bele parihara 2023

ರಾಜ್ಯದ ಪ್ರತಿಯೊಬ್ಬ ರೈತರು ಕರ್ನಾಟಕ ಸರ್ಕಾರದ ರೈತ ಹಿತ ಯೋಜನೆಗಳ ಲಾಭವನ್ನು ಪಡೆಯಲು F I D ನೊಂದಾವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಎಫ್ ಐ ಡಿ ನೊಂದಾವಣೆ ಮಾಡಿಕೊಳ್ಳುವುದು ಹೇಗೆ, ಎಲ್ಲಿ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಲೇಖನವನ್ನು ಓದಿ.

FID ಎಂದರೆ  FRUITS ID ( Farmer Registration and Unified Beneficiary Information System ). ಇದರಲ್ಲಿ ಒಬ್ಬ ರೈತನ ಹೆಸರಲ್ಲಿರುವ ಎಲ್ಲಾ ಹೊಲಗಳ ಸಂಪೂರ್ಣ ಮಾಹಿತಿಯನ್ನು ದಾಖಲಿಸಲಾಗುತ್ತದೆ ಮತ್ತು ಇದರಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಲಾಭವನ್ನು ಪಡೆಯಲು F I D ನೊಂದಾವಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಯಾರು ನೊಂದಣೆ ಮಾಡಿಸಿಕೊಳ್ಳಬೇಕು?

 ಒಬ್ಬ ರೈತನ ಹೆಸರಿನಲ್ಲಿ  ಐದು ಸರ್ವೇ ನಂಬರ್ ಇರುತ್ತವೆ, ಆದರೆ ಅನೇಕ ರೈತರು ಮೊದಲು F I D ನೊಂದಣಿ ಮಾಡುವಾಗ ಕೇವಲ ಒಂದು ಸರ್ವೆ ನಂಬರಿನ ವಿವರವನ್ನು ಮಾತ್ರ ಸಲ್ಲಿಸಿದ್ದಾರೆ. ಇಂತಹ ರೈತರು ಉಳಿದ ಎಲ್ಲಾ ಸರ್ವೇ ನಂಬರ್ ನ ಹೊಲಗಳ ಮಾಹಿತಿಯನ್ನು ಈ ಕೂಡಲೇ ನೋಂದಣಿ ಮಾಡಿಸಿ ಸರ್ಕಾರದ ಎಲ್ಲಾ ಲಾಭವನ್ನು ಪಡೆಯಿರಿ.

 ಎಲ್ಲಿ ನೊಂದಣಿ ಮಾಡಿಸಬೇಕು?

F I D registration ಅಥವಾ ಉಳಿದ ಸರ್ವೆ ನಂಬರ್ ನಿಮ್ಮ ಎಫ್ ಐ ಡಿ ಯಲ್ಲಿ ಸೇರಿಸಲು ರೈತರು ಹತ್ತಿರವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು.

 ಅಥವಾ ರೈತರು ಸ್ವಯಂ ದಾಖಲಿಸಕೊಳ್ಳಬಹುದು.

 ರೈತರ ಸ್ವಯಂ ದಾಖಲಿಸಿಕೊಳ್ಳಲು ಕೆಳಗಿನ ಲಿಂಕನ ಮೇಲೆ ಕ್ಲಿಕ್ ಮಾಡಿ ಜಾಲತಾಣಕ್ಕೆ ಭೇಟಿ ನೀಡಿ ದಾಖಲಿಸಿಕೊಳ್ಳಬಹುದು.

https://fruits.karnataka.gov.in/OnlineUserLogin.aspx 

 ಈ ಜಾಲತಾಣಕ್ಕೆ ಭೇಟಿ ನೀಡಿದ ಮೇಲೆ ಹೋಂ ಪೇಜ್ ನಲ್ಲಿ ಎಡಗಡೆ ಮೇಲಿನ ಭಾಗದಲ್ಲಿ  Citizen login ಎಂಬುದರ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ನಿಖರವಾದ ಮಾಹಿತಿಯನ್ನು ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು. 

Required Documents – ನೊಂದಣಿ ಮಾಡಿಸಲು ಬೇಕಾಗುವ ದಾಖಲಾತಿಗಳು

  1. ಆಧಾರ್ ಕಾರ್ಡ್
  2. ಬ್ಯಾಂಕ್ ಪಾಸ್ ಬುಕ್
  3. ಪಹಣಿ

 ಒಂದು ವೇಳೆ ಒಂದು ಸರ್ವೇ ನಂಬರ್ ನಲ್ಲಿ, ಕುಟುಂಬ ಸದಸ್ಯರ ಹೆಸರಿನಲ್ಲಿ ಹೊಲವು ಜಂಟಿಯಾಗಿದ್ದರೆ, ಪ್ರತಿಯೊಬ್ಬ ಜಂಟಿ ಖಾತೆದಾರರು ವೈಯಕ್ತಿಕವಾಗಿ ಬೇರೆ ಬೇರೆ ಎಫ್ ಐಡಿ ಯನ್ನು  ನೋಂದಣಿ ಮಾಡಿಸಿಕೊಳ್ಳಬೇಕು.

FID ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು ಎಲ್ಲಾ ರೈತರು ಈ ಕೂಡಲೇ ನೋಂದಣಿ ಮಾಡಿಸಿಕೊಳ್ಳಬೇಕು. ಎಫ್ ಐ ಡಿ ನೋಂದಣಿ ಮಾಡಿಸಿಕೊಳ್ಳುವುದರಿಂದ ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳ ಲಾಭವನ್ನು ಪಡೆಯಲು ಅರ್ಹರಿರುತ್ತೀರಿ. ಈ ಮಾಹಿತಿಯು ಉಪಯುಕ್ತ ವಾಗಿದ್ದರೆ ನಿಮ್ಮ ಎಲ್ಲಾ ರೈತ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

Read this also:

1.Mailara Lingeshwar Karnika 2023: ರೈತರ ಕಷ್ಟದ ಬಗ್ಗೆ ಭವಿಷ್ಯ ಹೇಳಿದ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ.

“ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್”! ಎಂಬ ನುಡಿಯನ್ನು ಐತಿಹಾಸಿಕ ಸ್ಥಳವಾದ ದೇವರಗುಡ್ಡದ ಗೊರವಜ್ಜನ ಕಾರ್ಣಿಕ ಇದಾಗಿದೆ. ಈ ನುಡಿಯು ರೈತರ ಬರಗಾಲದ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದವರು ಹೇಳಿದ್ದಾರೆ.

2.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

 

 

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

 

4.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

4.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

By Raju

Leave a Reply

Your email address will not be published. Required fields are marked *