ಹಿoಗಾರಿ ಬೆಳೆ ವಿಮೆ ಮಾಡಿಸಿದಂತಹ ಬೆಳೆ ಹಾಗೂ ಬೆಳೆ ಸಮೀಕ್ಷೆ ಮಾಡಿದಂತಹ ಬೆಳೆ ಕರೆಕ್ಟಾಗಿ ಇದೇಯೂ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ನಿಮಗೆ ಬೆಳವಿಮೆ ಬರಬೇಕೆಂದರೆ ನೀವು ಬೆಳೆ ವಿಮೆ ಮಾಡಿಸಿದಂತಹ ಬೆಳೆಯು ಹಾಗೂ ಬೆಳೆ ಸಮೀಕ್ಷೆ ಮಾಡಿಸಿದಂತಹ ಬೆಳೆಯು ಹೊಂದಾಣಿಕೆ ಆಗಬೇಕು, ಒಂದು ವೇಳೆ ಅದು ಬದಲಾಗಿದ್ದರೆ ನಿಮಗೆ ಕ್ರಾಪ್ ಮಿಸ್ ಮ್ಯಾಚ್ ಎಂದು ಬರುತ್ತದೆ ಹಾಗೂ ನೀವು ಬೆಳೆ ವಿಮೆ ಮಾಡಿಸಿದರೆ ನಿಮಗೆ ಬೆಳವಿಮೆಯ ಹಣ ಬರುವುದಿಲ್ಲ.

ಹಾಗಾದರೆ ಬನ್ನಿ ಅದನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ?

ಮೊಟ್ಟಮೊದಲು ನಾವು ಯಾವ ಬೆಳೆಗಳಿಗೆ ಬೆಳೆಮೆ ಮಾಡುತ್ತಿದ್ದೇವೆ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ:https://www.samrakshane.karnataka.gov.in/

ವರ್ಷ-2022

ಋತು -ಹಿಂಗಾರಿ /rabi

ಆಯ್ಕೆ ಮಾಡಿ ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

crop insurance and crop survey

ಆಗ ಕೆಳಗಡೆ ಫಾರ್ಮರ್ಸ್ ವಿಭಾಗದಲ್ಲಿ ಕಾಣುವಂತಹ Crop Insurance detail on survey number ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಆಗ ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಗ್ರಾಮ ಹಾಗೂ ಸರ್ವೆ ನಂಬರ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ, ಈ ಮೂಲಕ ನೀವು ಆ ಸರ್ವೇ ನಂಬರ್ ನಲ್ಲಿ ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದೀರಿ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ.

ಮುಂದೆ ನಾವು ಬೆಳೆ ಸಮೀಕ್ಷೆ ಮಾಡಿದಂತಹ ಬೆಳೆ ಯಾವುದು ಎಂಬುದನ್ನು ಮೊಬೈಲ್ ಮೂಲಕ ಚೆಕ್ ಮಾಡುವುದು ಹೇಗೆ?

ಸರ್ಕಾರವು ಬಿಡುಗಡೆ ಮಾಡಿದಂತಹ ಬೆಳೆ ದರ್ಶಕ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ

ಆಪ್ ಡೌನ್ಲೋಡ್ ಮಾಡಲು ಈಗ ನಿಮ್ಮ ಲಿಂಕ್ ಮೇಲೆ ಕ್ಲಿಕ್ ಮಾಡಿ :https://play.google.com/store/apps/details?id=com.crop.offcskharif_2021

ಆಯಾಪನ್ನು ಓಪನ್ ಮಾಡಿದ ಮೇಲೆ ಅಲ್ಲಿಯೂ ಕೂಡ ನೀವು ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಸರ್ವೆ ನಂಬರನ್ನು ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ಹೊಲದ ಬೆಳೆ ಸಮೀಕ್ಷೆಯನ್ನು ಯಾರು ಮಾಡಿದ್ದಾರೆ ಎಂದು ತೋರಿಸುತ್ತದೆ.

ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೊಲದಲ್ಲಿ ಯಾವ ಬೆಳೆಗಳಿಗೆ ಬೆಳೆ ಸಮೀಕ್ಷೆ ಮಾಡಿದ್ದೀರಿ ಎಂಬ ಮಾಹಿತಿ ನಿಮಗೆ ಸಿಗುತ್ತದೆ.

ಈ ಮೂಲಕ ನಾವು ತಿಳಿಸುವುದೇನೆಂದರೆ, ನೀವು ಬೆಳೆ ವಿಮೆ ಮಾಡಿಸಿದಂತಹ ಬೆಳೆಯು ಹಾಗೂ ಬೆಳೆ ಸಮೀಕ್ಷೆ ಮಾಡಿದಂತಹ ಬೆಳೆಯು ಹೊಂದಾಣಿಕೆಯಾಗಿದ್ದರೆ ಮಾತ್ರ ನಿಮ್ಮ ಖಾತೆಗಳಿಗೆ ಬೆಳೆವಿಮೆಯ ಹಣ ಬಿಡುಗಡೆಯಾಗಲಿದೆ.

ಧನ್ಯವಾದಗಳು.

Leave a Comment