crop insurance: 15 ದಿನಗಳಲ್ಲಿ ರೈತರ ಖಾತೆಗಳಿಗೆ ಬೆಳೆವಿಮೆ ಹಣ ಬಿಡುಗಡೆ: ನಿಮ್ಮ ಖಾತೆಗೆ ಎಷ್ಟು ಜಮೆಯಾಗಲಿದೆ ಈಗಲೇ ಚೆಕ್ ಮಾಡಿಕೊಳ್ಳಿ

 ಆತ್ಮೀಯ ರೈತ ಬಾಂಧವರೇ, 2023 24ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಹೆಸರು ಬೆಳೆಗೆ ಬೆಳೆ ವಿಮೆ ( crop insurance) ಮಾಡಿಸಿದಂತಹ ರೈತರಿಗೆ ಈಗಾಗಲೇ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು ಇನ್ನೇನು ಹದಿನೈದು ದಿನಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಮಾಹಿತಿ ತಿಳಿದುಬಂದಿದೆ.

 ಒಟ್ಟು ಸಂಪೂರ್ಣ ಕರ್ನಾಟಕ ರಾಜ್ಯದಲ್ಲಿ ನಾವು ನೋಡುವುದಾದರೆ ಹೆಸರು ಬೆಳೆ ಬೆಳೆವಿಮೆಗಾಗಿ 42 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಅದರಲ್ಲಿ ಕರ್ನಾಟಕ ರಾಜ್ಯದ ಗದಗ್ ಜಿಲ್ಲೆಗೆ ಸಿಂಹಬಾಲು ಲಭಿಸಿದ್ದು ಒಟ್ಟು 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದೆ.

 ಗದಗ್ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಹೆಸರು ಬೆಳೆಯುವ ಕಾರಣಗಳಿಂದಾಗಿ ಅನೇಕರು ಹೆಸರು ಬೆಳೆಗೆ ಬೆಳೆ ವಿಮೆ ಮಾಡುತ್ತಿದ್ದರು ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಬೆಳೆ ವಿಮೆ ಹಣ ಹೆಸರು ಬೆಳೆಗೆ ಗದಗ್ ಜಿಲ್ಲೆಗೆ ದೊರೆತಿದೆ.

ಬೆಳೆ ವಿಮೆಯ ಮಾರ್ಗಸೂಚಿಗಳ ಪ್ರಕಾರ ಶೇಕಡ 25% ಗಿಂತ ಕಡಿಮೆ ಬಿತ್ತನೆ ಯಾದಲ್ಲಿ ಆ ಬೆಳೆಗೆ ಶೇಕಡ 25ರಷ್ಟು ಹಣವನ್ನು ರೈತರ ಖಾತೆಗಳಿಗೆ ಮೂಲಕ ಜಮೆ ಮಾಡಲಾಗುವುದು. ಅಂದರೆ ರೈತರು ಖಾತೆಗಳಿಗೆ ಪ್ರತಿ ಎಕರೆಗೆ 3325 ಇನ್ನೇನು15 ದಿನಗಳಲ್ಲಿ  ಜಮೆ ಜಮೆ ಮಾಡಲಾಗುವುದು.

ಆನ್ಲೈನ್ ಮೂಲಕ ( crop insurance) ಜಮೆ ಆಗಿರುವುದನ್ನು ಚೆಕ್ ಮಾಡುವುದು ಹೇಗೆ:

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

Read this aLSO:

1.ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ: 1200 ಬದಲಿ ಎಷ್ಟು ಗೊತ್ತಾ?

ಆತ್ಮೀಯ ಹಿರಿಯ ಬಾಂಧವರೇ,  60 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು,  ಇದೀಗ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು 1200 ಬದಲಿಗೆ ಎಷ್ಟು ಹಣ ಬರುತ್ತದೆ  ಗೊತ್ತಾ?

2.ಆನ್ಲೈನ್ ಮೂಲಕ ಉಚಿತವಾಗಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

 

Leave a Comment