pmfby

ಆತ್ಮೀಯ ರೈತ ಬಾಂಧವರೇ,2021-22 ನೇ ಸಾಲಿನ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆಯಡಿ ಬೆಳೆ ಸಮೀಕ್ಷೆ ಹೊಂದಾಣಿಕೆ ಆಗದ ರೈತರ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಅಂತಹ ರೈತರಿಗೆ ಬೆಳೆಯುಮೆ ಬರುವುದಿಲ್ಲ, ಬರಬೇಕಾದರೆ ಅವರು ಕಡ್ಡಾಯವಾಗಿ ಈ ಕೆಲಸವನ್ನು ಮಾಡಲೇಬೇಕು.

ಏನು ಮಾಡಬೇಕು?

ಆತ್ಮೀಯ ರೈತ ಬಾಂಧವರೇ, ನೀವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆಗಳಿಗೆ ಬೆಳೆವಿಮೆ ಮಾಡಿಸುವಾಗ ಒಂದು ಬೆಳಗ್ಗೆ ಬೆಳೆ ವಿಮೆ ಮಾಡಿಸಿ, ಹಾಗೂ ಸಮೀಕ್ಷೆ ಮಾಡುವಾಗ ಬೇರೊಂದು ಬೆಳೆಯನ್ನು ಬೆಳೆದಿದ್ದೇನೆ ಎಂದು ಬೆಳೆ ಸಮೀಕ್ಷೆ ಮಾಡಿದ್ದಲ್ಲಿ, ಆಗ ಅದು ಕ್ರಾಪ್ ಮಿಸ್ ಮ್ಯಾಚ್ ಎಂದು ಬರುತ್ತದೆ ಹಾಗೂ ನಿಮ್ಮ ಖಾತೆಗಳಿಗೆ ಬೆಳೆವಿಮೆಯ ಹಣ ಜಮೆ ಆಗುವುದಿಲ್ಲ.

ಉದಾಹರಣೆಗೆ :

ಬಸಪ್ಪ ಎಂಬ ರೈತನು ತನ್ನ 5 ಎಕರೆ ಜಮೀನಿನಲ್ಲಿ ಹೆಸರನ್ನು ಬೆಳೆದಿರುತ್ತಾನೆ, ಹಾಗೂ ಗ್ರಾಮದ PR ಸಹಾಯದಿಂದ ಹೆಸರು ಬೆಳೆಯನ್ನು ಬೆಳೆದಿದ್ದೇನೆ ಎಂದು ಬೆಳೆ ಸಮೀಕ್ಷೆಯನ್ನು ಕೂಡ ಮಾಡಿಸಿರುತ್ತಾನೆ, ಆದರೆ ಬೆಳೆಯುವ ಮೀನು ಮಾಡಿಸುವಾಗ ಶೇಂಗಾ ಬೆಳೆಯನ್ನು ಬೆಳೆಯಮೆ ಮಾಡಿಸುತ್ತಾನೆ.

ಈಗಾದಲ್ಲಿ ನಾವು ಬೆಳೆಮೆ ಮಾಡಿಸಿದಂತಹ ಬೆಳೆ ಹಾಗೂ ಬೆಳೆ ಸಮೀಕ್ಷೆ ಮಾಡಿದಂತಹ ಬೆಳೆ ಬೇರೆ ಬೇರೆಯಾದಾಗ ಕ್ರಾಪ್ ಮಿಸ್ ಎಂದು ಬರುತ್ತದೆ ಹಾಗೂ ನಾವು ಮಾಡಿಸಿದಂತಹ ವಿಮೆಯ ಹಣ ನಮ್ಮ ಖಾತೆಗಳಿಗೆ ಜಮೀನಾಗುವುದಿಲ್ಲ.

ಇದೀಗ ಈ ತಪ್ಪನ್ನು ತಿದ್ದಿಕೊಂಡು ಬೆಳೆಯಮೆಯನ್ನು ಪಡೆಯಲು ಸರ್ಕಾರವು ಬಂದು ಅವಕಾಶವನ್ನು ನೀಡಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಬೆಳೆವಿಮೆಯ ಹಣವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

ಮೊಟ್ಟಮೊದಲಿಗೆ ನಿಮ್ಮ ಸಂಬಂಧ ಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಕೃಷಿ ಅಧಿಕಾರಿಗಳು ಕಚೇರಿಯಿಂದ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಹೋಂದಾಣಿಕೆ ಆಗದ ಪಟ್ಟಿಯನ್ನು ಗಮನಿಸಿ.

ಅದರಲ್ಲಿ ನಿಮ್ಮ ಹೆಸರಿದ್ದರೆ, ಆಗ ನೀವು ಒಂದು ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು : applocation-format.pdf

ಮೇಲೆ ನಮೂದಿಸಿದಂತಹ ಅರ್ಜಿಯನ್ನು ಪಡೆದ ಅದರಲ್ಲಿರುವ ಮಾಹಿತಿಯನ್ನು ನಮೂದಿಸಿ ಮಾಹಿತಿಯನ್ನು ತುಂಬಿ.

1. ಅರ್ಜಿ ಸಂಖ್ಯೆ :ನೀವು ಬೆಳೆ ವಿಮೆಯನ್ನು ತುಂಬಿದಾಗ ನೀಡುವಂತಹ ಅಪ್ಲಿಕೇಶನ್ number ಅನ್ನು ನಮೂದಿಸಿರಿ.

2. ರೈತನ ಹೆಸರು :ಅರ್ಜಿ ಸಲ್ಲಿಸಿದಂತಹ ರೈತನ ಹೆಸರನ್ನು ನಮೂದಿಸಿ.

3. ಗ್ರಾಮ :ಗ್ರಾಮ ವನ್ನು ನಮೂದಿಸಿ

4. ಗ್ರಾಮ ಪಂಚಾಯತಿ : ನಿಮ್ಮ ಗ್ರಾಮ ಯಾವ ಗ್ರಾಮ ಪಂಚಾಯಿತಿ ಅಡಿ ಬರುತ್ತದೆ ಆ ಗ್ರಾಮ ಪಂಚಾಯತಿಯನ್ನು ನಮೂದಿಸಿ.

5. ಬೆಳೆ ವಿಮೆ ತುಂಬಿದ ಬೆಳೆ :ನೀವು ಬೆಳೆವಿಮೆ ಮಾಡಿಸುವಾಗ ಯಾವ ಬೆಳೆಗೆ ಬೆಳೆವಿಮೆ ಮಾಡಿಸಿರ್ತಿರೋ ಆ ಬೆಳೆಯ ಹೆಸರನ್ನು ನಮೂಡಿಸಿ.

6. ಬೆಳೆ ಸಮೀಕ್ಷೆಯಲ್ಲಿ ದಾಖಲಿಸಿದ ಬೆಳೆ : ನೀವು ನಿಮ್ಮ ಮೊಬೈಲ್ ನಲ್ಲಿ ರೈತರ ಬೆಳೆ ಸಮೀಕ್ಷೆ ಆಪ್ ಮೂಲಕ ಯಾವ ಬೆಳೆಯನ್ನು ಬೆಳೆಯಮೆ ಮಾಡಿರುತ್ತೀರೋ ಆ ಬೆಳೆಯ ಹೆಸರನ್ನು ನಮೂದಿಸಿ

7. ಹೋಬಳಿ : ನಿಮ್ಮ ಗ್ರಾಮ ಯಾವ ಹೋಬಳಿ ಅಡಿ ಬರುತ್ತದೆ ಆ ಹೋಬಳಿಯ ಹೆಸರನ್ನು ನಮೂದಿಸಿ

8. Mobile ಸಂಖ್ಯೆ : ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

ಹೀಗೆ ಈ ಅರ್ಜಿ ನಮೂನೆಯನ್ನು ತುಂಬಿದ ನಂತರ ಕೆಳಗಡೆ ಇರುವಂತಹ ಮಾಹಿತಿ ಏನೆಂದರೆ, ಇಂತಿ ರೈತನಾದ ನಾನು ಈ ಬೆಳೆಯನ್ನು ಬೆಳೆಯಮೆಯನ್ನು ಮಾಡಿಸಿದ್ದು, ಹಾಗೂ ನನ್ನ ಹೊಲದಲ್ಲಿಯೂ ಕೂಡ ಅದೇ ಬೆಳೆಯನ್ನು ಬೆಳೆದಿರುತ್ತೇನೆ, ಆದರೆ ಬೆಳೆ ಸಮೀಕ್ಷೆ ಮಾಡುವಾಗ ತಪ್ಪಾಗಿ ಬೇರೆ ಬೆಳೆಯನ್ನು ಸಮೀಕ್ಷೆ ಮಾಡಲಾಗಿದೆ ಎಂಬುದನ್ನು ಈ ಮೂಲಕ ದೃಢೀಕರಿಸುತ್ತೇನೆ ಎಂಬುದನ್ನು ನಾವು ಹೇಳುತ್ತೇವೆ.

ಪ್ರಮುಖವಾಗಿ ರೈತರು ಗಮನಿಸಬೇಕಾದಂತಹ ವಿಷಯವೇನೆಂದರೆ,

ಕೇವಲ ಈ ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ಬೆಳೆಯುಮೆಯ ಹಣ ಬರುವುದಿಲ್ಲ, ಆದರೆ ಇದರೊಂದಿಗೆ ಸರ್ಕಾರವು ನಿಗದಿಪಡಿಸಿರುವಂತಹ ಕೆಳಗೆ ತಿಳಿಸುವ ಮೂರು ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆ ಇದ್ದರೆ ಮಾತ್ರ ನಿಮ್ಮ ಅರ್ಜಿಯನ್ನು ಗಣನೆಗೆ ತೆಗೆದುಕೊಂಡು ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

1) 2021-22 ನೇ ಸಾಲಿನ ಉತಾರ- ವಿಮಾ ತುಂಬಿರುವ ಬೆಳೆಯ ಹೆಸರು ನಮೂದಾಗಿರಬೇಕು.

ಅಥವಾ

2) ಕನಿಷ್ಠ ಬೆಂಬಲ ಬೆಲೆ ರಸೀದಿ ಅಥವಾ

3) ಎ.ಪಿ.ಎಂ.ಸಿ ಮಾರುಕಟ್ಟೆ ರಸೀದಿ

ಆತ್ಮೀಯ ರೈತ ಬಾಂಧವರೇ, ನೀವೇನಾದ್ರೂ ಬೆಳೆ ವಿಮೆಯನ್ನು ಮಾಡಿಸಿ, ಬೆಳೆ ಸಮೀಕ್ಷೆ ಮಾಡುವಾಗ ತಪ್ಪಾಗಿ ಮಾಡಿ ಪ್ರಾಕ್ಟೀಸ್ ಮ್ಯಾಚ್ ಆಗಿದ್ದರೆ ಕೂಡಲೇ ಈ ಸದುಪಯೋಗವನ್ನು ಪಡೆದುಕೊಂಡು ಬೆಳೆ ವಿಮೆಯ ಹಣವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

ಗದಗ ಜಿಲ್ಲೆ ಗದಗ ತಾಲೂಕಿನ ಬೆಟಿಗೇರಿ ಹೋಬಳಿಯ ಅಡಿಯಲ್ಲಿ ಬರುವಂತಹ ಗ್ರಾಮಗಳ ತಿರಸ್ಕೃತ ಪಟ್ಟಿಗಳನ್ನು ಡೌನ್ಲೋಡ್ ಮಾಡಲು ಕೆಳಗಡೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ

1. kharif-2021-22-mismatch-2.pdf

2. Rabi 2021-22 mismatch (1)

 

By Raju

Leave a Reply

Your email address will not be published. Required fields are marked *