ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ:ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕ

ರಾಯಚೂರು:2023-24ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಮುಂಗಾರಿ ಹಂಗಾಮಿನ ಬೆಳೆಗಳ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು.ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು ಪ್ರವೇಶ ಶುಲ್ಕ ಪಾವತಿಸಬೇಕಾಗಿರುತ್ತದೆ. ಸಾಮಾನ್ಯ ರೈತರಿಗೆ 100 ರೂಪಾಯಿ ಹಾಗೂ (ಪ.ಜಾ ಹಾಗೂ ಪ.ಪಂ ರೂ.25) ನಿಗಧಿಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ದಾಖಲೆಗಳು :

(ಸ್ಪರ್ಧಿಸಲು ಭಾಗವಹಿಸಿರುವ ರೈತರು ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು) ಅರ್ಜಿಯ ಜೊತೆಗೆ ಪಹಣಿ ಪತ್ರಿಕೆ ಶುಲ್ಕ ತುಂಬಿದಕ್ಕೆ ಚಾಲನ್/ರಸೀದಿ. ಜಾತಿ ಪ್ರಮಾಣ ಪತ್ರ (ಪ.ಜಾ/ಪ.ಪಂನ್ನು ಸಲ್ಲಿಸಬೇಕು.

ಸ್ಪರ್ಧಿಸಲು ಅನರ್ಹತೆ :

ಯಾವುದೇ ಹಂತದಲ್ಲಿ ಒಮ್ಮೆ ಬಹುಮಾನ ಪಡೆದ ರೈತರು ಮುಂದಿನ ಮೂರು ವರ್ಷಗಳ ಅವಧಿಗೆ ಹಂತದ ಬೆಳೆ ಸ್ಪರ್ಧೆಯ ಬಹುಮಾನಕ್ಕೆ ಅರ್ಹರಾಗಿರುವುದಿಲ್ಲ.

ಬೆಳೆಯ ಮೇಲಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ರಾಜ್ಯಮಟ್ಟದ ಸ್ಪರ್ಧೆ: ಮುಂಗಾರು ಹಂಗಾಮಿನ ತೊಗರಿ (ಮಳೆಯಾಶ್ರಿತ), ಭತ್ತ (ನೀರಾವರಿ), (ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ಸಜ್ಜೆ (ಮಳೆಯಾಶ್ರಿತ), ಮುಸುಕಿನ ಜೋಳ (ಮಳೆಯಾಶ್ರಿತ), ಬೆಳೆಯನ್ನು ಆಯ್ಕೆ ಮಾಡಿದೆ. ಹಿಂಗಾರು ಹಂಗಾಮಿನ ಕಡಲೆ (ಮಳೆಯಾಶ್ರಿತ) ಜೋಳ (ಮಳೆಯಾಶ್ರಿತ) ಸ್ಪರ್ಧಿಸಬಹುದಾಗಿದೆ.

ಈ ಬೆಳೆಗಳಲ್ಲಿ ಅರ್ಜಿ ಸಲ್ಲಿಸಲು ಕೊನೆಯ ಆ.31-08- 2023 ಮುಂಗಾರು ಹಂಗಾಮಿಗೆ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Comment