ಕಿಟ್ ಪರಿಕರಗಳ ಸೌಲಭ್ಯಕ್ಕೆ ಪ.ಪಂ ಕುರಿಗಾರರಿಂದ ಅರ್ಜಿ ಆಹ್ವಾನ:ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 6 ಕೊನೆಯ ದಿನಾಂಕ

ಕರ್ನಾಟಕ ಕುರಿ ಮತ್ತ ಉಣ್ಣೆ ಅಭಿವೃದ್ಧಿ ನಿಗಮದ ಹಾವೇರಿ ಕಚೇರಿಯಿಂದ ೨೦೨೨-೨೩ನೇ ಸಾಲಿನಲ್ಲಿ ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರುವ ಸಂಚಾರಿ-ಅರೇಸಂಚಾರಿ ಕುರಿಗಾರಿಗೆ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ಪಡೆಯಲು ಕಿಟ್ ಪರಿಕಗಳ ಸೌಲಭ್ಯಕ್ಕೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಈಗಾಗಲೇ ಪರಿಶಿಷ್ಟ ಜಾತಿಯ ಇಬ್ಬರು ಹಾಗೂ ಸಾಮಾನ್ಯ ವರ್ಗದ ಏಳು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ನಿಗದಿತ ಸಮಯದಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಅರ್ಜಿಗಳು ಸಲ್ಲಿಕೆಯಾದ ಕಾರಣ ಪರಿಶಿಷ್ಟ ಪಂಗಡದ ಓರ್ವ ಅಭ್ಯರ್ಥಿ ಆಯ್ಕೆಗೆ ಪುನಃ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯನ್ನು ಹತ್ತಿರದ ಪಶು ಆಸ್ಪತ್ರೆಗಳಲ್ಲಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳಿ(ಆಡಳಿತ), ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಚೇರಿಗೆ ಸೆಪ್ಟೆಂಬರ್ ೬ರೊಳಗಾಗಿ ಸಲ್ಲಿಸಬೇಕು

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕುರಿ ಮತ್ತ ಉಣ್ಣೆ ಅಭಿವೃದ್ಧಿ ನಿಗಮದ ಹಾವೇರಿ ಕಚೇರಿ ಸಂಪರ್ಕಿಸಲು ನಿಗಮದ ಸಹಾಯಕ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(Pradhan mantri fasal bhima yojana)

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗಾಗಿ ಬೆಳೆ ವಿಮಾ ಪದ್ಧತಿಯನ್ನು ಸರಳಗೊಳಿಸಲು ಜಿಲ್ಲೆಗೊಂದು ಕಂಪನಿಯನ್ನು ಸರ್ಕಾರವು ನೇಮಿಸಿದ್ದು, ನಿಮ್ಮ ಜಿಲ್ಲೆಯ ಕಂಪನಿ ಯಾವುದು ಎಂದು ಚೆಕ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ನಮ್ಮ ರಾಜ್ಯದಲ್ಲಿ ಇರುವಂತಹ ಇನ್ಸೂರೆನ್ಸ್ ಕಂಪನಿಗಳ ಪಟ್ಟಿ ಇಂತಿದೆ

Bajaj allianz GIC

SBI General Insurance

Future general India Insurance Company

HDFC ergo General Insurance Company Limited

Universal sompo GIC

SBI General Insurance

Agriculture insurance company of India

ICICI Lombard GIC

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

– ಮೊಟ್ಟ ಮೊದಲಿಗೆ ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

– ಡೈರೆಕ್ಟರ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.samrakshane.karnataka.gov.in/

insurance

ಆಗ ಓಪನ್ ಆಗುವಂತಹ ಹೊಸ ಟ್ಯಾಬ್ ನಲ್ಲಿ, ವರ್ಷ ಹಾಗೂ ಋತುವನ್ನು ಆಯ್ಕೆ ಮಾಡಿ ಸಮ್ಮಿಟ್ ಬಟನ್ ಮೇಲೆ ಒತ್ತಿ

– ಆಗ ನಿಮಗೆ ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ಓಪನ್ ಆಗುತ್ತದೆ

insurance

– ಅದರಲ್ಲಿ ಫಾರ್ಮರ್ಸ್ ವಿಭಾಗದಲ್ಲಿ know your Insurance Company ಎಂಬ ಆಕ್ಷನ್ ಮೇಲೆ ಕ್ಲಿಕ್ ಮಾಡಿ.

– ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

PMFBY

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕೇಂದ್ರ ಸರ್ಕಾರದ ಬಂದು ಅದ್ಭುತ ಯೋಜನೆಯಾಗಿದ್ದು, ಯೋಜನೆಯಡಿ ನಾವು ಬೆಳೆಯುವಂತಹ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ.

ನಾವು ನಮ್ಮ ಜೀವನದಲ್ಲಿ ನಮ್ಮ ವಾಹನಗಳಿಗೆ, ಮೊಬೈಲ್ ಗಳಿಗೆ ಹೇಗೆ ಹಲವಾರು ವಸ್ತುಗಳಿಗೆ ವಿಮೆಯನ್ನು ಮಾಡಿಸುತ್ತೇವೆ, ಆಗ ಅವುಗಳಿಗೆ ಏನಾದರೂ ಡ್ಯಾಮೇಜದಲ್ಲಿ ಇನ್ಸೂರೆನ್ಸ್ ಕಂಪನಿಯಿಂದ ನಮಗೆ ವಿಮೆ ಕ್ಲೇಮ್ ಆಗುತ್ತದೆ.

ಅದೇ ರೀತಿ ಹಲವಾರು ವರ್ಷಗಳಿಂದ ರೈತರ ಬೆಳೆಗಳು ಹಾನಿಯಾಗುತ್ತಿದ್ದು ರೈತರಿಗೆ ನೆರವಾಗಲು ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ರೈತರು ತಮ್ಮ ಹೊಲದಲ್ಲಿ ತಾವು ಬೆಳೆಯುವಂತಹ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು, ಹಾಗೂ ಮುಂದೆ ಬೆಳಗಳು ಆನೆಯದಲ್ಲಿ ರೈತರಿಗೆ ಜೆರಾಕ್ಸ್ ಕಂಪನಿಗಳ ವತಿಯಿಂದ ಬೆಳೆವಿಮೆ ಕ್ಲೇಮ್ ಆಗುತ್ತದೆ.

krishisuddi whatsapp group

Leave a Comment