ಇದುವರೆಗೂ ಗೃಹಜೋತಿ ಯೋಜನೆ ಅಡಿ ನೋಂದಣಿ ಮಾಡಿದವರು ಎಷ್ಟು ಜನ ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ? ನೀವು ಬೇಗ ಬೇಗ ನೋಂದಣಿ ಮಾಡಿ

ಆತ್ಮೀಯ ಬಾಂಧವರೇ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ನೀಡಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಗೃಹ ಜ್ಯೋತಿ ಯೋಜನೆ ಅಡಿ ಎರಡು ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತಹ ಯೋಜನೆ ಯಾದ ಈ ಯೋಜನೆಯಲ್ಲಿ ಇದುವರೆಗೆ ಎಷ್ಟು ಜನ ನೋಂದಣಿ ಮಾಡಿದ್ದಾರೆ ನಿಮಗೆ ಗೊತ್ತಾ.

ಕೇಳಿದರೆ ಶಾಕ್ ಆಗ್ತೀರಾ, ನಿನ್ನೆ ರಾತ್ರಿ 8 ಗಂಟೆಯವರೆಗೆ ಅಂದರೆ ಜೂನ್ 23 ರಾತ್ರಿ 8 ಗಂಟೆಗಳವರೆಗೆ 32.45 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ.

ಸರ್ವ‌ ಸಮಸ್ಯೆಗೆ ಪರಿಹಾರ ಕಂಡುಕೊಂಡ ಬಳಿಕ ಗೃಹಜ್ಯೋತಿ ನೋಂದಣಿಗೆ ಇನ್ನಷ್ಟು ವೇಗ ಸಿಕ್ಕಿದ್ದು, ಶುಕ್ರವಾರ ಸಂಜೆ 8 ಗಂಟೆವರೆಗೆ 32,45,396 ಗ್ರಾಹಕರು ನೋಂದಣಿ ಗೊಂಡಿದ್ದಾರೆ. ಇ ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ರಾಜ್ಯದ 2000 ವಿದ್ಯುಚ್ಚಕ್ತಿ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರೀಯೆ ವೇಗ ಪಡೆದುಕೊಂಡಿದ್ದು, ಗುರುವಾರದ ಅಂತ್ಯಕ್ಕೆ 8, 91,820 ಗ್ರಾಹಕರು ನೋಂದಣಿ ಮಾಡಿ ಕೊಂಡಿದ್ದರು.

ಶುಕ್ರವಾರದ ಅಂತ್ಯಕ್ಕೆ 8,94,548 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿ ದ್ದಾರೆ. ಸೇವಾ ಸಿಂಧು ಪೋರ್ಟಲ್ ಮೂಲಕ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ನಲ್ಲಿ ನೋಂದಣಿ ಏಕಕಾಲಕ್ಕೆ ಆರಂಭಗೊಂಡಿತ್ತು

ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವು ದೇ ಗಡುವನ್ನು ನಿಗದಿಪಡಿಸದ ಕಾರಣ ಗ್ರಾಹಕರು ಆತಂಕಪಡದೇ https://sevasindhugs.karnataka.gov.in ಪೋರ್ಟಲ್‌ನಲ್ಲಿ ನೋಂದಾಯಿಸಬಹುದು ಎಂದುರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

ನೋಂದಣಿ ಮಾಡಲು ಬೇಕಾಗುವಂತಹ ದಾಖಲೆಗಳು :

– ಕರೆಂಟ್ ಬಿಲ್

– ಆಧಾರ್ ಕಾರ್ಡ್

– ಮೊಬೈಲ್ ನಂಬರ್

ಈ ಮೂರು ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಸರಳವಾಗಿ ಗೃಹಜೋತಿ ಯೋಜನೆ ಅಡಿ ನೋಂದಾಯಿಸಿಕೊಳ್ಳಬಹುದಾಗಿದೆ.

ಆನ್ಲೈನ್ ಮೂಲಕ ಸ್ವತಃ ನಾವೇ ನೋಂದಣಿ ಮಾಡುವುದು ಹೇಗೆ?

– ಮೊಟ್ಟ ಮೊದಲು ಈ ಕೆಳಗೆ ನೀಡಿರುವಂತಹ ಲಿಂಕ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ :https://sevasindhugs.karnataka.gov.in/index.

Gruhajyoti

ಅಲ್ಲಿ ಕೆಳಗಡೆ ಕಾಣುವಂತಹ ಗೃಹ ಜ್ಯೋತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ :https://sevasindhugs.karnataka.gov.in/gsdn/

ಅಲ್ಲಿ ಕೊಟ್ಟಿರುವಂತಹ ಆಪ್ಷನ್ ಮೇಲೆ ಟಿಕ್ ಮಾಡಿ ಕೆಳಗೆ ನೀಡಿರುವಂತಹ ಮಾಹಿತಿಯನ್ನು ನಮೂದಿಸಿ ಸಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ನಂತರ ಓಪನ್ ಆಗುವಂತಹ ಹೊಸ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ

ಹೊಸ ಪೇಜ್ ನಲ್ಲಿ ನೀವು ನಿಮ್ಮ ಮನೆಯ ಕರೆಂಟ್ ಬಿಲ್ ನಂಬರ್ ನಲ್ಲಿರುವಂತಹ ಖಾತೆ ಸಂಖ್ಯೆಯನ್ನು ನಮೂದಿಸಿ

ನಂತರ ಅದು ಆ ಮನೆಯ ಮಾಲೀಕರು ಹಾಗೂ ಅವರ ಮನೆಯ ಅಡ್ರೆಸ್ ಅನ್ನು ಅಲ್ಲಿ ತೋರಿಸುತ್ತದೆ

ಒಂದು ವೇಳೆ ನೀವು ಮನೆಯ ಮಾಲೀಕರಾಗಿದ್ದರೆ ಸ್ವತಹ ಮಣೆ ಮಾಲಿಕ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ

ಅಥವಾ ನೀವು ಆ ಮನೆಯಲ್ಲಿ ಬಾಡಿಗೆಯಲ್ಲಿದ್ದರೆ ಬಾಡಿಗೆದಾರ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ

ಅಥವಾ ನಿಮ್ಮ ತಂದೆ ಅಥವಾ ನಿಮ್ಮ ತಾತನವರ ಹೆಸರಿನಲ್ಲಿ ಆ ಮನೆಯಲ್ಲಿ ಇದ್ದರೆ ಮನೆಯ ಸದಸ್ಯೆ ಎಂಬ ಅಕ್ಷರವನ್ನು ಕ್ಲಿಕ್ ಮಾಡಿ

ಕೆಳಗಡೆ ನೀಡಿರುವಂತಹ ಕೊನೆಯ ಕಾಲದಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು

Submit ಬಟನ್ಮೇ ಲೆ ಕ್ಲಿಕ್ ಮಾಡುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ನಿಮಗೆ ಒಂದು ಸ್ವೀಕೃತ ಕಾಫಿಯನ್ನು ನೀಡಲಾಗುವುದು.

9 thoughts on “ಇದುವರೆಗೂ ಗೃಹಜೋತಿ ಯೋಜನೆ ಅಡಿ ನೋಂದಣಿ ಮಾಡಿದವರು ಎಷ್ಟು ಜನ ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ? ನೀವು ಬೇಗ ಬೇಗ ನೋಂದಣಿ ಮಾಡಿ”

Leave a Comment