ಪರಿಕರ ಕಿಟ್‌ ವಿತರಿಸುವ ಅರ್ಜಿ ಆಹ್ವಾನ:ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ

2022-23ನೇ ಸಾಲಿನ ಯಾದಗಿರಿ ಜಿಲ್ಲೆಯಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ)ಯಿಂದ ಯೋಜನೆಗಳ ವಲಸೆ ಕುರಿಗಾರರಿಗೆ ಎಂದು ಯಾದಗಿರಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಕ ನಿರ್ದೇಶಕರು ಅವರು ತಿಳಿಸಿದ್ದಾರೆ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ಬೆಂಗಳೂರಿನಲ್ಲಿ ನೊಂದಾಯಿಸಿಕೊಂಡಿರುವ ಯಾದಗಿರಿ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಒಟ್ಟು 15 ಸಂಚಾರಿ, ಅರೆಸಂಚಾರಿ ಕುರಿಗಾಹಿ ಸದಸ್ಯರುಗಳಿಗೆ ಮೊಬೈಲ್ ಟೆಂಟ್, ಮ್ಯಾಟ್, ಸೋಲಾರ್ ಟಾರ್ಚ್, ರೇನ್ ಕೋಟ್‌ ಹಾಗೂ ಇತರೆ ರಕ್ಷಣಾ ಪರಿಕರ ಕಿಟ್‌ಗಳನ್ನು ಉಚಿತವಾಗಿ ವಿತರಿಸಲು 2022-23ನೇ ಸಾಲಿಗಾಗಿ ವಲಸೆ ಕುರಿಗಾರರಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಫಲಾನುಭವಿಗಳು, ನಿಗದಿತ ನಮೂನೆಯ ಅರ್ಜಿಗಳನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ಸಹಾಯಕ ನಿರ್ದೇಶಕರ ಕಛೇರಿ ಯಾದಗಿರಿ ಜಿಲ್ಲೆಯಿಂದ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು 2023ರ ಜುಲೈ 31ರ ಸಂಜೆ 5 ಗಂಟೆ ಒಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ), ಪಶು ಆಸ್ಪತ್ರೆ ಆವರಣ, ಸ್ಟೇಶನ್ ರೋಡ್ ಯಾದಗಿರಿ, ಮೊ.ನಂ.9448177345, 9739300997ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Comment