gauranty nmber 1

ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರವು ಚುನಾವಣೆ ಪೂರ್ವದಲ್ಲಿ ನೀಡಿದಂತಹ ಗ್ಯಾರಂಟಿಗಳಲ್ಲಿ ಒಂದಾದಂತಹ 200 unit ವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಇದೀಗ ಸರ್ಕಾರ ಜಾರಿಗೊಳಿಸಿದ್ದು, ಇಂದು ಕಾಂಗ್ರೆಸ್ ಪಕ್ಷದ ಕ್ಯಾಬಿನೆಟ್ ಸಭೆ ಅಂತ್ಯಗೊಂಡ ನಂತರ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಈ ಯೋಜನೆಯನ್ನು ಘೋಷಿಸಿದ್ದಾರೆ.

ಯಾವುದೇ ಜಾತಿ ಧರ್ಮ ಅಡ್ಡಿ ಇಲ್ಲದೆ ಈ ಯೋಜನೆಗಳನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ, 12 ತಿಂಗಳ ಸರಾಸರಿ ಯೂನಿಟ್ ಬಳಕೆ ಆಧಾರದ ಮೇಲೆ ಉಚಿತ ವಿದ್ಯುತ್ ನೀಡಲು ಸರ್ಕಾರವು ಮುಂದಾಗಿದೆ ಎಂದು ಹೇಳಿದ್ದಾರೆ.

ಅಂದರೆ ಸರ್ಕಾರವು 2022 ಜೂನ್ ತಿಂಗಳಿಂದ 2023ರ ಜೂನ್ ತಿಂಗಳವರೆಗೆ ನಿಮ್ಮ ಕರೆಂಟ್ ಬಿಲ್ಲಿನ ಸರಾಸರಿಯನ್ನು ತೆಗೆದುಕೊಂಡು, ಅದಕ್ಕೆ 10% ಸೇರಿಸಿ, ಅದು ಎರಡು ನೂರು ಯುನಿಟಿಗಿಂತ ಕಡಿಮೆ ಇದ್ದರೆ ಇನ್ನು ಮುಂದೆ ನೀವು ವಿದ್ಯುತ್ ಬಿಲ್ಲನ್ನು ಬರಿಸಬೇಕಾಗಿಲ್ಲ.

ಉದಾಹರಣೆಗೆ :

June 120
July 110
August 150
September 160
October 170
November 150
December 160
January 199
February 188
March 175
April 141
May 123
June 111
150.5385

150*10%=15

150+15=165

ಹೀಗೆ ಒಂದು ವರ್ಷದ ಸರಾಸರಿ 165 ಯೂನಿಟ್ ಇದ್ದು ನೀವು ಜುಲೈ ತಿಂಗಳಿಂದ ವಿದ್ಯುತ್ ಬಿಲ್ ತುಂಬಬೇಕಾಗಿಲ್ಲ

ಜೂನ್ ವರೆಗೂ ವಿದ್ಯುತ್ ಬಿಲ್ಲನ್ನು ಸಾರ್ವಜನಿಕರು ತುಂಬ ಬೇಕಾಗುತ್ತದೆ, ಜುಲೈ ತಿಂಗಳಿಂದ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ತನ್ನು ನೀವು ಬಳಸುತ್ತಿದ್ದರೆ ನೀವು ಯಾವುದೇ ರೀತಿಯ ವಿದ್ಯುತ್ ಬಿಲ್ಲನ್ನು ಬರಿಸಬೇಕಾಗಿಲ್ಲ.

ಎಲ್ಲಾ ಐದು ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡುತ್ತೇವೆ, ಅದಕ್ಕಾಗಿ ನಾನು ಹಾಗೂ ಉಪಮುಖ್ಯಮಂತ್ರಿಗಳಾದಂತಹ ಡಿಕೆ ಶಿವಕುಮಾರ್ ಅವರು ಸಹಿ ಮಾಡಿದ್ದು ನುಡಿದಂತೆ ನಾವು ನಡೆಯುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಸಿದ್ದರಾಮಯ್ಯನವರು ಹೇಳಿದ್ದಾರೆ.

By Raju

One thought on “Gauranty no. 1:ಜುಲೈ ತಿಂಗಳಿಂದ 200 ಯೂನಿಟ್ ಫ್ರೀ : ಸರ್ಕಾರದಿಂದ ಅಧಿಕೃತ ಆದೇಶ”

Leave a Reply

Your email address will not be published. Required fields are marked *