ರಾಜ್ಯದ ಎಲ್ಲಾ ಜಿಲ್ಲೆಗಳಿಗೂ 25% ಮಧ್ಯಂತರ ಬೆಳೆ ವಿಮೆ ಜಮಾ ಮಾಡಲಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ.ಯಾವೆಲ್ಲ ಬೆಳೆಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ?:ಬೆಳೆ ವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.

ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮಧ್ಯಂತರ ಬೆಳೆ ವಿಮೆ ಜಮಾ ಮಾಡಲು ಪ್ರಾರಂಭವಾಗಿದ್ದು.ಧಾರವಾಡ ಜಿಲ್ಲೆಯ 63,566 ರೈತರಿಗೆ 50.298 ಕೋಟಿ ರೂ. ಗಳ ಮಧ್ಯಂತರ ವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಧಾರವಾಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ರುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಆಲೂಗಡ್ಡೆ ಬೆಳೆಗಳಡಿ ನೋಂದಾಯಿಸಿಕೊಂಡ ರೈತರಿಗೆ ಮಧ್ಯಂತರ ವಿಮೆ ಜಮಾವಣೆ ಆರಂಭವಾಗಿದೆ.

ಯಾವ ಯಾವ ತಾಲೂಕಿಗೆ ಎಷ್ಟು ಕೋಟಿ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ?

ಅಳ್ಳಾವರ ತಾಲೂಕಿನ 3052 ಜನ ರೈತರಿಗೆ 1.82 ಕೋಟಿ ರೂ.ಗಳ, 

ಅಣ್ಣಿಗೇರಿ ತಾಲೂಕಿನ 6044 ರೈತರಿಗೆ 6.45 ಕೋಟಿ ರೂ.ಗಳ, 

ಧಾರವಾಡ 9978 ರೈತರಿಗೆ 6.575 ಕೋಟಿ ರೂ.ಗಳ, 

ಹುಬ್ಬಳ್ಳಿ ತಾಲೂಕಿನ 9472 ರೈತರಿಗೆ 9.12 ಕೋಟಿ ರೂ.,

ಹುಬ್ಬಳ್ಳಿ ನಗರ ತಾಲೂಕಿನ 301 ರೈತರಿಗೆ 0.365 ಕೋಟಿ ರೂ., 

ಕಲಘಟಗಿ ತಾಲೂಕಿನ 15248 ರೈತರಿಗೆ 9.731 ಕೋಟಿ ರೂ. ಮತ್ತು 

ನವಲಗುಂದ ತಾಲೂಕಿನ 5286 ರೈತರಿಗೆ 5.282 ಕೋಟಿ ರೂ. ಗಳ ಮಧ್ಯಂತರ ವಿಮಾ ಪರಿಹಾರ ಜಮಾವಣೆಯಾಗಲಿದೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬರ ಪರಿಸ್ಥಿತಿ ನಿರ್ಮಾಣವಾದ ಪ್ರಯುಕ್ತ ಬೆಳೆ ವಿಮೆ ಯೋಜನೆಯಡಿ ಮಧ್ಯಂತರ ವಿಮೆ ಪರಿ ಹಾರ ಪಡೆಯಲು ಅವಕಾಶವಿದ್ದು, ಜಿಲ್ಲಾಡಳಿತದ ವತಿಯಿಂದ ಸಕಾಲಿಕ ಕ್ರಮ ಕೈಗೊಂಡ ನಿಮಿತ್ತ ಜಿಲ್ಲೆಯ 63,566 ರೈತರಿಗೆ 50.298 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಮಂಜೂರಾಗಿದೆ. ವಿಮೆಗೊಳಪಟ್ಟ 56,995 ಹೆಕ್ಟೇರ್ ಪ್ರದೇಶಕ್ಕೆ ವಿಮೆ ಪರಿಹಾರ ದೊರೆಯಲಿದೆ.

ಧಾರವಾಡ ಜಿಲ್ಲೆಯ 1,11,057 ರೈತರು ಈ ಯೋಜನೆಯಡಿ ವಿವಿಧ ಬೆಳೆಗಳಿಗೆ ನೋಂದಾಯಿಸಿ ಕೊಂಡಿದ್ದಾರೆ. ಒಟ್ಟು 1,05,065 ಹೆಕ್ಟೇರನಷ್ಟು ಬೆಳೆ ಪ್ರದೇಶ ವಿಮೆ ಯೋಜನೆಗೆ ಒಳಪಟ್ಟಿತ್ತು. ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ, ಆರ್ಥಿಕ ಬೆಂಬಲ ಮತ್ತು ಕೃಷಿ ಆದಾಯ ಸ್ಥಿರವಾಗಿರುವಂತೆ ಮಾಡಲು ನೆರವಾಗುವುದು ಈ ಯೋಜನೆಯ

ಆನ್ಲೈನ್ ಮೂಲಕ ನಿಮ್ಮ ಖಾತೆಗೂ  ಬೆಳೆವಿಮೆ ಬಿಡುಗಡೆಯಾಗಿದೆ ಎಂಬುದನ್ನು ಚೆಕ್ ಮಾಡುವುದು ಹೇಗೆ?

ಮೊದಲಿಗೆ ಬೆಳೆ ವಿಮೆ ಅಧಿಕೃತ ವೆಬ್ಸೈಟ್ ಆದಂತಹ ಸಂರಕ್ಷಣೆ ವೆಬ್ಸೈಟ್ ಗೆ ಭೇಟಿ ನೀಡಿ

 ಗೂಗಲ್ ಸರ್ಚ್ ನಲ್ಲಿ ಸಂರಕ್ಷಣೆ(samrakshane) ಎಂದು ಟೈಪ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.samrakshane.karnataka.gov.in/

  • ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ
  • ವರ್ಷ 2023-24
  •  ಋತು ಮುಂಗಾರು( kharif)
  • ಮುಂದೆ/GO ಬಟನನ್ನು ಒತ್ತಿ 

 

ಅದಾದ ನಂತರ ಓಪನ್ ಆಗುವಂತಹ ಹೊಸ ಟ್ಯಾಬ್ ನಲ್ಲಿ, ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://www.samrakshane.karnataka.gov.in/publichome.aspx

ಅಲ್ಲಿ ಮೊದಲನೇ ಆಪ್ಷನ್ ಆದಂತಹ ಪ್ರಪೋಸಲ್ ಮಾರ್ಕ್ ಮಾಡಿ ಅಥವಾ ಕ್ಲಿಕ್ ಮಾಡಿ

ನಂತರ ನಿಮ್ಮ ಪ್ರಪೋಸ ನಂಬರ (ಅಪ್ಲಿಕೇಶನ್ no) ಅಲ್ಲಿ ನಮೂದಿಸಿ ನಂತರ ಕ್ಯಾಚ್ ಅಪ್ ಕೋಡ್ ಟೈಪ್ ಮಾಡಿ ಸರ್ಚ್ ಬಟನ್ ಒತ್ತಿ.

ಅದಾದ ನಂತರ ನಿಮಗೆ ಯಾವ ಬೆಳೆಗೆ ನೀವು ಬೆಳೆ ವಿಮೆ ಮಾಡಿಸಿದ್ದೀರಿ ಹಾಗೂ ಎಷ್ಟು ರೂಪಾಯಿಗಳು ಮಧ್ಯಂತರ ಹಣ ನಿಮ್ಮ ಖಾತೆಗೆ ಬಿಡುಗಡೆಯಾಗಿದೆ ಎಂಬುದರ ಮಾಹಿತಿಯನ್ನು ನೀವು ಇದರ ಮೂಲಕ ಪಡೆಯಬಹುದು

 ಪ್ರಪೋಸಲ್ ನಂಬರ್ ಅಥವಾ ಅಪ್ಲಿಕೇಶನ್ ನಂಬರ್ ಅಂದರೆ ಏನು ಎಲ್ಲಿ ಸಿಗುತ್ತದೆ

 ನೀವು ನಿಮ್ಮ ಬೆಳೆ ವಿಮೆ ತುಂಬಿದಾಗ ಕಂಪ್ಯೂಟರ್ ಸರ್ವಿಸ್ ಸೆಂಟರ್ ನವರು ನಿಮಗೆ ಒಂದು ಅಧಿಕೃತ ಬೆಳೆವಿಮೆ ತುಂಬಿರುವ ರಶೀತಿಯನ್ನು ನೀಡುತ್ತಾರೆ ಅದರಲ್ಲಿ ಬಲಗಡೆ ಮೇಲೆ ನಿಮ್ಮ ಪ್ರೊಪೋಸಲ್ ಅಥವಾ ಅಪ್ಲಿಕೇಶನ್ ನಂಬರನ್ನು ಪಡೆಯಬಹುದಾಗಿದೆ.

ಇದನ್ನು ಓದಿ:

👉Bele vime:2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ:  63,566 ರೈತರಿಗೆ 50.298 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಜಮಾವಣೆ ಆರಂಭವಾಗಿದೆ.

https://krishisuddi.com/bele-vime-50-298-crore-to-63566-farmers-s-interim-crop-insurance/

👉FID number is compulsory for drought relief fund:ಬರ ಪರಿಹಾರ ಪಡೆಯಬೇಕೆಂದರೆ fid ನಂಬರು ನಿಮ್ಮ ಸರ್ವೇ ನಂಬರಿಗೆ ಲಿಂಕ್ ಆಗಿದ್ದರೆ ಮಾತ್ರ ಬರ ಪರಿಹಾರದ ಹಣ ಸಿಗುತ್ತದೆ.

https://krishisuddi.com/fid-number-is-compulsory-for-drought-relief-fund/

👉How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://krishisuddi.com/how-to-check-all-lands-are-connected-to-fid-number/

👉ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

https://krishisuddi.com/last-date-for-fid/

👉ಬೆಳೆ ವಿಮೆ ಜಮೆ ಆಗದಿರುವವರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ  ತಪ್ಪನ್ನು ಸರಿಪಡಿಸಿಕೊಳ್ಳಿ ಹಾಗೂ ನಿಮ್ಮ ಖಾತೆಗೆ ಬೆಳವಿಮೆಯನ್ನು ಪಡೆಯಿರಿ

https://krishisuddi.com/crop-insurance-failed-list-2/

👉Annabhagya 4th installment released

https://krishisuddi.com/annabhagya-4th-installment-released/

5 thoughts on “ರಾಜ್ಯದ ಎಲ್ಲಾ ಜಿಲ್ಲೆಗಳಿಗೂ 25% ಮಧ್ಯಂತರ ಬೆಳೆ ವಿಮೆ ಜಮಾ ಮಾಡಲಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ.ಯಾವೆಲ್ಲ ಬೆಳೆಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ?:ಬೆಳೆ ವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.”

Leave a Comment