2019-23 ವರೆಗಿನ ಬೆಳೆ ವಿಮೆ ನಿಮಗೆ ಬಂದಿಲ್ಲವೇ? ಹಾಗಾದರೆ ಈ ಪಟ್ಟಿಯಲ್ಲಿ ಹೆಸರಿದ್ದರೆ ನಿಮಗೆ ಬರಲಿದೆ ಬೆಳೆ ವಿಮೆಯ ಹಣ

ಆತ್ಮೀಯ ರೈತ ಬಾಂಧವರೆ, 2019 ರಿಂದ 2023 ವರೆಗಿನ ಬೆಳೆ ವಿಮೆ ನಿಮ್ಮ ಖಾತೆಗಳಿಗೆ ಜಮಯಾಗಿಲ್ಲವೇ, ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ, ಸರ್ಕಾರವು 2019 ರಿಂದ 2023ರ ವರೆಗಿನ ಬೆಳೆ ವಿಮೆ ಜಮಾ ಆಗದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಾವು ಹೇಳುವ ಕೆಲಸವನ್ನು ಮಾಡುವ ಮೂಲಕ ನೀವು ನಿಮ್ಮ ಬೆಳೆ ವಿಮೆಯ ಹಣವನ್ನು ಪಡೆಯಬಹುದಾಗಿದೆ.

ಬೆಳೆ ವಿಮೆ ಬರದಿರಲು ಪ್ರಮುಖ ಕಾರಣಗಳೇನು?

– ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಮಾಡಿಸಿದಂತಹ ಬೆಳೆಯ ನಡುವೆ ವ್ಯತ್ಯಾಸ ಬಂದರೆ ಆ ರೈತರ ಖಾತೆಗಳಿಗೆ ಬೆಳೆಯುಮೆಯ ಹಣ ಜಮೆಯಾಗುವುದಿಲ್ಲ.
– ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗದಿದ್ದರೆ ಅಂತಹ ರೈತರ ಖಾತೆಗಳಿಗೂ ಬೆಳೆ ವಿಮೆಯ ಹಣ ಜಮೆಯಾಗುವುದಿಲ್ಲ

ಪಟ್ಟಿ ನಮಗೆ ಎಲ್ಲಿ ಸಿಗುತ್ತದೆ?

ರೈತ ಬಾಂಧವರೇ, ನೀವು ನಿಮ್ಮ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, 2019 ರಿಂದ 2023ರವರೆಗಿನ ಬೆಳೆ ವಿಮೆ ಜಮೆ ಆಗದಿರುವ ರೈತರ ಪಟ್ಟಿಯನ್ನು ನೀವು ಪಡೆಯಬಹುದಾಗಿದೆ, ಹಾಗೂ ಆ ಪಟ್ಟಿಯಲ್ಲಿ ಯಾವ ಕಾರಣಗಳಿಂದಾಗಿ ನಿಮಗೆ ಬೆಳೆವಿಮೆಯ ಹಣ ಬಂದಿಲ್ಲ ಎಂಬುದನ್ನು ಕೂಡ ನಮೂದಿಸಲಾಗಿರುತ್ತದೆ.

ಆಗ ಆ ಕಾರಣವನ್ನು ನೀವು ಗಮನಿಸಿ ಮುಂದೆ ನಾವು ತಿಳಿಸುವಂತಹ ಕೆಲಸಗಳನ್ನು ಮಾಡಿದರೆ ನೀವು ನಿಮ್ಮ ಬೆಳೆ ವಿಮೆಯ ಹಣಗಳನ್ನು ನಿಮ್ಮ ಖಾತೆಗಳಿಗೆ ಪಡೆಯಬಹುದಾಗಿದೆ.

Click here to download:NPCI to be decoded Gadag Taluk

ಆನ್ಲೈನ್ ಮೂಲಕ ನಿಮ್ಮ ಖಾತೆಗೆ ಬೆಳೆವಿಮೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?

ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

– ಮೊಟ್ಟಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ :https://www.samrakshane.karnataka.gov.in/

– ಮುಖ್ಯ ಪೇಜ್ ನಲ್ಲಿ ಬರುವಂತಹ ಆಪ್ಷನ್ ಗಳನ್ನು ಆಯ್ಕೆ ಮಾಡಿ

ವರ್ಷ :2022-23

ವೃತು :ಮುಂಗಾರು

– ಮೇಲೆ ತಿಳಿಸಿದಂತೆ ಆಯ್ಕೆಗಳನ್ನು ಆಯ್ಕೆ ಮಾಡಿ ಮುಂದೆ ಬಟನ್ ಕ್ಲಿಕ್ ಮಾಡಿ.

– ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

Samrakshane

– ಅಲ್ಲಿ ಫಾರ್ಮರ್ಸ್ ವಿಭಾಗದಲ್ಲಿ ಕಾಣುವಂತಹ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

– ಆಗೋಪನಾಗುವಂತ ಹೊಸ ಪೇಜ್ ನಲ್ಲಿ ನಿಮಗೆ ಮೂರು ಆಯ್ಕೆಗಳಿರುತ್ತವೆ

Samrakshane

:proposal number

:mobile number

:aadhar number

– ಅದರಲ್ಲಿ ಪ್ರಪೋಸಲ್ ನಂಬರನ್ನು ಆಯ್ಕೆ ಮಾಡಿ

– ಕೆಳಗಡೆ ನಿಮ್ಮ ಅಪ್ಲಿಕೇಶನ್ ನಂಬರನ್ನು ನಮೂದಿಸಿ

– ಕ್ಯಾಚ್ ಪಕೋಡನು ಟೈಪ್ ಮಾಡಿ

– ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ

ಹೀಗೆ ಮಾಡುವ ಮೂಲಕ ನೀವು ಬೆಳೆ ವಿಮೆ ಮಾಡಿಸಿದಂತಹ ಬೆಳಗೆ ಎಷ್ಟು ವಿಮೆಯ ಹಣ ಜಮಯಾಗಿದೆ ಎಂಬುದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದಾಗಿದೆ.

ಸಂರಕ್ಷಣೆ ಪೋರ್ಟಲ್ಲಿ ಪೇಮೆಂಟ್ ಇನ್ನೂ ಪ್ರೋಗ್ರೆಸ್ ಅಂತ ಇದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅದು ಅಪ್ಡೇಟ್ ಆಗಲಿ

ಪ್ರಪೋಸಲ್ ನಂಬರ್ ಎಂದರೆ ಏನು?

ನೀವು ಬೆಳೆ ವಿಮೆಯನ್ನು ತುಂಬುವಾಗ ಅರ್ಜಿಯನ್ನು ಸಲ್ಲಿಸಿದ ಕ್ಷಣ, ಆಗ ನೀಡುವಂತಹ ಸ್ವೀಕೃತ ಕಾಫಿಯಲ್ಲಿ ಇರುವಂತಹ ಅಪ್ಲಿಕೇಶನ್ ನಂಬರಿಗೆ ಪ್ರಪೋಸಲ್ ನಂಬರ್ ಎಂದು ಕರೆಯುತ್ತಾರೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ನಮ್ಮ ದೇಶದ ಪ್ರಸ್ತುತ ಪ್ರಧಾನ ಮಂತ್ರಿಗಳಾದಂತಹ ಸನ್ಮಾನ್ಯ ನರೇಂದ್ರ ಮೋದಿಯವರು 2016 ರಲ್ಲಿ ಜಾರಿಗೆ ತಂದರು, ಯೋಜನೆಯ ಮೂಲಕ ನಾವು ನಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದಾಗಿದೆ.

ಹಾಗೆ ಮುಂದೆ ಅನಿರ್ದಿಷ್ಟಿತ ಕಾರಣಗಳಿಂದಾಗಿ ನಮ್ಮ ಬೆಳೆಗಳಿಗೆ ಹಾನಿ ಉಂಟಾಗಿ ಇಳುವರಿ ಕುಂಠಿತವಾದಲ್ಲಿ ಆ ಬೆಳಗಳಿಗೆ ಸರ್ಕಾರದಿಂದ ಬೆಳೆವಿಮೆ ಕ್ಲೇಮ್ ಆಗುತ್ತದೆ.

ಈ ಬಾರಿಯ ಮುಂಗಾರಿ ಹೆಂಗಾಮಿನಲ್ಲಿ ಅತಿವೃಷ್ಟಿಯೇ ಕಾರಣಗಳಿಂದಾಗಿ ರೈತರು ಬೆಳೆದಂತಹ ಬಹುತೇಕ ಬೆಳೆಗಳು ಹಾನಿಯಾಗಿದ್ದು, ಧಣಿಯಾದ ದಿನಗಳಿಗೆ ಇದೀಗ ಸರ್ಕಾರವು ಬೆಳೆ ವಿಮೆ ಹಣವನ್ನು ಕ್ಲೇಮ್ ಮಾಡಿದ್ದು ರೈತರಿಗೆ ಸಂತಸದ ಸುದ್ದಿಯನ್ನು ನೀಡಿದೆ

ಪ್ರತಿ ವರ್ಷವೂ ಕೂಡ ಮುಂಗಾರಿ ಹಂಗಾಮಿನ ಬಿತ್ತನೆ ಶುರುವಾಗುವ ಸಮಯದಲ್ಲಿ ಸರ್ಕಾರವು ಬೆಳೆ ಹಣವನ್ನು ಬಿಡುಗಡೆ ಮಾಡುತ್ತಿತ್ತು, ಆದರೆ ಈ ಬಾರಿ ಎರಡು ತಿಂಗಳು ಮುಂಚೆ ರೈತರ ಖಾತೆಗಳಿಗೆ ಬೆಳೆವಿಮೆ ಹಣವನ್ನು ಜಮೀನು ಮಾಡುವ ಮೂಲಕ ಸರ್ಕಾರವು ಮತ್ತೊಮ್ಮೆ ರೈತರ ನೆರವಿಗೆ ನಿಂತಿದೆ.

2 thoughts on “2019-23 ವರೆಗಿನ ಬೆಳೆ ವಿಮೆ ನಿಮಗೆ ಬಂದಿಲ್ಲವೇ? ಹಾಗಾದರೆ ಈ ಪಟ್ಟಿಯಲ್ಲಿ ಹೆಸರಿದ್ದರೆ ನಿಮಗೆ ಬರಲಿದೆ ಬೆಳೆ ವಿಮೆಯ ಹಣ”

Leave a Comment