CLOUD SEEDING SOON IN STATE

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ಹಿಂಗಾರು ಮಳೆ ನಂಬಲು ಆಗದ ಸ್ಥಿತಿ ನಿರ್ಮಾಣವಾಗಿರುವುದರಿಂದ ಮೋಡ ಬಿತ್ತನೆಗೆ ಸರಕಾರ ಚಿಂತನೆ ನಡೆಸಿದೆ.(CLOUD SEEDING SOON IN STATE?)

ಈಗಾಗಲೇ ಹಾವೇರಿಯಲ್ಲಿ ಮಾಜಿ ಸ್ಪೀಕರ್ ಕೋಳಿವಾಡ ಪುತ್ರ ಪ್ರಕಾಶ್‌ ಕೋಳಿವಾಡ ಅವರು ಜಿಲ್ಲೆಗೆ ಸೀಮಿತ ಮೋಡ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ರಾಜ್ಯದಲ್ಲಿ ಈ ವರೆಗೆ ಮೋಡ ಬಿತ್ತನೆಯಲ್ಲಿ ಹೇಳಿಕೊಳ್ಳುವ ‘ಯಶಸ್ಸು ಕಾಣದೇ ಇರುವುದರಿಂದ ಸರಕಾರ ಆರಂಭದಲ್ಲಿ ಹಿಂದೇಟು ಹಾಕಿತ್ತು. ಆದರೀಗ ಮಳೆ ಪ್ರಮಾಣ ಭಾರಿ ತಗ್ಗಿರುವುದರಿಂದ ಅನಿವಾ ರ್ಯವಾಗಿ ಮೋಡ ಬಿತ್ತನೆಯ ಮೊರೆ ಹೋಗಿದೆ.

ಈ ಸಂಬಂಧ ಈಗಾಗಲೇ ಅಧಿಕಾರಿಗಳು ಸಿಎಂ ಸಿದ್ದರಾ ಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಬೇರೆ ದಾರಿ ಇಲ್ಲದೇ ಸರಕಾರವೂ ಒಪ್ಪಿದೆ ಎಂದು ತಿಳಿದುಬಂದಿದೆ.

ಶೀಘ್ರ ತೀರ್ಮಾನ:

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತ ನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೋಡ ಬಿತ್ತನೆ ಮಾಡಲು ಎರಡು ಮೂರು ದಿನಗಳಲ್ಲಿ ಸರಕಾರ ನಿರ್ಧಾರ ಮಾಡಲಿದೆ. ಎರಡು ದಿನಗಳಿಂದ ಬೆಂಗಳೂರು ನಗರ ಹಾಗೂ ಸುತ್ತಾಮುತ್ತ ಸುರಿದ ಮಳೆಯಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಮೋಡ ಬಿತ್ತನೆಯಿಂದ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ನಂಬಿಕೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಮೋಡ ಬಿತ್ತನೆ ಹಾಗೂ ಕಾವೇರಿ ನೀರು ಸಂಕಷ್ಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

Click here for direct links:

1.PMKISAN:https://pmkisan.gov.in/

2.PMFBY/CROP INSURANCE:https://samrakshane.karnataka.gov.in/

3.GRUHALAKSHMI:https://sevasindhugs.karnataka.gov.in/

4.GRUHAJYOTI:https://sevasindhugs1.karnataka.gov.in/gruhajyothi/renderApplicationForm.do;jsessionid=421A34A4F3C5203B7BA642B709DC704A?serviceId=19890010&UUID=b8c49536-c22c-4382-9913-ba9627c22b13&directService=true&tempId=8410&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=O0E1-OLBX-YH6Z-X3PG-H916-FA6G-KCRT-EMGX

5.GAURANTEE SCHEMES:https://sevasindhugs.karnataka.gov.in/#

Read this also:

1.ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ: 1200 ಬದಲಿ ಎಷ್ಟು ಗೊತ್ತಾ?

ಆತ್ಮೀಯ ಹಿರಿಯ ಬಾಂಧವರೇ,  60 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು,  ಇದೀಗ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು 1200 ಬದಲಿಗೆ ಎಷ್ಟು ಹಣ ಬರುತ್ತದೆ  ಗೊತ್ತಾ?

2.ಆನ್ಲೈನ್ ಮೂಲಕ ಉಚಿತವಾಗಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

By Raju

Leave a Reply

Your email address will not be published. Required fields are marked *