ಬ್ಯಾಂಕ್ ಸಿಬ್ಬಂದಿಗಳ ಕೊರತೆಯಿದ್ದು, ಶೀಘ್ರದಲ್ಲಿ ಬ್ಯಾಂಕ್ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಬೇಕೆಂದು ಗದಗ ನಲ್ಲಿ ಬ್ಯಾಂಕ್ ಮುಷ್ಕರ! 

” ಅನೇಕ ಬ್ಯಾಂಕುಗಳಲ್ಲಿ ವರ್ಷದಿಂದ ವರ್ಷಕ್ಕೆ ವಹಿವಾಟು ಮತ್ತು ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದರು, ಸಿಬ್ಬಂದಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ. ಈ ತೊಂದರೆಯಿಂದ ಗ್ರಾಹಕರು ಬ್ಯಾಂಕುಗಳಿಗೆ ಹೋದಾಗ ನಿರೀಕ್ಷಿತ ಸೇವೆ ಸಿಗುತ್ತಿಲ್ಲ. ಈ ಕಾರಣದಿಂದ ಅಖಿಲ ಭಾರತ ಬ್ಯಾಂಕ್ ಉದ್ಯೋಗಗಳ ಸಂಘದಿಂದ ಶೀಘ್ರದಲ್ಲಿ ಬ್ಯಾಂಕ್ ಮುಷ್ಕರಕ್ಕೆ ಆಂದೋಲನ ರೂಪಿಸಲಿದ್ದಾರೆ.

ಗದಗ, : ಗ್ರಾಹಕರು, ಬ್ಯಾಂಕುಗಳಿಗೆ ಅನೇಕ ಸೇವೆಗಳನ್ನು ಪಡೆಯಲು ಹೋದಾಗ ಬ್ಯಾಂಕ್ ಸಿಬ್ಬಂದಿ ನಿರೀಕ್ಷಿತ ಕೊರತೆಯಿಂದಾಗಿ ತಮಗೆ ಬೇಕಾದ ಸೇವೆ ಸಿಗದೇ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ 15 ವರ್ಷಗಳಿಂದ ಬ್ಯಾಂಕುಗಳಲ್ಲಿ ಶೇಕಡ 5 ಪಟ್ಟು ವ್ಯವಹಾರ ಹೆಚ್ಚಳವಾಗಿದೆ. ಆದರೆ ಸಿಬ್ಬಂದಿಗಳ ಸಂಖ್ಯೆ ಮಾತ್ರ ಮೊದಲಿಗಿಂತ ಅರ್ಧಕ್ಕಿಂತಲೂ ಕಡಿಮೆಯಾಗಿದೆ.  ಸುಮಾರು ಎರಡು ಲಕ್ಷಕ್ಕೂ ಅಧಿಕ ಸಿಬ್ಬಂದಿಗಳ ಕೊರತೆಯಿದ್ದು ಈ ಸಮಸ್ಯೆಯನ್ನು ಶೀಘ್ರದಲ್ಲಿ ನಿವಾರಿಸಬೇಕೆಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಗಳ ಸಂಘದಿಂದ ಬ್ಯಾಂಕ್ ಮುಷ್ಕರ ಆಂದೋಲನ ರೂಪಿಸಲಿದ್ದಾರೆ.

 ಸರ್ಕಾರದಿಂದ ಬರುವ ಹಲವಾರು ಯೋಜನೆಗಳು ಬ್ಯಾಂಕ ಮುಖಾಂತರ ಫಲಾನುಭವಿಗಳಿಗೆ ಸಿಗಬೇಕಾಗಿದ್ದು, ಬ್ಯಾಂಕುಗಳಲ್ಲಿ ಅಗತ್ಯವಿರುವ ಸಿಬ್ಬಂದಿ ಕೊರತೆಯಿಂದಾಗಿ ಈ ಯೋಜನೆಗಳ ಸಹಾಯವನ್ನು ಪಡೆಯಲು ಆಗುತ್ತಿಲ್ಲ. ಆದ್ದರಿಂದ ನೇಮಕಾತಿಯನ್ನು ಮಾಡಬೇಕಾಗಿ ಅಖಿಲ ಭಾರತ ಬ್ಯಾಂಕ ಉದ್ಯೋಗಿಗಳ ಸಂಘ ಎ.ಐ.ಬಿ.ಇ.ಎ. ನೀಡಿರುವ ವಿವಿಧ ಹಂತಗಳ ದೀರ್ಘಾವಧಿ ಹೋರಾಟಕ್ಕೆ ಸಿದ್ಧವಾಗಿದೆ.

ಯಾವಾಗಿನಿಂದ ಈ ಬ್ಯಾಂಕ್ ಮುಷ್ಕರ?

 ಅಗತ್ಯ ಇರುವ ಸಿಬ್ಬಂದಿಗಳ ನೇಮಕಾತಿಯನ್ನು ಮಾಡಿಕೊಳ್ಳಬೇಕೆಂಬ ಈ ಮುಷ್ಕರವೂ ಡಿಸೆಂಬರ್ 4 ರಿಂದ ಜನವರಿ 20ರವರೆಗೆ ನಡೆಯಲಿದೆ. ಈ ಬ್ಯಾಂಕ್ ಮುಷ್ಕರ ಆಂದೋಲನಕ್ಕೆ ಕರ್ನಾಟಕ ಪ್ರದೇಶ ಬ್ಯಾಂಕ ನೌಕರರ ಸಂಘ ಕೆ.ಪಿ.ಬಿ.ಇ.ಎಫ್. ತನ್ನ ಎಲ್ಲಾ ಸಂಘದ ಸದಸ್ಯರಿಗೆ ಆಹ್ವಾನ ನೀಡಿದ್ದು  ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಆದ್ದರಿಂದ ಗದಗ ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಹನುಮೇಶ ಎಂ. ಗಂಗರಾಹುತರ ಇವರು ಬ್ಯಾಂಕುಗಳನ್ನು ಸಾರ್ವಜನಿಕ ಆಸ್ತಿಯಾಗಿ ಉಳಿಸಿಕೊಳ್ಳುವ ಸಲುವಾಗಿ ಅಗತ್ಯ ಸಿಬ್ಬಂದಿ ನೇಮಕಾತಿಗೆ ಒತ್ತಾಯಿಸಿ, ಕೆಲಸದ ಹೊರಗುತ್ತಿಗೆ ವಿರೋಧಿಸಿ, ಡಿ.೪ ರಿಂದ ಜನೇವರಿ ೨೦ ರ ತನಕ ವಿವಿಧ ಬ್ಯಾಂಕುಗಳಲ್ಲಿ ಹಾಗೂ ವಿವಿಧ ಹಂತಗಳಲ್ಲಿ ಪ್ರಾದೇಶಿಕವಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ಮುಷ್ಕರ ಆಂದೋಲನಾ ರೂಪಿಸಲಾಗಿದೆ. ಗದಗ ಜಿಲ್ಲೆಯಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಮುಷ್ಕರವನ್ನು ನಡೆಸಲು ದೇಶದ ಅನೇಕ ಕಾರ್ಮಿಕರ ನಾಯಕರು  ಚುರುಕಾಗಿ ಕೆಲಸ ಆರಂಭಿಸಿದ್ದಾರೆ.

 ಮತ್ತು ಗದಗ ನಗರಕ್ಕೆ ಶೀಘ್ರದಲ್ಲೇ ಮಟ್ಟದ ಪದಾಧಿಕಾರಿಗಳು ಆಗಮಿಸಿ ಈ ಮುಷ್ಕರದ ಮಹತ್ವವನ್ನು ಜನರಿಗೆ ತಿಳಿಸಲಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಹನುಮೇಶ ರವರು ತಿಳಿಸಿದರು.

ನಾವು ದಿನನಿತ್ಯ ಜನರಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ನೀಡುತ್ತೇವೆ ಮತ್ತು  ನಾವು ನೀಡುತ್ತಿರುವ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ.

Leave a Comment