crop insurance

ಕಳೆದ ವರ್ಷ ಪ್ರತಿ ಎಕರೆಗೆ 14 ಸಾವಿರ ರೂಪಾಯಿ ಬೆಳೆ ವಿಮೆ ಕ್ಲೇಮ್ ಆಗಿತ್ತು ಕೆಂಪು ಮೆಣಸಿನ ಕಾಯಿಗೆ? ಈ ವರ್ಷವು ಆಗುತ್ತಾ?

(crop insurance karnataka kannada.Samrakshane,crop insurance, samrakshane.karnataka.gov.in)

ಬೆಳೆ ವಿಮೆ (Crop insurance)

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ರೈತರಿಗೆ ಒಂದು ವರದಾನವಾಗಿದ್ದು ರೈತರಿಗೆ ಭೂಮಿಯಲ್ಲಿ ಸರಿಯಾದ ಬೆಳೆ ಬಾರದಿದ್ದಾಗ ಅದರ ತಕ್ಕಂತೆ ಬೆಳೆ ವಿಮೆಯ ಹಣ ಬಿಡುಗಡೆಯಾಗಿ ರೈತರ ಕಷ್ಟವನ್ನು ಕೊಂಚ ತಗ್ಗಿಸಿತ್ತು.

ಕಳೆದ ಬಾರಿ ನಾವು ನೋಡುವುದಾದರೆ ಗದಗ್ ಜಿಲ್ಲೆಯ ಬೆಟಿಗೇರಿ ಹೋಬಳಿಯಲ್ಲಿ ಮೆಣಸಿನಕಾಯಿ ಬೆಳೆವಿಮೆ ಮಾಡಿಸಿದಂತಹ ರೈತರಿಗೆ ಸನಿಹ 14,000 ಪ್ರತಿ ಎಕರೆಗೆ ಬೆಳೆ ವಿಮೆಯ ಹಣ ಬಿಡುಗಡೆಯಾಗಿತ್ತು, ಆದರೆ ಈ ಬಾರಿ ಏನಾಗುತ್ತದೆ ಎಂಬುದರ ಬಗ್ಗೆ ನಾವು ಕಾದ ನೋಡಬೇಕಾಗಿದೆ.

ಈಗಾಗಲೇ ಬೆಳೆವಿಮೆ ತುಂಬುವುದು ಕೊನೆಯ ಹಂತಕ್ಕೆ ಬಂದಿದ್ದು ಇನ್ನೇನು ಕೇವಲ ಎರಡು ದಿನಗಳಲ್ಲಿ ಅಂದರೆ ಅಗಸ್ಟ್ 16ರಂದು ಬೆಳೆವಿಮೆ ತುಂಬಲು ಕೊನೆಯ ದಿನಾಂಕವಾಗಿದ್ದು, ಹಾಗಾಗಿ ಬೆಳಗ್ಗೆ ಮಾಡಿಸದಂತಹ ರೈತರು ಆದಷ್ಟು ಬೇಗ ಬೆಳೆ ವಿಮೆ ಮಾಡಿಸಬೇಕಾಗಿ ವಿನಂತಿ.

ಈ ವರ್ಷವೂ ಕೂಡ ಬೆಳೆ ವಿಮೆ ಹಣ ಬಿಡುಗಡೆಯಾಗುತ್ತಾ? (Will crop insurance be released this year)

ಆತ್ಮೀಯ ರೈತ ಬಾಂಧವರೇ ನಾವು ಇಲ್ಲಿ ತಿಳಿದುಕೊಳ್ಳಬೇಕಾದಂತಹ ಒಂದು ವಿಷಯವೇನೆಂದರೆ, ಈ ವರ್ಷ ಬೆಳೆ ವಿಮೆ ಬಿಡುಗಡೆಯಾಗುತ್ತಾ ಇಲ್ಲವ ಎಂಬುದು ನಾವು ಮುಂಚೆ ಹೇಳಲು ಬರುವುದಿಲ್ಲ, ಬೆಳೆ ಕಟಾವಿನ ನಂತರ ಅಧಿಕಾರಿಗಳು ಅದರ ಮಾಹಿತಿಯನ್ನು ಬಿಡುಗಡೆ ಮಾಡುತ್ತಾರೆ.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕ್ರಾಪ್ ಕಟಿಂಗ್ ಎಸ್ಪಿರಿಮೆಂಟ್ ಮೂಲಕ ಇಳುವರಿ ಯನ್ನು ಕಂಡುಹಿಡಿಯುತ್ತಾರೆ, ಆ ಇಳುವರಿಯನ್ನು ಹಿಂದಿನ ಹಲವು ವರ್ಷಗಳ ಇಳುವರಿಗೆ ಹೋಲಿಸಿ ನೋಡುತ್ತಾರೆ, ಅದು ಕಡಿಮೆ ಇದ್ದರೆ ನಿಮಗೆ ಬೆಳೆವಿಮೆಯ ಹಣ ಬಿಡುಗಡೆಯಾಗುತ್ತದೆ, ಒಂದು ವೇಳೆ ಹೆಚ್ಚಿದ್ದರೆ ನಿಮಗೆ ನೀವು ತುಂಬಿದಂತಹ ಹಣ ವಾಪಸ್ ಬರುವುದಿಲ್ಲ ಎಂದರ್ಥ.

ಉದಾಹರಣೆಗೆ ಹಿಂದಿನ 10 ವರ್ಷಗಳ ಇಳುವರಿ 10 ಕ್ವಿಂಟಲ್ ಇದೆ ಎಂದು ತಿಳಿದುಕೊಳ್ಳೋಣ, ಈ ಬಾರಿಯ ಕ್ರಾಸ್ ಕಟಿಂಗ್ ಎಕ್ಸ್ಪರಿಮೆಂಟ್ ಮೂಲಕ ಬಂದಂತಹ ಇಳುವರಿ ಐದು ಕ್ವಿಂಟಲ್ ಆಗಿದ್ದರೆ, ನಿಮಗೆ ಶೇಕಡ 50ರಷ್ಟು ಬೆಳೆ ವಿಮೆಯ ಹಣ ಬಿಡುಗಡೆಯಾಗಲಿದೆ.

ಒಂದು ವೇಳೆ ಈ ವರ್ಷದ ಇಳುವರಿ 15 ಕ್ವಿಂಟಲ್ ಆಗಿದ್ದರೆ, ನಿಮಗೆ ಯಾವುದೇ ತರಹದ ಬೆಳೆ ವಿಮೆಯ ಹಣ ಬಿಡುಗಡೆಯಾಗುವುದಿಲ್ಲ.

ಮುಂದೆ ಏನಾಗುತ್ತದೆ ಎಂಬುದನ್ನು ಯಾರೂ ಬಲ್ಲರು, ಹಾಗಾಗಿ ನಮ್ಮ ಸೇಫ್ಟಿ ಯಲ್ಲಿ ನಾವು ಇರುವುದು ಮುಖ್ಯ, ಹಾಗಾಗಿ ಆತ್ಮೀಯ ರೈತ ಬಾಂಧವರೇ ತಾವು ಬೆಳೆದಿರುವಂತಹ ಯಾವುದೇ ಬೆಳೆಯಾಗಿರಲಿ, ಅದನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆವಿಮೆ ಮಾಡಿಸಿ ಹಾಗೂ ಅದು ಕಷ್ಟದ ಸಮಯದಲ್ಲಿ ನಿಮ್ಮನ್ನು ಕೈ ಹಿಡಿಯುತ್ತದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(Pradhan mantri fasal bhima yojana)

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗಾಗಿ ಬೆಳೆ ವಿಮಾ ಪದ್ಧತಿಯನ್ನು ಸರಳಗೊಳಿಸಲು ಜಿಲ್ಲೆಗೊಂದು ಕಂಪನಿಯನ್ನು ಸರ್ಕಾರವು ನೇಮಿಸಿದ್ದು, ನಿಮ್ಮ ಜಿಲ್ಲೆಯ ಕಂಪನಿ ಯಾವುದು ಎಂದು ಚೆಕ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ನಮ್ಮ ರಾಜ್ಯದಲ್ಲಿ ಇರುವಂತಹ ಇನ್ಸೂರೆನ್ಸ್ ಕಂಪನಿಗಳ ಪಟ್ಟಿ ಇಂತಿದೆ

Bajaj allianz GIC

SBI General Insurance

Future general India Insurance Company

HDFC ergo General Insurance Company Limited

Universal sompo GIC

SBI General Insurance

Agriculture insurance company of India

ICICI Lombard GIC

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

– ಮೊಟ್ಟ ಮೊದಲಿಗೆ ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

– ಡೈರೆಕ್ಟರ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.samrakshane.karnataka.gov.in/

insurance

ಆಗ ಓಪನ್ ಆಗುವಂತಹ ಹೊಸ ಟ್ಯಾಬ್ ನಲ್ಲಿ, ವರ್ಷ ಹಾಗೂ ಋತುವನ್ನು ಆಯ್ಕೆ ಮಾಡಿ ಸಮ್ಮಿಟ್ ಬಟನ್ ಮೇಲೆ ಒತ್ತಿ

– ಆಗ ನಿಮಗೆ ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ಓಪನ್ ಆಗುತ್ತದೆ

insurance

– ಅದರಲ್ಲಿ ಫಾರ್ಮರ್ಸ್ ವಿಭಾಗದಲ್ಲಿ know your Insurance Company ಎಂಬ ಆಕ್ಷನ್ ಮೇಲೆ ಕ್ಲಿಕ್ ಮಾಡಿ.

– ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

PMFBY

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕೇಂದ್ರ ಸರ್ಕಾರದ ಬಂದು ಅದ್ಭುತ ಯೋಜನೆಯಾಗಿದ್ದು, ಯೋಜನೆಯಡಿ ನಾವು ಬೆಳೆಯುವಂತಹ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ.

ನಾವು ನಮ್ಮ ಜೀವನದಲ್ಲಿ ನಮ್ಮ ವಾಹನಗಳಿಗೆ, ಮೊಬೈಲ್ ಗಳಿಗೆ ಹೇಗೆ ಹಲವಾರು ವಸ್ತುಗಳಿಗೆ ವಿಮೆಯನ್ನು ಮಾಡಿಸುತ್ತೇವೆ, ಆಗ ಅವುಗಳಿಗೆ ಏನಾದರೂ ಡ್ಯಾಮೇಜದಲ್ಲಿ ಇನ್ಸೂರೆನ್ಸ್ ಕಂಪನಿಯಿಂದ ನಮಗೆ ವಿಮೆ ಕ್ಲೇಮ್ ಆಗುತ್ತದೆ.

ಅದೇ ರೀತಿ ಹಲವಾರು ವರ್ಷಗಳಿಂದ ರೈತರ ಬೆಳೆಗಳು ಹಾನಿಯಾಗುತ್ತಿದ್ದು ರೈತರಿಗೆ ನೆರವಾಗಲು ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ರೈತರು ತಮ್ಮ ಹೊಲದಲ್ಲಿ ತಾವು ಬೆಳೆಯುವಂತಹ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು, ಹಾಗೂ ಮುಂದೆ ಬೆಳಗಳು ಆನೆಯದಲ್ಲಿ ರೈತರಿಗೆ ಜೆರಾಕ್ಸ್ ಕಂಪನಿಗಳ ವತಿಯಿಂದ ಬೆಳೆವಿಮೆ ಕ್ಲೇಮ್ ಆಗುತ್ತದೆ.

krishisuddi whatsapp group

By Raju

Leave a Reply

Your email address will not be published. Required fields are marked *