ಬಾಗಲಕೋಟಿ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ೨೦೨೩-೨೪ರ ಸಾಲಿನಲ್ಲಿ ಡಿಸೆಂಬರ್ ೨೩ರಿಂದ ೨೫ರವರೆಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ತೋಟಗಾರಿಕೆ ಮೇಳವನ್ನು ಹಮ್ಮಿಕೊಂಡಿರುತ್ತದೆ. ಸದರಿ ತೋಟಗಾರಿಕೆ ಮೇಳದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ರಾಜ್ಯದ ೨೪ ಜಿಲ್ಲೆಗಳಿಗೆ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆ ಆಯ್ಕೆ ಮಾಡಿ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವದು.

ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ಸಾಧಕ ರೈತ ಅಥವಾ ರೈತ ಮಹಿಳೆ ಆಯ್ಕೆಗಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಛಾಯಾ ಚಿತ್ರಗಳ ಮೂಲಕ ದೃಢೀಕರಿಸಿ ಸಲ್ಲಿಸಬೇಕು. ಬಾಗಲಕೋಟ ಜಿಲ್ಲೆಯ ರೈತ ಅಥವಾ ರೈತ ಮಹಿಳೆ ಅರ್ಜಿ ನಮೂನೆಯನ್ನು ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ಕಛೇರಿಯಿಂದ ಅಥವಾ ವಿಸ್ತರಣಾ ಮುಂದಾಳು, ವಿಸ್ತರಣಾ ನಿರ್ದೆಶನಾಲಯದಿಂದ ಅಥವಾ ತೋವಿವಿಯ ಅಂತರ್ಜಾಲ www.uhsbagalkot.edu.in ಮೂಲಕವು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ ೦೬.೧೧.೨೦೨೩ ರೊಳಗಾಗಿ ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ಕಚೇರಿಗೆ ಸಲ್ಲಿಸಬೇಕು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಈ ಕೆಳಗಿನ ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ.

ಅರ್ಜಿದಾರರು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಯಾವದೇ ಕೃಷಿ, ತೋಟಗಾರಿಕೆ/ಪಶುಸಂಗೋಪನೆ/ಐಸಿಎಆರ್ಪ್ರ ಶಸ್ತಿಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದ ಯಾವದೇ ಹೆಸರಿನಲ್ಲಿ ಪಡೆದಿರಬಾರದು.

ಅರ್ಜಿದಾರರು ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಛಾಯಾಚಿತ್ರಗಳೊಂದಿಗೆ ಸಲ್ಲಿಸಬೇಕು, ಸಲ್ಲಿಕೆಯಾದ ಅರ್ಜಿಗಳನ್ನು ಆಯ್ಕೆ ಸಮಿತಿ ಪರೀಶಿಲಿಸಿ ಕಿರುಪಟ್ಟಿ ಮಾಡಿದ ಮೂರು ಕ್ಷೇತ್ರಗಳಿಗೆ ಮಾತ್ರ ಕ್ಷೇತ್ರ ವಿಕ್ಷಣೆ ಕೈಗೊಳ್ಳಲಾಗುವುದು.

ಆಯ್ಕೆಯು ವಿಶ್ವವಿದ್ಯಾಲಯದ ನಿಯಮ ಹಾಗೂ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತಾರೆ.

ಹೆಚ್ಚಿನ ವಿವರಗಳಿಗಾಗಿ ಡಾ. ಪಿ. ಎಮ್. ಗಂಗಾಧರಪ್ಪ ವಿಸ್ತರಣಾ ನಿರ್ದೇಶಕರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಇವರ ಮೊಬೈಲ್ ೯೪೮೦೬೯೬೩೮೧ ಅಥವಾ ಡಾ. ಬಾಲಾಜಿ ಕುಲಕರ್ಣಿ, ಡೀನ್ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ ಇವರ ಮೊಬೈಲ್ ೯೮೪೫೬೫೫೮೫೬ ಅಥವಾ ಡಾ. ಶಶಿಕುಮಾರ್ ಎಸ್, ವಿಸ್ತರಣಾ ಮುಂದಾಳು, ವಿಸ್ತರಣಾ ನಿರ್ದೆಶನಾಲಯ, ಇವರ ಮೊಬೈಲ್ | ೯೭೪೧೯೦೦೨೫೫ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Click here for direct links:

1.PMKISAN:https://pmkisan.gov.in/

2.PMFBY/CROP INSURANCE:https://samrakshane.karnataka.gov.in/

3.GRUHALAKSHMI:https://sevasindhugs.karnataka.gov.in/

4.GRUHAJYOTI:https://sevasindhugs1.karnataka.gov.in/gruhajyothi/renderApplicationForm.do;jsessionid=421A34A4F3C5203B7BA642B709DC704A?serviceId=19890010&UUID=b8c49536-c22c-4382-9913-ba9627c22b13&directService=true&tempId=8410&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=O0E1-OLBX-YH6Z-X3PG-H916-FA6G-KCRT-EMGX

5.GAURANTEE SCHEMES:https://sevasindhugs.karnataka.gov.in/#

Read this also:

1.ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ: 1200 ಬದಲಿ ಎಷ್ಟು ಗೊತ್ತಾ?

ಆತ್ಮೀಯ ಹಿರಿಯ ಬಾಂಧವರೇ,  60 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು,  ಇದೀಗ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು 1200 ಬದಲಿಗೆ ಎಷ್ಟು ಹಣ ಬರುತ್ತದೆ  ಗೊತ್ತಾ?

2.ಆನ್ಲೈನ್ ಮೂಲಕ ಉಚಿತವಾಗಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

 

By Raju

Leave a Reply

Your email address will not be published. Required fields are marked *