free house

ಯಾದಗಿರಿ : ಜುಲೈ 12, (ಕ.ವಾ) : 2022-23ನೇ ಸಾಲಿನ ಶಹಾಪೂರ ನಗರಸಭೆಯಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ (ಮುನಸಿಪಾಲಟಿ) ಹಂತ-4ರ ಅರ್ಜಿ ಅಹ್ವಾನಿಸಲಾಗಿದೆ ಎಂದು ಶಹಾಪುರ ನಗರಸಭೆ ಪೌರಾಯುಕ್ತರು ಅವರು ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಸಿಪಾಲಟಿ) ಹಂತ-ತಿರ ಯೋಜನೆಗಳು ವ್ಯಕ್ತಿ ಸಂಬಂಧಿತ ಅನುಕೂಲಗಳು ಶೇ.17.15ರಷ್ಟು ಪರಿಶಿಷ್ಟ ಜಾತಿಯ ಕಲ್ಯಾಣ ಕಾರ್ಯಕ್ರಮ, ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಅರ್ಜಿಸಲ್ಲಿಸಬೇಕು, ವ್ಯಕ್ತಿ ಸಂಬಂಧಿತ ಅನುಕೂಲಗಳು ಶೇ.6.95 ರಷ್ಟು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳು, ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಆರ್ಜಿಸಲ್ಲಿಸಬೇಕು.

ಇತಲೆ ಬಡಜನರಿಗೆ ವ್ಯಕ್ತಿ ಸಂಬಂಧಿತ ಅನುಕೂಲಗಳು ಶೇ.7.25 ರಷ್ಟು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳು, ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಅರ್ಜಿಸಲ್ಲಿಸಬೇಕು.

ವಿಕಲಚೇತನ ಕಾರ್ಯಕ್ರಮಗಳಿಗೆ ಶೇ.5 ರಷ್ಟು ಕಲ್ಯಾಣ ಕಾರ್ಯಕ್ರಮಗಳು, ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಅರ್ಜಿಸಲ್ಲಿಸಬೇಕು.

ವೈಯುಕ್ತಿಕ ಯೋಜನೆಗಳ ಅನುಮೋದಿತ ಕ್ರೀಯಾ ಯೋಜನೆಯ ಕಾರ್ಯಕ್ರಮಗಳಂತೆ ಶಹಾಪುರ ನಗರದ ಆಸಕ್ತಿವುಳ್ಳ ಅಭ್ಯರ್ಥಿಗಳ ಶಹಾಪುರ ನಗರಸಭೆ ಕಛೇರಿಯಲ್ಲಿ 2023ರ ಜುಲೈ 25ರ ಸಂಜೆ 4 ಗಂಟೆ ಒಳಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಸಲ್ಲಿಸಬೇಕು, ನಂತರ ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಹತೆ, ಷರತ್ತುಗಳು :

ಆರ್ಜಿದಾರರು ಶಹಾಪೂರ ನಗರಸಭೆಯ ಖಾಯಂ ಲಗತ್ತಿಸಬೇಕು.

ವಿಕಲಚೇತನ ಸೌಲಭ್ಯ ಪಡೆಯಲು ವೈದ್ಯಾಧಿಕಾರಿಗಳಿಂದ ಅಂಗವಿಕಲರ ಪ್ರಮಾಣ ಪತ್ರ ಪಡೆದಿರಬೇಕು,

ಕನಿಷ್ಠ 18 ರಿಂದ 45 ವರ್ಷ ಒಳಾಗಿರಬೇಕು,

ವಯಸ್ಸಿನ ದಾಖಲೆಗಾಗಿ ಅಂಕಪಟ್ಟಿ ಅಥವಾ ಟಿ.ಸಿ ಇಲ್ಲದ ಪಕ್ಷದಲ್ಲಿ ವಯಸ್ಸಿನ ದೃಢೀಕರಣ ಪ್ರತಿ ಲಗತ್ತಿಸಬೇಕು.

ಕಡ್ಡಾಯವಾಗಿ ಬ್ಯಾಂಕ್‌ ಖಾತೆ ಹೊಂದಿರಬೇಕು.

ಕಡ್ಡಾಯವಾಗಿ ಲಗತ್ತಿಸಬೇಕಾದ ದಾಖಲೆಗಳು:

ಸರ್ಕಾರದಿಂದ ಯಾವುದೇ ಈ ಅರ್ಜಿದಾರರು ನಗರಸಭೆಯ ಕಛೇರಿಯಿಂದ ಪಡೆದು ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸುವುದು.

ಜಾತಿ ಮತ್ತು ಅದಾಯ ಪ್ರಮಾಣ ಪತ್ರ,

ವಾಸಸ್ಥಳ ಪ್ರಮಾಣ ಪತ್ರ,

ಮತದಾರರ ಗುರುತಿನ ಚೀಟಿ,

ಲೇಷನ್ ಕಾರ್ಡ್ ನಕಲು ಪ್ರತಿ (ಬಿ.ಪಿ.ಎಲ್),

ಆಧಾರ ಕಾರ್ಡ್ ನಕಲು ಪ್ರತಿ,

ಬ್ಯಾಂಕ್‌ ಖಾತೆ ನಕಲು ಪ್ರತಿ,

ಭಾವ ಚಿತ್ರ 2,

ವಾರ್ಡ್ ಸಂಖ್ಯೆ,

ಮೊಬೈಲ್ ನಂ. ವಿಳಾಸ ಕಡ್ಡಾಯವಾಗಿ ನಮೂದಿಸಬೇಕು.

ಶಹಾಪೂರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಮನೆ ರಹಿತ ಹಾಗೂ ನಿವೇಶನ ರಹಿತ ಎಂಬುವದರ ಕುರಿತು 20 ರೂ.ಗಳ ಛಾಪಾ ಕಾಗದದ ಮೇಲೆ ಪ್ರಮಾಣ ಪತ್ರ ಸಲ್ಲಿಸಬೇಕು.

ಸರ್ಕಾರದಿಂದ ಯಾವುದೇ ಈ ಹಿಂದೆ ಸೌಲಭ್ಯ ಪಡೆಯದ ಬಗ್ಗೆ 20 ರೂ.ಗಳ ಛಾಪಾ ಕಾಗದದ ಹಿಂದೆ ಸೌಲಭ್ಯ ಪಡೆಯದೆ ಇರುವ ಬಗ್ಗೆ ದೃಢೀಕರಣ ನೋಟರಿ ಪ್ರಮಾಣ ಪತ್ರ ಸಲ್ಲಿಸಬೇಕು.

ಅರ್ಜಿಯನ್ನು ಒಬ್ಬರೂ ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಬೇಕು, ನಿಗಧಿತ ಗುರಿಗಿಂತ ಹೆಚ್ಚು ಆರ್ಜಿಗಳು ಬಂದಲ್ಲಿ ಲಾಟರಿ ಮುಖಾಂತರ ಆಯ್ಕೆ ಮಾಡಲಾಗುವುದು ಆಯ್ಕೆಯಾದ ಅಭ್ಯರ್ಥಿಗಳು ಪಟ್ಟಿಯನ್ನು ನಿಯಮಾನುಸಾರ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

By Raju

Leave a Reply

Your email address will not be published. Required fields are marked *