CROP INSURANCE

ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ? ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

 ಕರ್ನಾಟಕ ರಾಜ್ಯದ್ಯಂತ ಈ ವರ್ಷ ಬರಗಾಲ ಬಿದ್ದಿದ್ದು, ಮುಂಗಾರು ಬೆಳೆಗಳು ಸಂಪೂರ್ಣ ನಾಶವಾಗಿದ್ದು ಈ ಬೆಳೆಗಳಿಗೆ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ( Pradhan Mantri fasal Bima Yojana )  ಅಡಿಯಲ್ಲಿ ಬೆಳೆ ವಿಮೆ ( Crop Insurance )  ತುಂಬಿದ್ದರು. 

ಈಗಾಗಲೇ ಗದಗ್ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಹೆಸರು ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು. ಅದೇ ರೀತಿ ಉಳಿದ ಬೆಳಗಳಿಗೆ ವಿಮೆ ಮಾಡಿಸಿದಂತಹ ರೈತರ ಖಾತೆಗಳಿಗೆ ಕೂಡ ಶೀಘ್ರದಲ್ಲೇ ವಿಮೆಯ ಹಣ ಹಾಕುವ ಸಂಭವವಿದೆ.

ಬೆಳೆಗಳ ಆನೆವರಿ ಮುಗಿದ ಮೇಲೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.

 ಇದೇ ರೀತಿ ರೈತರ ಹಿಂಗಾರು ಬೆಳಗಳಿಗೂ ಕೂಡ ಬೆಳೆ ವಿಮೆ ತುಂಬಲು ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಮಾಹಿತಿಗೆ ಕೆಳಗಿನ ಲೇಖನವನ್ನು ಓದಿ.

ಯಾವ  ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ತುಂಬಬಹುದು?

ರಾಗಿ (ಮಳೆಆಶ್ರಿತ) ಮತ್ತು ಕಡಲೇ (ಮಳೆಆಶ್ರಿತ) ಬೆಳೆಗಳನ್ನು ಗ್ರಾಪಂ ಮಟ್ಟಕ್ಕೆ ಹಾಗೂರಾಗಿ (ನೀರಾವರಿ), ಹುರುಳಿ (ಮಳೆಆಶ್ರಿತ), ಭತ್ತ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ).

ಆಯ ಜಿಲ್ಲೆಗಳಿಗೆ ಬೇರೆ ಬೇರೆ ಬೆಳೆಗಳಿದ್ದು ಹಾಗೂ ಅರ್ಜಿ ಸಲ್ಲಿಸಲು ಬೇರೆ ಬೇರೆ ಕೊನೆಯ ದಿನಾಂಕಗಳಿವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಕೂಡಲೇ ಕೆಳಗೆ ನೀಡಿರುವಂತಹ ಬೆಳೆ ವಿಮೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಜಿಲ್ಲೆಯ ಮಾಹಿತಿಯನ್ನು ಪಡೆಯಬೇಕಾಗಿ ವಿನಂತಿ.

 ಬೆಳೆ ವಿಮೆಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

http://www.samrakshane.karnataka/

 ನೋಂದಣಿಯನ್ನು ಎಲ್ಲಿ ಮಾಡುವುದು?

ಪ್ರಸ್ತುತ ಬ್ಯಾಂಕ್‌, ಕರ್ನಾಟಕಒನ್‌, ಗ್ರಾಮ ಒನ್‌ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ರೈತರು ಭೇಟಿ ನೀಡಿ ತಮ್ಮ ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ತುಂಬಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

ಪಹಣಿ,

ಕಂದಾಯ

ಬ್ಯಾಂಕ್‌ ಪಾಸ್‌ ಪುಸ್ತಕ

ಆದಾರ್‌ ಕಾರ್ಡ್‌ ದಾಖಲೆಗಳೊಂದಿಗೆ  ಕರ್ನಾಟಕ ಒನ್‌, ಗ್ರಾಮ ಒನ್‌ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ತುಂಬಬಹುದು.

ಹಿಂಗಾರು ಬೆಳೆ ವಿಮೆ(CROP INSURANCE) ತುಂಬಲು  ಲಾಸ್ಟ ಡೇಟ್ ಯಾವಾಗ?

 ಹಿಂಗಾರು ಬೆಳೆಗಳಾದ ರಾಗಿ (ನೀರಾವರಿ), ಹುರುಳಿ(ಮಳೆಆಶ್ರಿತ), ಭತ್ತ(ನೀರಾವರಿ) ಬೆಳೆಗಳಿಗೆ ನೊಂದಾಯಿಸಲು ನವೆಂಬರ್‌ 15 ಕೊನೆಯ  ದಿನಾಂಕವಾಗಿರುತ್ತದೆ ಮತ್ತು ಜೋಳ(ಮಳೆ ಆಶ್ರಿತ), ರಾಗಿ(ಮಳೆಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ(ಮಳೆ ಆಶ್ರಿತ), ಕಡಲೇ (ಮಳೆಆಶ್ರಿತ) ಬೆಳೆಗಳಿಗೆ ನೊಂದಾಯಿಸಲು ಡಿಸೆಂಬರ್ 1 ನೇ ತಾರೀಕ ಕೊನೆಯ ದಿನಾಂಕವಾಗಿರುತ್ತದೆ.

 ರಾಜ್ಯದಲ್ಲಿ ಮಳೆ ಯಾಗದ ಕಾರಣ ಸಂಪೂರ್ಣ ಬರಗಾಲ ಬಿದ್ದಿದ್ದು, ಬೆಳೆ ವಿಮೆ ತುಂಬಿದ ಎಲ್ಲಾ ರೈತರಿಗೂ ಈ ವರ್ಷದ ಬೆಳೆ ವಿಮೆ ಯೋಜನೆಯ ಹಣವನ್ನು ನೀಡುವುದು ಬಹುತೇಕ ಖಚಿತವಾಗಿದೆ.

ಆದ್ದರಿಂದ ಪ್ರತಿಯೊಬ್ಬ ರೈತರು ತಮ್ಮ ಹಿಂಗಾರು ಬೆಳೆಗಳಿಗೂ ಕೂಡ ಬೆಳೆ ವಿಮೆಯನ್ನು ತುಂಬಿ ಇದರ ಲಾಭವನ್ನು ಪಡೆದುಕೊಳ್ಳಿ.

Read this also:

1.Mailara Lingeshwar Karnika 2023: ರೈತರ ಕಷ್ಟದ ಬಗ್ಗೆ ಭವಿಷ್ಯ ಹೇಳಿದ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ.

“ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್”! ಎಂಬ ನುಡಿಯನ್ನು ಐತಿಹಾಸಿಕ ಸ್ಥಳವಾದ ದೇವರಗುಡ್ಡದ ಗೊರವಜ್ಜನ ಕಾರ್ಣಿಕ ಇದಾಗಿದೆ. ಈ ನುಡಿಯು ರೈತರ ಬರಗಾಲದ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದವರು ಹೇಳಿದ್ದಾರೆ.

2.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

 

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

4.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

4.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

 

By Raju

47 thought on “ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?”

Leave a Reply

Your email address will not be published. Required fields are marked *