ಲಕ್ಷೇಶ್ವರ, ೨೩ : ತಾಲೂಕಿನ ರೈತರಿಗೆ ೨೦೨೨-೨೩ ನೇ ಸಾಲಿನಲ್ಲಿ ಸಹಾಯಧನದಲ್ಲಿ ತಾಡಪತ್ರಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದ್ದು, ರೈತರು ಕೃಷಿ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಹೇಳಿದರು.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ನೀಡಿದ ಅವರು ೨೦೨೨- ೨೩ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿ ತಾಡಪತ್ರಿ ವಿತರಣೆಗಾಗಿ ತಾಲ್ಲೂಕಿನ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದಿನಾಂಕ : ೨೫-೦೫-೨೦೨೩ ರಿಂದ ೦೯-೦೬-೨೦೨೩ ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ತಾಡಪತ್ರಿ ತೆಗೆದುಕೊಂಡಿರುವ ಫಲಾನುಭವಿಗಳ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಪೂರೈಕೆಯಾದ ತಾಡಪತ್ರಿಗಳ ಸಂಖ್ಯೆ ಮೀರಿ ಅರ್ಜಿಗಳು ಸ್ವೀಕೃತವಾದಲ್ಲಿ ಅರ್ಜಿ ಸಲ್ಲಿಸಿದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರಿಗೆ ದಿನಾಂಕ : ೧೫-೦೬-೨೦೨೩ ಗುರುವಾರದಂದು ಮುಂಜಾನೆ ೧೧-೦೦ ಗಂಟೆಗೆ ರೈತ ಸಂಪರ್ಕ ಕೇಂದ್ರ ಲಾಟರಿ ಪ್ರಕ್ರಿಯೆ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

By Raju

Leave a Reply

Your email address will not be published. Required fields are marked *