bank

ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರೈತರ ಬೆಳೆಸಾಲವನ್ನು ಕಾಲಮಿತಿಯಲ್ಲಿ ಪುನರ್ ರಚಿಸಬೇಕು. ರೈತರಿಗೆ ಸಾಲ ತುಂಬುವಂತೆ ಒತ್ತಾಯಿಸದಂತೆ, ನೋಟಿಸ್‌ ನೀಡದಂತೆ ಸರ್ಕಾರ ಸೂಚಿಸಿದೆ. ಆದರೂ ಕೆಲ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ನೀಡುತ್ತಿರುವುದು ಕಂಡುಬಂದಿದೆ. ಅಂಥ ಬ್ಯಾಂಕುಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಸಿದರು.

ಬುಧವಾರ ಆಯೋಜಿಸಿದ್ದ ಬ್ಯಾಂಕರ್ಸ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಮಿತಿ ಸಭೆ ಮತ್ತು ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇಲಾಖೆಗಳ ಶಿಫಾರಸು ಬಂದ ತಕ್ಷಣ ವಿಳಂಬ ಮಾಡದೆ ಸಾಲ ಮಂಜೂರು ಆಗಬೇಕು, ಗುರಿಯ ಪ್ರಗತಿಯನ್ನು ಪ್ರತಿ ಬ್ಯಾಂಕ್ ಗಳು ಸಾಧಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನವೂ ವಿಳಂಬವಾಗಬಾರದು ಎಂದು ಸೂಚಿಸಿದರು.

ಜಿಲ್ಲಾ ಅಗಣೀಯ ಬ್ಯಾಂಕ್‌ ವ್ಯವಸ್ಥಾಪಕ ಪ್ರಭುದೇವ ಎನ್‌.ಜಿ. ಮಾತನಾಡಿ, ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಗುರಿಗೆ ಅನುಗುಣವಾಗಿ ಕಲಸ ಮಾಡುತ್ತಿವೆ. ಸಬ್ಸಿಡಿ ಹಣ ಬಿಡುಗಡೆಯಾದ ತಕ್ಷಣ ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು ಎಂದರು. 

ನಬಾರ್ಡ್ ಮಯೂರ ಕಾಂಬಳೆ ಮಾತನಾಡಿ, 2023- 24ನೇ ಸಾಲಿನ ಪಿಎಲ್‌ಪಿಯ 14,400 ಕೋಟಿ ರೂ. ಗುರಿಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ 6,542 ಕೋಟಿ ರೂ. ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು, ರಿಸರ್ವ್ ಬ್ಯಾಂಕ್ ಪ್ರತಿನಿಧಿ ಈಲಾ ಸಾಹೂ ಮಾತನಾಡಿ, ರೈತರ ಬೆಳೆ ಸಾಲವನ್ನು ಅದಷ್ಟು ಬೇಗ ಕೃಷಿ ಸಾಲವಾಗಿ ಪುನರ್ ರಚನೆ ಮಾಡಿ, ಬರಗಾಲದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಹೇಳಿದರು.

ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ವಿ. ಶ್ರೀಹರಿ ವೇದಿಕೆಯಲ್ಲಿ ಇದ್ದರು. ಧಾರವಾಡ ಜಿಲ್ಲಾ ನಬಾರ್ಡ್ ರೂಪಿಸಿರುವ 2024- 25ನೇ ಸಾಲಿನ ಸಂಭಾವ್ಯ ಲಿಂಕ್ ಕ್ರೆಡಿಟ್ ಪ್ಯಾನ್ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು, ವಿವಿಧ ನಿಗಮ, ಮಂಡಳಿ, ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Read this also:

 ಆತ್ಮೀಯ ರೈತ ಬಾಂಧವರೇ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ 126.75 ಕೋಟಿ ಮಧ್ಯಂತರ ಬೆಳೆವಿಮೆ ಬಿಡುಗಡೆಯಾಗಿದೆ.

 ಇದು ಕರ್ನಾಟಕ ರಾಜ್ಯದ ಸಂಪೂರ್ಣ ಸುದ್ದಿಯಲ್ಲ ಇದು ಕೇವಲ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾದಂತ ಹಾವೇರಿ ಜಿಲ್ಲೆಗೆ ಬಿಡುಗಡೆಯಾದಂತಹ ಮಧ್ಯಂತರ  ಬೆಳವಿಮೆಯ ಹಣ. 

ಹಾವೇರಿ ಜಿಲ್ಲೆಯ ಆದಂತಹ ಎಲ್ಲಾ ತಾಲೂಕಿನ ರೈತರಿಗೆ ಬೆಳೆ ವಿಮೆಯ ಶೇಕಡ 25ರಷ್ಟು ಹಣವನ್ನು ಮಧ್ಯಂತರ ಬೆಳೆ ವಿಮೆಯ ಹಣವಾಗಿ ರೈತರ ಖಾತೆಗಳಿಗೆ  ಜಮಾ ಮಾಡಲಾಗಿದೆ.

ಅಧಿಕಾರಿಗಳು ನೀಡಿದಂತಹ ಸಮಯದಲ್ಲಿ ಮಾಡಿದಂತಹ ಅಚ್ಚುಕಟ್ಟಿನ ಕೆಲಸದಿಂದಾಗಿ ಹಾವೇರಿ ಜಿಲ್ಲೆ, ಇಡೀ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಧ್ಯಂತರ ಬೆಳೆ ವಿಮೆ ಹಣವನ್ನು ಪಡೆದಂತಹ ಜಿಲ್ಲೆಯಾಗಿದೆ.

126.75 ಕೋಟಿ ರೂಪಾಯಿಗಳಲ್ಲಿ ಈಗಾಗಲೇ 40 ಕೋಟಿ ರೂಪಾಯಿ ರೈತರ ಖಾತೆಗಳಿಗೆ ಬಿಡುಗಡೆಯಾಗಿದ್ದು,  ಮುಂದಿನ ಹಂತಗಳಲ್ಲಿ 40 ಕೋಟಿ ರೂಪಾಯಿ ಹಾಗೂ ಉಳಿದ ಹಣವನ್ನು ಕೂಡ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಬರ ಪರಿಹಾರದ ಕುರಿತು ಮಾಹಿತಿ:

ಮಾಹಿತಿ ನೀಡಿದಂತಹ ಸಚಿವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ನೀಡಲು ಬರ  ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು ಕೇಂದ್ರ ಸರ್ಕಾರ ಏನ್ ಡಿ ಆರ್ ಎಫ್ ಅಡಿ ಬರ ಪರಿಹಾರವನ್ನು ಬಿಡುಗಡೆ ಮಾಡಿದ ತಕ್ಷಣವೇ ರಾಜ್ಯ ಸರ್ಕಾರವು ಕೂಡ ಎಸ್ ಡಿ ಆರ್ ಎಫ್ ಅಡಿ ಹಣವನ್ನು ಬಿಡುಗಡೆ ಮಾಡಿ ರೈತರಿಗೆ ಬರ ಪರಿಹಾರದ ಹಣವನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದರು.

ಆನ್ಲೈನ್ ಮೂಲಕ ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಪರಿಹಾರ ಪೇಮೆಂಟ್ ಎಂದು ಸರ್ಚ್ ಮಾಡಿ

 ಡೈರೆಕ್ಟ್ ಲಿಂಕ್: https://landrecords.karnataka.gov.in/PariharaPayment/

ಅಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ,  ನಿಮ್ಮ ಬಳಿ ಪರಿಹಾರ ಐಡಿ ಇದ್ದರೆ ಪರಿಹಾರ ಐಡಿ ಮೇಲೆ ಕ್ಲಿಕ್ ಮಾಡಿ ಅಥವಾ ಆಧಾರ್ ನಂಬರ್ ಮೇಲೆ ಕ್ಲಿಕ್ ಮಾಡಿ

parihara

ಅಲ್ಲಿ ಕೇಳುವಂತ ಎಲ್ಲ ಮಾಹಿತಿಯನ್ನು ನಮೂದಿಸಿ ಹೆಚ್ಚು ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

 ಆಗ ಅಲ್ಲಿ ನೀವು ನಿಮ್ಮ ಯಾವ ಖಾತೆಗೆ ಎಷ್ಟು ಪರಿಹಾರದ ಹಣ ಯಾವಾಗ ಜಮೆಯಾಗಿದೆ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

ಆನ್ಲೈನ್ ಮೂಲಕ ನಿಮ್ಮ ಖಾತೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಜಮೆಯಾಗಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ನಿಮಗೆ ನಿಮ್ಮ ಖಾತೆಗಳಿಗೆ ಎಷ್ಟು ಹಣ ಯಾವಾಗ ಯಾವ ಖಾತೆಗೆ ಜಮೆಯಾಗಿದೆ ಎಂದು ಅಲ್ಲಿ ನೀವು ವೀಕ್ಷಿಸಬಹುದಾಗಿದೆ.

 

By Raju

Leave a Reply

Your email address will not be published. Required fields are marked *