ಗದಗ, ೭ : ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ವಿತರಿಸುವ ಉದ್ದೇಶದಿಂದ ಗದಗ ಜಿಲ್ಲೆ ಸಾಮಾನ್ಯ ವರ್ಗ ಘಟಕದ ವೈಯಕ್ತಿಕ ಫಲಾನುಭವಿಗೆ ೧ ಕಂಬೈನಡ್ ಹಾರ್ವೆಸ್ಟರ್ ಹಬ್ ಕ್ರಿಯಾ ಯೋಜನೆ ಅನುಮೋದನೆಗೊಂಡಿರುತ್ತದೆ.

ಸದರಿ ಹಬ್‌ನಲ್ಲಿ ಕಡ್ಡಾಯವಾಗಿ ಕಂಬೈನ್ಸರ್ ಹಾರ್ವೆಸ್ಟರ್ ಮತ್ತು ಟ್ರಾಕ್ಟರ್ ಆಪರೇಟೆಡ್ ಬೇಲರ್ಸ ಇರತಕ್ಕದ್ದು. ಸದರಿ ಯೋಜನೆಯಡಿ ಸಾಮಾನ್ಯ ವರ್ಗ ಘಟಕದಡಿ ವೈಯಕ್ತಿಕ ಫಲಾನುಭವಿಗೆ ಗರಿಷ್ಠ ೪೦ ಲಕ್ಷ (ಶೇ. ೫೦ ಸಹಾಯಧನ) ಇರುತ್ತದೆ. ಆಸಕ್ತ ರೈತರು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ. ಫೆ.೨೦ ರೊಳಗಾಗಿ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸುವುದು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಜಿಲ್ಲಾಮಟ್ಟದ ಉಪಕರಣ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಉಪ ಕೃಷಿ ನಿರ್ದೇಶಕರಿಗೆ ಸಲ್ಲಿಸುವುದು.

ನಂತರ ಉಪ ಕೃಷಿ ನಿರ್ದೇಶಕರ ಕಛೇರಿಯಿಂದ ಸ್ವೀಕೃತೆಗೊಂಡ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾಮಟ್ಟದ ಉಪಕರಣ ಸಮಿತಿಯಲ್ಲಿ ಮಂಡಿಸಲಾಗುವುದು.

ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಒಂದೇ ಹಬ್‌ಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ ಅರ್ಹಗೊಂಡಲ್ಲಿ ಲಾಟರಿ ಮುಖಾಂತರ ಫಲಾನುಭವಿಯನ್ನು ಆಯ್ಕೆ ಮಾಡಲಾಗುವುದು.

ನಂತರ ಜಂಟಿ ಕೃಷಿ ನಿರ್ದೇಶಕರ ಕಛೇರಿಯಿಂದ ಅಯ್ಕೆಯಾದ ಫಲಾನುಭವಿಗೆ ಕೃಷಿ ಯಂತ್ರೋಪಕರಣಗಳನ್ನು ದಾಸ್ತಾನೀಕರಿಸಲು ಕಾರ್ಯಾದೇಶ ನೀಡಲಾಗುವುದು.

ಹಬ್‌ವಾರು ಸ್ವೀಕೃತವಾದ ಯಂತ್ರೋಪಕರಣಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಮತ್ತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಪರಿಶೀಲಿಸಿ, ಸಹಾಯಧನವನ್ನು ನಿಯಮಾನುಸಾರ ಸಂಬಂಧಿಸಿದ ಸಾಲದ ಬ್ಯಾಂಕ್ ಖಾತೆಗೆ ಕ್ರೆಡಿಟ್ ಲಿಂಕಡ್ ಬ್ಯಾಕ್ ಎಂಡೆಡ್ ಸಬ್ಸಿಡಿ ಮೂಲಕ ಜಮಾ ಮಾಡಲಾಗುವುದು.

ಫಲಾನುಭವಿಗಳು ಅರ್ಜಿಯೊಂದಿಗೆ ಪಹಣಿ ಪ್ರತಿ, ಆಧಾರ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಎಫ್.ಐ.ಡಿ. ಸಂಖ್ಯೆ, ರೂ.೨೦ ಚಾಪಾ ಕಾಗದದ ಮೇಲೆ ಹಬ್ ನ್ನು ಪರಭಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ (ನೋಟರಿಯೊಂದಿಗೆ), ಸಹಾಯಧನವು ಕ್ರೆಡಿಟ್ ಲಿಂಕ್‌ಡ ಬ್ಯಾಕ್ ಎಂಡೆಡ್ ಸಬ್ಸಿಡಿ ಆಗಿರುವುದರಿಂದ ಸಂಬಂಧಿಸಿರುವ ಬ್ಯಾಂಕ್ ನಿಂದ ತಾತ್ವಿಕ ಸಾಲ ಮಂಜೂರಾತಿ ಪತ್ರ (ಇನ್ ಪ್ರಿನ್ಸಿಪಲ್ ಲೋನ್ ಸ್ಯಾಂಕ್ಷನ್ ಲೆಟರ್) ಇವುಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.

By Raju

Leave a Reply

Your email address will not be published. Required fields are marked *