ಹೊಸ ನ್ಯಾಯಬೆಲೆ ಅಂಗಡಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನಾಂಕ 

ಆತ್ಮೀಯ ಬಾಂಧವರೇ, ಹೊಸ ನ್ಯಾಯಬೆಲೆ ಅಂಗಡಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆದಷ್ಟು ಬೇಗ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿ ವಿನಂತಿ.

ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಪರಾಯ ವ್ಯವಸ್ಥೆಯಲ್ಲಿರುವ ಕರಮುಡಿ, ಅಮರಗೋಳ, ಬೊಮ್ಮಸಾಗರ, ಸಂದಿಗವಾಡ, ಚಿಕ್ಕಮಣ್ಣೂರು, ಕುರಡಗಿ ಗ್ರಾಮಗಳಲ್ಲಿ ಹೊಸ ನ್ಯಾಯ ಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅಗಸ್ಟ ೨೨ ಕೊನೆಯ ದಿನವಾಗಿದ್ದು ಅರ್ಜಿಯನ್ನು ರೋಣ ತಹಶೀಲ್ದಾರರ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ರೊಣ ತಹಶೀಲ್ದಾರರ ಕಚೇರಿ, ಅಥವಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರ ಕಚೇರಿ, ಜಿಲ್ಲಾಡಳಿತ ಭವನ, ಗದಗ ಇವರ ಕಾರ್ಯಾಲಯದಿಂದ ಪಡೆಯಬಹುದಾಗಿದೆ.

 

Leave a Comment