ಅಕ್ಟೋಬರ್ ಕೊನೆಯ ವಾರದಲ್ಲಿ ರೈತರ ಖಾತೆಗಳಿಗೆ ಪರಿಹಾರ ಹಣ ಬಿಡುಗಡೆ: ಎಷ್ಟು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಅನಾಾವೃಷ್ಟಿಯ ಕಾರಣಗಳಿಂದಾಗಿ ಈ ಬಾರಿ ರಾಜ್ಯದಲ್ಲಿ ಬರಗಾಲ ಆವರಿಸಿದ್ದು ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಇದಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕೇಂದ್ರ ಸರ್ಕಾರದಿಂದ ತಂಡಗಳು ಆಗಮಿಸಿ ಪರಿಹಾರ ಸ್ಥಿತಿಯನ್ನು ಅವಲೋಕಿಸಿ ಇನ್ನೇನು ಕೆಲವೇ ದಿನಗಳಲ್ಲಿ ಪರಿಹಾರದ(parihara) ಹಣವನ್ನು ಬಿಡುಗಡೆ ಮಾಡಲಿವೆ.

ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು ಇದಕ್ಕೆ ಪ್ರತ್ಯುತ್ತರವಾಗಿ ಕೇಂದ್ರ ಸರ್ಕಾರದ ತಂಡಗಳು  ರಾಜ್ಯಕ್ಕೆ ಆಗಮಿಸಿ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಿದ ನಂತರ ಇನ್ನೇನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಬೆಳೆ ಪರಿಹಾರದ ಹಣ ಜಮೆಯಾಗಲಿವೆ.

 ಆಧಾರ್ ಕಾರ್ಡ್ ನಂಬರ್ ಮೂಲಕ ಪರಿಹಾರ  ಸ್ಟೇಟಸ್ ಚೆಕ್ ಮಾಡುವುದು ಹೇಗೆ?

 ಮೊಟ್ಟ ಮೊದಲು ಗೂಗಲ್ ನಲ್ಲಿ ಪರಿಹಾರ ಪೇಮೆಂಟ್ ಎಂದು ಟೈಪ್ ಮಾಡಿ

 ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ :https://landrecords.karnataka.gov.in/PariharaPayment/

parihara

ಆಗ ಅಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ ಒಂದು ಪರಿಹಾರ(PARIHARA) ಐಡಿ ಹಾಗೂ ಆಧಾರ್ ನಂಬರ್ ನಿಮ್ಮ ಬಳಿ ಪರಿಹಾರ ಐಡಿ ಇದ್ದರೆ ಪರಿಹಾರ ನಂಬರ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.

 ಆಗ ನಿಮಗೆ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ ಕೇಳುವಂತಹ ಎಲ್ಲ ಮಾಹಿತಿಯನ್ನು ನಮೂದಿಸಿ ಸಮ್ಮೇಟ ಬಟನ್ ಮೇಲೆ ಕ್ಲಿಕ್ ಮಾಡಿ. 

parihara

ಈಗಾಗಲೇ ಹಲವಾರು ತಂಡಗಳು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆಯನ್ನು ನಡೆಸಿದ್ದು ಅದರ ವರದಿಯನ್ನು ಸಿದ್ಧಪಡಿಸಿಕೊಂಡಿವೆ.

ಇನ್ನು ಗದಗ್ ಜಿಲ್ಲೆಯ ಮಾಹಿತಿಯನ್ನು ನಾವು ನೋಡುವುದಾದರೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಮುಂಡರಗಿ ತಾಲೂಕನ್ನು ಹೊರತುಪಡಿಸಿ ಉಳಿದ 5 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

 ಕೇಂದ್ರ ತಂಡ ಭೇಟಿ ನೀಡಿ ಬರಹ ಪರಿಸ್ಥಿತಿಯ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲಿದೆ.

 ಮಳೆಯ ಕೊರತೆ:

 ಗದಗ:39 %

 ನರಗುಂದ:65 %

 ರೋಣ: 76 %

 ಶಿರಹಟ್ಟಿ: 86 %

 ಗಜೇಂದ್ರಗಡ: 77 %

ಲಕ್ಷ್ಮೇಶ್ವರ: 81 %

 ಬೆಳೆಯ ಪರಿಸ್ಥಿತಿ

ಗದಗ ಜಿಲ್ಲೆಯ ಪ್ರಮುಖ ಬೆಳೆಯಾದಂತಹ ಹೆಸರು ಈ ಬಾರಿ ಮಳೆಯ ಅಭಾವದಿಂದ ಸಂಪೂರ್ಣ ಕೈಕೊಟ್ಟಿದೆ. ಇನ್ನು ಉಳಿದ ಬೆಳೆದಂತಹ ಮೆಕ್ಕೆಜೋಳ ಈರುಳ್ಳಿ ಮೆಣಸಿನಕಾಯಿ ಶೇಂಗಾ ಸೂರ್ಯಕಾಂತಿ ಇದ್ದರೂ ಕೂಡ ನಿರೀಕ್ಷಿತ ಮಟ್ಟದ ಬೆಳೆ ಇಲ್ಲ ಹಾಗೂ ಇಳುವರಿ ಕೂಡ ಕುಂಠಿತವಾಗಲಿದೆ.

ಈಗಾಗಲೇ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಕೇಂದ್ರ ತಂಡ ಗದಗ್ ಜಿಲ್ಲೆಗೆ ಆಗಮಿಸಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಿದ ನಂತರ ರೈತರ ಖಾತೆಗಳಿಗೆ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುವುದು.

ಮೂಲಗಳ ಮಾಹಿತಿಯ ಪ್ರಕಾರ ಭಾಗಶಹ ಅಕ್ಟೋಬರ್ ಕೊನೆಯ ವಾರದಲ್ಲಿ ಮಾನದಂಡ ಪ್ರಕಾರ ರೈತರಿಗೆ ಪರಿಹಾರದ ಹಣ ಲಭಿಸಬಹುದು ಎಂದು ಮೂಲಗಳು ತಿಳಿಸಿವೆ.

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಕಳೆದ ವರ್ಷದಿಂದ ಬೆಳೆ ಪರಿಹಾರವನ್ನು ಪಡೆಯಲು ಬೆಳೆ ಸಮೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ, ಹಾಗಾಗಿ ರೈತರು ತಾವು ತಮ್ಮ ಹೊಲಗಳಲ್ಲಿ ಬೆಳೆದಂತಹ ಬೆಳೆಗಳನ್ನು ರೈತರ ಬೆಳೆ ಸಮೀಕ್ಷೆ ಆಪ್ ಮೂಲಕ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಲು ಕೋರಲಾಗಿದೆ.

parihara

ಬೆಳೆ ಸಮೀಕ್ಷೆ ಆಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :

https://play.google.com/store/apps/details?id=com.csk.farmer23_24.cropsurvey

ನೀವು ಬೆಳೆ ಸಮೀಕ್ಷೆ ಮಾಡಿದ ನಂತರ, ನೀವು ಮಾಡಿದಂತಹ ಬೆಳೆ ಸಮೀಕ್ಷೆ ಸರಿಯಾಗಿದೆ ಇಲ್ಲವೋ ಎಂಬುದನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಬಹುದು.

ಅದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಒಂದು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ, ಅದರ ಹೆಸರು ಬೆಳೆ ದರ್ಶಕ್

ಇದನ್ನು ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ

 

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ:

 

https://play.google.com/store/apps/details?id=com.crop.offcskharif_2021

ಆಪನ್ನು ಡೌನ್ಲೋಡ್ ಮಾಡಿ ಓಪನ್ ಮಾಡಿ

ಮುಖ್ಯ ಪೇಜ್ ನಲ್ಲಿ ನಿಮಗೆ ಹಲವಾರು ಆಪ್ಷನ್ಗಳಿವೆ, ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರನ್ನು ನಮೂದಿಸಿ ವಿವರ ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆ ಸರ್ವೇ ನಂಬರಲ್ಲಿ ಇರುವಂತಹ ಹಿಸ್ಸಾ ನಂಬರ್ ಗಳು ಅಪ್ಡೇಟಾಗುತ್ತವೆ, ಆಗ ಹಿಸ್ಸ ಆಯ್ಕೆ ಮಾಡಿಕೊಂಡು ನಂತರದ ಆಯ್ಕೆಯಲ್ಲಿ ಮಾಲಕರ ಹೆಸರನ್ನು ಆಯ್ಕೆ ಮಾಡಿ

ನಂತರ ಕೆಳಗಡೆ ಇರುವಂತಹ ಸಮೀಕ್ಷೆಯ ವಿವರವನ್ನು ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಆಗ ನೀವು ನಿಮ್ಮ ಹೊಲವನ್ನು ಯಾರು ಜಿಪಿಎಸ್ ಮಾಡಿದ್ದಾರೆ ಎಂದು ಅವರ ಹೆಸರನ್ನು ಅಲ್ಲಿ ಕೆಳಗಡೆ ನೋಡಬಹುದು, ಆಗ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆ ಸಮೀಕ್ಷೆ ಮಾಡಲಾಗಿದೆ ಹಾಗೂ ಅದು ಅಪ್ರುವಲ್ ಆಗಿದೆಯೋ ಇಲ್ಲವೋ ಎಂಬ ನಿಖರ ಮಾಹಿತಿಯನ್ನು ನೀವು ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ಪಡೆಯಬಹುದಾಗಿದೆ.

ಬೆಳೆ ಸಮೀಕ್ಷೆ ಮಾಡುವುದರಿಂದ ನಮಗೆ ಸಿಗುವ ಲಾಭಗಳೇನು?

ಕನಿಷ್ಠ ಬೆಂಬಲ ಬೆಲೆ ಯೋಜನೆ,

ಬೆಳೆ ವಿಮೆ ಯೋಜನೆ,

ಬರಗಾಲ “ಮತ್ತು ಪ್ರವಾಹಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು

ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು

ಬೆಳೆಸಾಲ ಅನುಕೂಲವಾಗುವದರಿಂದ

ಎಲ್ಲ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ದಾಖಲಿಸಿ ಪಡೆದುಕೊಳ್ಳಬೇಕಿದೆ.

ಅಪ್‌ಲೋಡ್ ಮಾಡದಿದ್ದಲ್ಲಿ ಯೋಜನೆಗಳ ಸದುಪಯೋಗ ಲಾಭದಿಂದ ವಂಚಿತರಾಗುವ ಸಾಧ್ಯತೆ ಇದೆ. ಇದನ್ನು ಮತ್ತು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ಪಡೆಯುವಲ್ಲಿ ದಾಖಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ರೈತರು ಬೆಳೆ ತಾರಾಮಣಿ ಜಿ.ಎಚ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ ರೈತರು ಬೆಳೆ ವಿವರಗಳನ್ನು ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಮೇಲೆ ತಿಳಿಸಿದ ಸಂಪರ್ಕಿಸಬಹುದು ಮೊ/8448447715 ಗೆ ಕರೆ ಮಾಡಲು ಕೋರಿದೆ.

✳️ *ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ*. 👇

https://play.google.com/store/apps/details?id=com.csk.farmer23_24.cropsurvey

🎥 *ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಬಳಸುವ ವಿಧಾನಕ್ಕಾಗಿ ಈ ಕೆಳಗಿನ ಮಾರ್ಗದರ್ಶಿ ವಿಡಿಯೋ ನೋಡಿ.* 👇

*https://youtu.be/12y0D8uyTMs*

👉 *ಬೆಳೆ ಸಮೀಕ್ಷೆ ಪ್ರಕಾರ ನಿಮ್ಮ ಜಮೀನಿನಲ್ಲಿ ದಾಖಲಾದ ಬೆಳೆ ವಿವರದ ಮಾಹಿತಿಯನ್ನು *ಬೆಳೆ ದರ್ಶಕ 2023* ಅಪ್ಲಿಕೇಶನ್ ನಲ್ಲಿ ಪರಿಶೀಲಿಸಿಕೊಳ್ಳಿ. 👇

*https://play.google.com/store/apps/details?id .crop.offcskharif_2023*

👉 ಬೆಳೆ ಸಮೀಕ್ಷೆಗೆ ಬಳಸುವ *ಬೆಳೆ ಕೋಡ್* ಗಳನ್ನು ಈ ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಿ.👇

https://drive.google.com/file/d/1BMliO5N8g3eJYOQ7wb6k4jdi3IbHKZoH/view

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

 

krishisuddi whatsapp groupRead this aLSO:

1.ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ: 1200 ಬದಲಿ ಎಷ್ಟು ಗೊತ್ತಾ?

ಆತ್ಮೀಯ ಹಿರಿಯ ಬಾಂಧವರೇ,  60 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು,  ಇದೀಗ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು 1200 ಬದಲಿಗೆ ಎಷ್ಟು ಹಣ ಬರುತ್ತದೆ  ಗೊತ್ತಾ?

2.ಆನ್ಲೈನ್ ಮೂಲಕ ಉಚಿತವಾಗಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

 

Leave a Comment