ನಮಸ್ಕಾರ ಆತ್ಮೀಯರೇ ರೈತ ಬಾಂಧವರೇ  ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಈಗ ಮಧ್ಯಂತರ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ. ಹಾಗಾದರೆ ಕೂಡಲೇ ನಿಮ್ಮ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ ನಿಮ್ಮ ಸ್ಟೇಟಸ್ ಯಾವ ರೀತಿ ಇದೆ ಎಂದು ತಿಳಿದುಕೊಳ್ಳಿ.

ಈಗಾಗಲೇ ಕೆಲವೊಂದಿಷ್ಟು ರೈತರಿಗೆ ಮಧ್ಯಂತರ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗುತ್ತಿದ್ದು ಇನ್ನುಳಿದ ರೈತರಿಗೆ ಕೆಲವೇ ದಿನಗಳಲ್ಲಿ ಜಮಾ ಆಗಲಿವೆ.

ಕುಂದಗೋಳ ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆಗೆ ವಿಮೆ ಮಾಡಿಸಿದಂತಹ 4,256 ಹೆಕ್ಟರ್ ಮೆಣಸಿನಕಾಯಿ ಬೆಳೆಗೆ ಒಟ್ಟು ನಾಲ್ಕು ಕೋಟಿ 35 ಲಕ್ಷಗಳ ಮಧ್ಯಂತರ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು. ಒಟ್ಟು 5065 ರೈತರಿಗೆ ಪ್ರತಿ ಹೆಕ್ಟರಿಗೆ 10,237 ರೂಪಾಯಿಗಳಂತೆ ಮಧ್ಯಂತರ ಪರಿಹಾರ ಹಣವು ದೊರೆಯಲಿದೆ. ಹಾಗೂ ಈರುಳ್ಳಿ ಬೆಳೆ ವಿಮೆ ತುಂಬಿರುವ 115 ರೈತರಿಗೆ ಒಟ್ಟು 73 ಹೆಕ್ಟರ್ ಈರುಳ್ಳಿ ಪ್ರದೇಶವಿದ್ದು ಅವರಿಗೆ 11 ಲಕ್ಷ 77,000ಗಳಷ್ಟು ಮಧ್ಯಂತರ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಆಗುವುದು ಎಂದು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮಂಜುನಾಥ್ ಕುರೇಶಿ ಅವರು ತಿಳಿಸಿದರು.

ಈ ರೀತಿ ನಿಮ್ಮ ಸ್ಟೇಟಸ್ ಇದ್ದರೆ ನಿಮಗೆ ಬೆಳೆ ವಿಮೆ ಜಮಾಗಲಿದೆ.

ನೀವು ಮಾಡಿಸಿದ ಬೆಳೆ ವಿಮೆಯ ಸ್ಟೇಟಸ್ ಅನ್ನು ಚೆಕ್ ಮಾಡುವುದನ್ನು ಈ ಕೆಳಗಿನ ಲೇಖನಿಯಲ್ಲಿ ತಿಳಿಸಲಾಗಿದೆ.

ಈ ರೀತಿ ನಿಮಗೂ ನಿಮ್ಮ ಬೆಳೆಯುವ ಸ್ಟೇಟಸ್ ನಲ್ಲಿ Payment process in progress ಈ ರೀತಿ ಇದ್ದರೆ ನಿಮಗೆ ಇನ್ನೇನು ಕೆಲ ದಿನಗಳಲ್ಲಿ ಬೆಳೆ ವಿಮೆ ಹಾಗೂ ಮಧ್ಯಂತರ ಬೆಳೆವಿಮೆ ಜಮಾ ಆಗಲಿದೆ.

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ? 

ನಿಮ್ಮ ಮೊಬೈಲ್ ನಲ್ಲಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದನ್ನು ನೋಡೋಣ.

ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಸಂರಕ್ಷಣೆ ಎಂದು ಸರ್ಚ್ ಮಾಡಿ ಅಥವಾ ಟೈಪ್ ಮಾಡಿ:

 ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://samrakshane.karnataka.gov.in/

Step 1:ಅಲ್ಲಿ ನಿಮಗೆ ಒಂದು ಹೊಸ ಓಪನ್ ಆಗುತ್ತೆ ಅದರಲ್ಲಿ ನೀವು ಬೆಳೆ ವಿಮೆ ಮಾಡಿಸಿರ್ತಕ್ಕಂತ ಋತು, ವರ್ಷ ಹಾಕಿ ಗೋ (GO)ಬಟನ್ ಅನ್ನು ಒತ್ತಿ

  • ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ
  • ವರ್ಷ 2023-24
  •  ಋತು ಮುಂಗಾರು( kharif)
  • ಮುಂದೆ/GO ಬಟನನ್ನು ಒತ್ತಿ

Step 2: ಅದಾದ ನಂತರ ನಿಮಗೆ ಮತ್ತೊಂದು ಹೊಸ ವಿಂಡೋ ಓಪನ್ ಆಗುತ್ತೆ, ಅಲ್ಲಿ ನೀವು ಫಾರ್ಮರ್ ಕಾರ್ನರ್ ಅಡಿಯಲ್ಲಿ ಇರುವಂತಹ Crop Insurance details on survey NO ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಅಲ್ಲಿ ಮೊದಲನೇ ಆಪ್ಷನ್ ಆದಂತಹ ಪ್ರಪೋಸಲ್ ಮಾರ್ಕ್ ಮಾಡಿ ಅಥವಾ ಕ್ಲಿಕ್ ಮಾಡಿ

ನಂತರ ನಿಮ್ಮ ಪ್ರಪೋಸ ನಂಬರ (ಅಪ್ಲಿಕೇಶನ್ no) ಅಲ್ಲಿ ನಮೂದಿಸಿ ನಂತರ ಕ್ಯಾಚ್ ಅಪ್ ಕೋಡ್ ಟೈಪ್ ಮಾಡಿ ಸರ್ಚ್ ಬಟನ್ ಒತ್ತಿ.

ಅದಾದ ನಂತರ ನಿಮಗೆ ಯಾವ ಬೆಳೆಗೆ ನೀವು ಬೆಳೆ ವಿಮೆ ಮಾಡಿಸಿದ್ದೀರಿ ಹಾಗೂ ಎಷ್ಟು ರೂಪಾಯಿಗಳು ಮಧ್ಯಂತರ ಹಣ ನಿಮ್ಮ ಖಾತೆಗೆ ಬಿಡುಗಡೆಯಾಗಿದೆ ಎಂಬುದರ ಮಾಹಿತಿಯನ್ನು ನೀವು ಇದರ ಮೂಲಕ ಪಡೆಯಬಹುದು

ಈ ರೀತಿ ನಿಮಗೂ ನಿಮ್ಮ ಬೆಳೆಯುವ ಸ್ಟೇಟಸ್ ನಲ್ಲಿ Payment process in progress ಈ ರೀತಿ ಇದ್ದರೆ ನಿಮಗೆ ಇನ್ನೇನು ಕೆಲ ದಿನಗಳಲ್ಲಿ ಬೆಳೆ ವಿಮೆ ಹಾಗೂ ಮಧ್ಯಂತರ ಬೆಳೆವಿಮೆ ಜಮಾ ಆಗಲಿದೆ

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭವಾಗಿರುವ ಗೃಹಲಕ್ಷ್ಮಿ ಕ್ಯಾಂಪ್.

ಇದೇ ಡಿಸೆಂಬರ್ 27ರಿಂದ 29 ರವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರ ಆಯೋಜಿಸಲಾಗಿದೆ ಈ ಶಿಬಿರದಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಹಣ ಜಮಾ ಮಾಡುವ ನಿಟ್ಟಿನಲ್ಲಿ  ಈ ಶಿಬಿರವನ್ನು ಆಯೋಜಿಸಲಾಗಿದೆ.

👉How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://krishisuddi.com/how-to-check-all-lands-are-connected-to-fid-number/

👉ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

https://krishisuddi.com/last-date-for-fid/

By Raju

4 thought on “Crop insurance check status : ಮಧ್ಯಂತರ ಬೆಳೆ ವಿಮೆ ಬಿಡುಗಡೆ! ಈಗಲೇ ನಿಮ್ಮ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ, ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.”

Leave a Reply

Your email address will not be published. Required fields are marked *