ವಿದ್ಯುತ್‌ ಮಗ್ಗ ಖರೀದಿಗೆ ಸಹಾಯಧನ:ಇಂದೇ ಅರ್ಜಿ ಸಲ್ಲಿಸಿ

ಪ್ರಸಕ್ತ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೈಮಗ್ಗ ನೇಕಾರರಿಗೆ ಅಥವಾ ವಿದ್ಯುತ್‌ ಮಗ್ಗ ಕೂಲಿ ನೇಕಾರರಿಗೆ ೦೨ ವಿದ್ಯುತ್‌ ಮಗ್ಗ ಮತ್ತು ಸಲಕರಣೆ ಖರೀದಿಸಲು ಶೇ.೯೦ ರಷ್ಟು ಅಂದರೆ ರೂ.೩.೧೫ ಲಕ್ಷಗಳ, ೨೪ ಲಿವರ್‌ ಡಾಬಿಹೊಂದಿದ ವಿದ್ಯುತ್‌ ಮಗ್ಗಗಳಿಗೆ ಸಹಾಯಧನ ಮಂಜೂರು ಮಾಡಲು ಅವಕಾಶವಿರುತ್ತದೆ..

ಆಸಕ್ತ ವಿದ್ಯುತ್ ಮಗ್ಗ ಕೂಲಿ ಅಥವಾ ವಿದ್ಯುತ್‌ ಮಗ್ಗದ ಬಗ್ಗೆ ಜ್ಞಾನವಿರುವ ಕೈಮಗ್ಗ ನೇಕಾರರ ವಿದ್ಯುತ್‌ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ.

ಅರ್ಹತೆ :

ಆಸಕ್ತ ನೇಕಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆಸೇರಿದವರಾಗಿರಬೇಕು,

ವಿದ್ಯುತ್ و ಮಗ್ಗ ಅಳವಡಿಸಲು ಬೇಕಾಗುವ ಸೂಕ್ತ ಸ್ವಂತ ಸ್ಥಳಾವಕಾಶ ಹಾಗೂ ಕನಿಷ್ಠ ೩ ಎಚ್‌.ಪಿ ಸಂಪರ್ಕ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಆಯ್ಕೆಯಾದ ಫಲಾನುಭವಿಗಳು ಉಪ ನಿರ್ದೇಶಕರ ವಿದ್ಯುತ್‌ ಮಗ್ಗ ಮತ್ತು ೨೪ ಲಿವರ್‌ಡಾಬಿ ಖರೀದಿಸಿ, ಸ್ಥಾಪಿಸಿ ಉತ್ಪಾದನೆ ಪ್ರಾರಂಭಿಸಿದ ನಂತರ ಘಟಕ ವೆಚ್ಚದ ಶೇ.೯೦ ರಷ್ಟುಸಹಾಯಧನವನ್ನು ಮಂಜೂರಿಸಲಾಗುತ್ತದೆ.

ಭರ್ತಿ ಮಾಡಿದ ಅರ್ಜಿಗಳನ್ನು ಈ ಕಚೇರಿಗೆ ಸಲ್ಲಿಸಲು ಕೊನೆಯ ನವೆಂಬರ ೩೦ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಬಾಗಲಕೋಟೆ ದೂಸಂ. ೦೮೩೫೪-೨೩೫೪೬೩ ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Comment