಗ್ಯ ಯೋಜನೆಯ 510 ರೂಪಾಯಿಗಳು ಜಮೆ? ನಿಮ್ಮ ಖಾತೆಗೂ ಜಮೆಯಾಗಿದೆಯೇ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಘೋಷಿಸಿದಂತಹ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.

ಈಗಾಗಲೇ ಶಕ್ತಿ ಯೋಜನೆ, ಗೃಹಜೋತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈಗ ಅನ್ನ ಭಾಗ್ಯ ಯೋಜನೆಯ ಹಣವು ಕೂಡ ಖಾತೆಗಳಿಗೆ ಜಮಯಾಗುತ್ತಿವೆ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :https://ahara.kar.nic.in/

2.Karnataka gruhalakshmi yojana: ಇದೆ ತಿಂಗಳ 30 ರಂದು ರಾಜ್ಯದ ಮಹಿಳೆಯರ ಖಾತೆಗೆ 2000 ರೂಪಾಯಿಗಳು ಬಿಡುಗಡೆ

ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರ  ತಾವು ಘೋಷಿಸಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ karnataka gruhalakshmi yojana ಜಾರಿಗೆ ತರುವ ಮೂಲಕ  ನುಡಿದಂತೆ ನಡೆದಿದೆ.

ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಂತಹ  ಅರ್ಹ ಮಹಿಳೆಯರಿಗೆ  ಪ್ರತಿ ತಿಂಗಳು 2000ಗಳನ್ನು ಅವರ ಖಾತೆಗಳಿಗೆ Direct benefit transfer ಮೂಲಕ ಜಮೆ ಮಾಡಲಾಗುವುದು.

Gruhalakshmi scheme official website

https://sevasindhugs.karnataka.gov.in/

3.Gruhalakshmi ಯೋಜನೆಯಡಿ 2000 ರೂಪಾಯಿ ಪಡೆಯುವವರ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಘೋಷಿಸಿದಂತಹ ಗ್ಯಾರಂಟಿಗಳಲ್ಲಿ  ಒಂದಾದಂತಹ Gruhalakshmi ಯೋಜನೆಯು ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದ್ದು, ಈ ಯೋಜನೆಯಡಿ ಈಗಾಗಲೇ ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

https://ahara.kar.nic.in/WebForms/Show_Village_List.aspx

4.ಬೆಳ ಸಮಿಕ್ಷೆ ಮತ್ತೆ ಪ್ರಾರಂಭ: ಬೆಳೆ ವಿಮೆ ಬರಬೇಕೆಂದರೆ ಕೂಡಲೇ ನೀವು ಬೆಳೆದಂತಹ ಬೆಳೆಯನ್ನು ಬೆಳೆ ಸಮೀಕ್ಷೆ ಮಾಡಿ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು ಇದೀಗ ಮುಂಗಾರು ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು, ಇನ್ನು ಕೂಡ ಬೆಳೆ ಸಮೀಕ್ಷೆ ಮಾಡದಂತಹ ರೈತರು ಆದಷ್ಟು ಬೇಗ ಬೆಳೆ ಸಮೀಕ್ಷೆ ಮಾಡಬೇಕಾಗಿ ವಿನಂತಿ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ ರೈತರು ಬೆಳೆ ವಿವರಗಳನ್ನು ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಮೇಲೆ ತಿಳಿಸಿದ ಸಂಪರ್ಕಿಸಬಹುದು ಮೊ/8448447715 ಗೆ ಕರೆ ಮಾಡಲು ಕೋರಿದೆ.

✳️ *ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ*. 👇

https://play.google.com/store/apps/details?id=com.csk.farmer23_24.cropsurvey

🎥 *ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಬಳಸುವ ವಿಧಾನಕ್ಕಾಗಿ ಈ ಕೆಳಗಿನ ಮಾರ್ಗದರ್ಶಿ ವಿಡಿಯೋ ನೋಡಿ.* 👇

*https://youtu.be/12y0D8uyTMs*

👉 *ಬೆಳೆ ಸಮೀಕ್ಷೆ ಪ್ರಕಾರ ನಿಮ್ಮ ಜಮೀನಿನಲ್ಲಿ ದಾಖಲಾದ ಬೆಳೆ ವಿವರದ ಮಾಹಿತಿಯನ್ನು *ಬೆಳೆ ದರ್ಶಕ 2023* ಅಪ್ಲಿಕೇಶನ್ ನಲ್ಲಿ ಪರಿಶೀಲಿಸಿಕೊಳ್ಳಿ. 👇

*https://play.google.com/store/apps/details?id .crop.offcskharif_2023*

👉 ಬೆಳೆ ಸಮೀಕ್ಷೆಗೆ ಬಳಸುವ *ಬೆಳೆ ಕೋಡ್* ಗಳನ್ನು ಈ ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಿ.👇https://drive.google.com/file/d/1BMliO5N8g3eJYOQ7wb6k4jdi3IbHKZoH/view

 

5.ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾಡ್ ೯ದಾರರ ಖಾತೆಗೆ 2ನೇ ಕಂತಿನ ಹಣ :ನಿಮ್ಮ ಖಾತೆಗೂ ಜಮೆಯಾಗಿದೆಯೋ ಈಗಲೇ ಚೆಕ್ ಮಾಡಿಕೊಳ್ಳಿ

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾಡ್ ೯ದಾರರ ಖಾತೆಗೆ 2ನೇ ಕಂತು ಹಣ ಸಂದಾಯವಾಗುತ್ತಿದೆ. ರಾಜ್ಯಾದ್ಯಂತ 1.03 ಕೋಟಿ ಕಾರ್ಡ್‌ಗಳಿದ್ದು, 3.69 ಕೋಟಿ ಫಲಾನುಭವಿಗಳಿಗೆ 605 ಕೋಟಿ ರೂ. ಪಾವತಿಸಬೇಕಿದೆ.

31 ಜಿಲ್ಲೆಗಳ ಪೈಕಿ ಬೀದರ್, ಚಿತ್ರದುರ್ಗ, ದಾವಣಗೆರೆ ಹಾಗೂ ರಾಮನಗರ ಫಲಾನುಭವಿಗಳಿಗೆ ಹಣ ಪಾವತಿಸಲಾಗಿದ್ದು, ಮುಂದಿನ ಐದು ದಿನಗಳಲ್ಲಿ ಉಳಿದ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವುದಾಗಿ ಆಹಾರ ಇಲಾಖೆಮಾಹಿತಿ ನೀಡಿದೆ.

ಮಾಹಿತಿ ಇಷ್ಟವಾದಲ್ಲಿ ಇತರರಿಗೂ ಶೇರ್ ಮಾಡಿ

 ಹಾಗೂ ಇತರ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು ಕೆಳಗಡೆ ಕಾಣುವಂತ ಚಿತ್ರದ ಮೇಲೆ ಕ್ಲಿಕ್ ಮಾಡಿ

krishisuddi whatsapp group

 

By Raju

Leave a Reply

Your email address will not be published. Required fields are marked *