ನಮಸ್ಕಾರ ಆತ್ಮೀಯ ರೈತ ಬಾಂಧವರೇ  ಮುಂಗಾರು ಹಂಗಾಮಿನ  ಬೆಳೆ ನಷ್ಟ ಪರಿಹಾರದಡಿ 34,053 ರೈತರಿಗೆ 34.99 ಕೋಟಿ ರೂ. ಬೆಳೆ ವಿಮೆ.ಹಾಗೂ ಮಧ್ಯಂತರ ನಷ್ಟ ಪರಿಹಾರದಡಿ 46,879 ರೈತರಿಗೆ 49.09 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ

ಗದಗ: ಮುಂಗಾರು ಹಂಗಾಮಿನ ಹೆಸರು ಬೆಳೆ ನಷ್ಟ ಪರಿಹಾರದಡಿ ಜಿಲ್ಲೆಯ 34,053

ರೈತರಿಗೆ 34.99 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದೆ. ಈವರೆಗೆ 33,593 ರೈತರಿಗೆ 34.59 ಕೋಟಿ ರೂ. ಪರಿಹಾರದ ಖಾತೆಗೆ ಜಮೆ ಆಗಿದೆ. ಬಾಕಿ ಇರುವ 457 ರೈತರಿಗೆ ಆಧಾ‌ರ್, ಎನ್‌ಪಿಸಿಐ ಜೋಡಣೆ ಕಾರಣಗಳಿಂದ ಮೊತ್ತ ಪಾವತಿ ಆಗಿರುವುದಿಲ್ಲ. 

ಇದೇ ವೇಳೆ ಮುಸುಕಿನ ಜೋಳ, ಶೇಂಗಾ, ಹತ್ತಿ ಹಾಗೂ ಈರುಳ್ಳಿ ಬೆಳೆಗಳಿಗೆ ಮಧ್ಯಂತರ ನಷ್ಟ ಪರಿಹಾರದಡಿ 46,879 ರೈತರಿಗೆ 49.09 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಈವರೆಗೆ 46,134 ರೈತರ ಖಾತೆಗೆ 48.30 ಕೋಟಿ ರೂ. ಪರಿಹಾರ ಜಮೆ ಮಾಡಲಾಗಿದೆ. ಬಾಕಿ ಇರುವ 745 ರೈತರ ಆಧಾರ್, ಎನ್‌ಪಿಸಿಐ ಜೋಡಣೆ ಕಾರಣಗಳಿಂದಾಗಿ ವಿಮಾ ಮೊತ್ತ ಪಾವತಿ ಆಗುವುದು ಬಾಕಿ ಇದೆ ಎಂದು ಪ್ರಕಟಣೆ ತಿಳಿಸಿದೆ.

Crop Insurance details on survey NO:ನಿಮ್ಮ ಹೊಲದ ಸರ್ವೆ ನಂಬರ್ ಹಾಕಿ ಬೆಳೆ ವಿಮಾ ಜಮಾ ಮತ್ತು ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಸಂರಕ್ಷಣೆ ಎಂದು ಸರ್ಚ್ ಮಾಡಿ ಅಥವಾ ಟೈಪ್ ಮಾಡಿ:

 ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://samrakshane.karnataka.gov.in/

Step 1:ಅಲ್ಲಿ ನಿಮಗೆ ಒಂದು ಹೊಸ ಓಪನ್ ಆಗುತ್ತೆ ಅದರಲ್ಲಿ ನೀವು ಬೆಳೆ ವಿಮೆ ಮಾಡಿಸಿರ್ತಕ್ಕಂತ ಋತು, ವರ್ಷ ಹಾಕಿ ಗೋ (GO)ಬಟನ್ ಅನ್ನು ಒತ್ತಿ

  • ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ
  • ವರ್ಷ 2023-24
  •  ಋತು ಮುಂಗಾರು( kharif)
  • ಮುಂದೆ/GO ಬಟನನ್ನು ಒತ್ತಿ

Step 2: ಅದಾದ ನಂತರ ನಿಮಗೆ ಮತ್ತೊಂದು ಹೊಸ ವಿಂಡೋ ಓಪನ್ ಆಗುತ್ತೆ, ಅಲ್ಲಿ ನೀವು ಫಾರ್ಮರ್ ಕಾರ್ನರ್ ಅಡಿಯಲ್ಲಿ ಇರುವಂತಹ Crop Insurance details on survey NO ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ.

Step 3:ನಂತರ ನೀವು ನಿಮ್ಮ ಜಮೀನಿನ ಜಿಲ್ಲೆ ತಾಲೂಕು ಹಾಗೂ ಹೋಬಳಿ  ಮತ್ತು ಸರ್ವೆ ನಂಬರನ್ನು ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಆ ಸರ್ವೇ ನಂಬರ್ ಅಲ್ಲಿ ಸರ್ವೆ ನಂಬರಲ್ಲಿ ಬೆಳೆ ವಿಮೆ ತುಂಬಿರುವ ಸ್ಟೇಟಸ್ ಅನ್ನು ನೋಡಬಹುದು. 

Bara Parihara list released:ಬರ ಪರಿಹಾರ ಪಟ್ಟಿ ಬಿಡುಗಡೆ: ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ: ಬರ ಪರಿಹಾರ ಪಟ್ಟಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್ ನಲ್ಲಿಯೆ ಆಧಾರ್ ನಂಬರ್ ಹಾಕಿ FID ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬರ ಪರಿಹಾರ ಪಟ್ಟಿ :ಅರ್ಹ ರೈತರ ಬರ ಪರಿಹಾರ ಪಡೆಯುವವರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ: ಬರ ಪರಿಹಾರ ಪಟ್ಟಿ ನೋಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ .

ಹಂತ 1:  ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಕ್ರೋಮ್ ಗೆ ಭೇಟಿ ನೀಡಿ. ನಂತರ ಸರ್ಚ್ ಆಪ್ಷನ್ ನಲ್ಲಿ

            F I D ಎಂದು ಟೈಪ್ ಮಾಡಿ. ಅಥವಾ ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

Direct link – https://fruitspmk.karnataka.gov.in/MISReport/GetDetailsByAadhaar.aspx

step 2. ಮೇಲಿನ ಲಿಂಕ್ ಕ್ಲಿಕ್ ಮಾಡಿದ ಮೇಲೆ ನಿಮಗೆ ಫ್ರೂಟ್ಸ್ ಐಡಿಯ ಅಧಿಕೃತ ಜಾಲತಾಣ ಕಾಣುತ್ತದೆ. ಅಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಎಂಟರ್ ಮಾಡಿ ( Enter your Adhar number ).

Step 3. ಆಧಾರ್ ನಂಬರ್ ಎಂಟರ್ ಮಾಡಿದ ಮೇಲೆ ಸರ್ಚ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಫಾರ್ಮರ್ ಡಿಟೇಲ್ಸ್

( Farmer Details ) ಎಂಬ ಮುಖಪುಟ ತೆರೆದುಕೊಳ್ಳುತ್ತದೆ.

ಈ ರೀತಿ ಆಧಾರ್ ಕಾರ್ಡ್ ಹಾಕಿ search ಮಾಡಿದ ಮೇಲೆ ನಿಮಗೆ ನಿಮ್ಮ ಫ್ರೂಟ್ ಐಡಿ 16 ಅಂಕಿಯ ಎಫ್ ಐಡಿ ನಂಬರ್ ಅನ್ನು ತೋರಿಸಿದರೆ ನೀವು ಬರ ಪರಿಹಾರ ಪಡೆಯುವ ಅರ್ಹ ರೈತರು ಎಂದು ಅರ್ಥ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಹಾಕಿ search ಬಟನ್ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ನಂಬರ್ ಈ ಲಿಸ್ಟ್ ನಲ್ಲಿ ಇಲ್ಲ ಎಂದು ಅಥವಾ no data ಎಂದು ತೋರಿಸಿದರೆ ನಿಮಗೆ ಯಾವುದೇ ಮಾಹಿತಿಯನ್ನು ತೋರಿಸಲಿಲ್ಲವೆಂದರೆ ನೀವು ಬರ ಪರಿಹಾರ ಪಡೆಯುವವರ ಪಟ್ಟಿಯಲ್ಲಿ ಇರುವುದಿಲ್ಲ. ನೀವು ಬರ ಪರಿಹಾರ ಪಡೆಯಬೇಕೆಂದರೆ ಕೂಡಲೇ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಹಾಗೂ ನಿಮ್ಮ ಎಲ್ಲಾ ಜಮೀನಿನ ಪಹಣಿ ಸಮೇತ ಭೇಟಿ ಮಾಡಿ.FID  ನಂಬರನ್ನು ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ನಿಮಗೆ ಬರ ಪರಿಹಾರ ಮತ್ತು ಸರ್ಕಾರದ ಇತರ ಸೌಲಭ್ಯಗಳು ದೊರೆಯಲಿವೆ.

By Raju

3 thought on “ಬೆಳೆ ನಷ್ಟ ಪರಿಹಾರ ರೈತರ ಖಾತೆಗೆ ಜಮೆ: 34,053 ರೈತರಿಗೆ 34.99 ಕೋಟಿ ರೂ. ಬೆಳೆ ವಿಮೆ.ಹಾಗೂ ಮಧ್ಯಂತರ ನಷ್ಟ ಪರಿಹಾರದಡಿ 46,879 ರೈತರಿಗೆ 49.09 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ”

Leave a Reply

Your email address will not be published. Required fields are marked *