ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯ :ರೈತರು ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಿಸಲು ಮನವಿ

ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ೨೦೨೩-೨೪ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದ್ದು ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ..

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಹೆಸರು, ಮುಸುಕಿನ ಜೋಳ, ಶೇ೦ಗಾ, ಸೂರ್ಯಕಾಂತಿ, ಭತ್ತ, ಸೇರಿದಂತೆ ಇನ್ನಿತರ ಬೆಳೆಗಳನ್ನು ಸಮೀಕ್ಷೆ ನಡೆಸಲು ಅವಕಾಶ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ೨೦೨೩-೨೪ ಆಪ್ ಮೂಲಕ ರೈತರು ಬೆಳೆದ ಬೆಳೆಗಳನ್ನು ದಾಖಲಿಸಬಹುದು.

ಈ ಸಮೀಕ್ಷೆಯಿಂದ ಕೃಷಿ ತೋಟಗಾರಿಕೆ ರೇಷ್ಮೆಬೆಳೆಗಳ ವಿಸ್ತೀರ್ಣ ಲೆಕ್ಕಹಾಕುವ ಕಾರ್ಯದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ ಹಾಗೂ ಬೆಳೆ ವಿಮಾ ಯೋಜನೆ ಸರ್ವೆ ನಂಬರ್‌, ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಯೋಜನೆಯಡಿ ಕೈಗೊಳ್ಳಲು ಬೆಂಬಲ ಬೆಲೆ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗುತ್ತದೆ.

ಮುಂಗಾರು ರೈತರ ಬೆಳೆ ಸಮೀಕ್ಷೆ ೨೦೨೩-೨೪ ಮೊಬೈಲ್ ಆಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಎಂದು ಡೌಪ್ಲೋಡ್ ಮಾಡಿಕೊಂಡು ಆಧಾರ್ ಕ್ಯೂಆರ್ ಕೋಡ್ ಅನ್ನು ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು ಒಟಿಪಿಯನ್ನು ದಾಖಲಿಸಬೇಕು ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಮಾಲೀಕರ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ ಸರ್ವೇ ನಂಬರುವಾರು ರೇಖೆಯೊಳಗೆ ನಿಂತು ವಿವರ ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಬಹುದು

ಈ ಕಾರ್ಯಕ್ಕಾಗಿ ಖಾಸಗಿ ನಿವಾಸಿಗಳ ಸಹಾಯ ಪಡೆಯಲು ಹಾಗೂ ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಅಥವಾ ೮೪೪೮೪೪೭೭೧೫ ಗೆ ಸಂಪರ್ಕಿಲು ಕೋರಲಾಗಿದೆ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಸಿದ್ದಾರೆ.

ತ್ಮೀಯ ರೈತ ಬಾಂಧವರೇ ನಾವು ಬೆಳೆ ವಿಮೆ ಮಾಡಿಸಿದ ನಂತರ ನಾವು ನಮ್ಮ ಹೊಲದಲ್ಲಿ ಆ ಬೆಳೆಯನ್ನು ಬೆಳೆದಿದ್ದೇವೆ ಎಂಬ ಸಾಕ್ಷಿಗಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವಂತಹ ಮುಂಗಾರು ಬೆಳೆ ಸಮೀಕ್ಷೆ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಲೇಬೇಕು.

ಬೆಳೆ ಸಮೀಕ್ಷೆ app ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ :

https://play.google.com/store/apps/details?id=com.csk.farmer23_24.cropsurvey

೨೦೨೩-೨೪ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಖುದ್ದಾಗಿ ಗೂಗಲ್ ಪ್ಲೇಸ್ಟೋರ್‌ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ ೨೦೨೩” ನ್ನು ಡೌನ್ ಲೋಡ್ ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕಾಗಿದೆ.

Crop survey

ಸರ್ಕಾರದ ಪ್ರಕಟಣೆ :

👉 *ನಿಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನೀವೇ ಬೆಳೆ ಸಮೀಕ್ಷೆ ಮಾಡಿ, ಅಪ್ಲೋಡ್ ಮಾಡಿ*.*ಬೆಳೆ ಸಮೀಕ್ಷೆ ಮಾಹಿತಿ ಸರಿಯಾಗಿ ದಾಖಲಾದಲ್ಲಿ ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಖರೀದಿ ಕೇಂದ್ರದಲ್ಲಿ ಉತ್ಪನ್ನ ನೀಡಲು ಮತ್ತು ಬೆಳೆ ಸಾಲ ಪಡೆಯಲು ತೊಂದರೆಯಾಗುವುದಿಲ್ಲ*.

👉 ಬೆಳೆ ಸಮೀಕ್ಷೆ ಪ್ರಕಾರ ದಾಖಲಾದ ಬೆಳೆ ವಿವರ ನಿಮ್ಮ *ಪಹಣಿಯಲ್ಲಿ ನಮೂದಾಗುತ್ತದೆ*.

💁🏻‍♂️ *ಬನ್ನಿ… ಇಂದೇ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿಕೊಳ್ಳಿ…* 🤳🏻

✳️ *ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ*. 👇

https://play.google.com/store/apps/details?id=com.csk.farmer23_24.cropsurvey

🎥 *ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಬಳಸುವ ವಿಧಾನಕ್ಕಾಗಿ ಈ ಕೆಳಗಿನ ಮಾರ್ಗದರ್ಶಿ ವಿಡಿಯೋ ನೋಡಿ.* 👇

*https://youtu.be/12y0D8uyTMs*

👉 *ಬೆಳೆ ಸಮೀಕ್ಷೆ ಪ್ರಕಾರ ನಿಮ್ಮ ಜಮೀನಿನಲ್ಲಿ ದಾಖಲಾದ ಬೆಳೆ ವಿವರದ ಮಾಹಿತಿಯನ್ನು *ಬೆಳೆ ದರ್ಶಕ 2023* ಅಪ್ಲಿಕೇಶನ್ ನಲ್ಲಿ ಪರಿಶೀಲಿಸಿಕೊಳ್ಳಿ. 👇

*https://play.google.com/store/apps/details?id .crop.offcskharif_2023*

👉 ಬೆಳೆ ಸಮೀಕ್ಷೆಗೆ ಬಳಸುವ *ಬೆಳೆ ಕೋಡ್* ಗಳನ್ನು ಈ ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಿ.👇

https://drive.google.com/file/d/1BMliO5N8g3eJYOQ7wb6k4jdi3IbHKZoH/view

Read this also :

1.ಇದುವರೆಗೂ ಗೃಹಜೋತಿ ಯೋಜನೆ ಅಡಿ ನೋಂದಣಿ ಮಾಡಿದವರು ಎಷ್ಟು ಜನ ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ? ನೀವು ಬೇಗ ಬೇಗ ನೋಂದಣಿ ಮಾಡಿ

ಆತ್ಮೀಯ ಬಾಂಧವರೇ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ನೀಡಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಗೃಹ ಜ್ಯೋತಿ ಯೋಜನೆ ಅಡಿ ಎರಡು ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತಹ ಯೋಜನೆ ಯಾದ ಈ ಯೋಜನೆಯಲ್ಲಿ ಇದುವರೆಗೆ ಎಷ್ಟು ಜನ ನೋಂದಣಿ ಮಾಡಿದ್ದಾರೆ ನಿಮಗೆ ಗೊತ್ತಾ.

ಕೇಳಿದರೆ ಶಾಕ್ ಆಗ್ತೀರಾ, ನಿನ್ನೆ ರಾತ್ರಿ 8 ಗಂಟೆಯವರೆಗೆ ಅಂದರೆ ಜೂನ್ 23 ರಾತ್ರಿ 8 ಗಂಟೆಗಳವರೆಗೆ 32.45 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ.

2.ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಮ್ಮ ಮೊಬೈಲ್ ಮೂಲಕವೇ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆತ್ಮೀಯ ಬಾಂಧವರೇ, ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ಗೃಹಜೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

3.ಪಿಎಂ ಕಿಸಾನ 14 ನೇ ಕಂತಿನ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇ ಬೇಕು :ಇಲ್ಲದಿದ್ದರೆ ನೀವು 2000 ರೂಪಾಯಿ ಕಳೆದುಕೊಳ್ಳುತ್ತಿರಾ

ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ನೀವು ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ e-kyc ಮಾಡಿಸಲೇಬೇಕಾಗಿದೆ

4.ಯಾವ ಬೆಳೆಗಳಿಗೆ ಬೆಳೆ ವಿಮೆ ಮಾಡಿದರೆ ಹಣ ಬರುತ್ತದೆ ಎಂದು ತಿಳಿಯುತ್ತಿಲ್ಲವೇ? ಹಾಗಾದರೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯಗಳು ಪ್ರಾರಂಭವಾಗಿದ್ದು,

5.ಪ್ರತಿಯೊಬ್ಬ ರೈತರು 27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.

Leave a Comment