ನನ್ನ ಖಾತೆಗೆ ಇಂದು ಎರಡನೇ ತಿಂಗಳ ಅನ್ನಭಾಗ್ಯ ಯೋಜನೆಯ 510 ರೂಪಾಯಿಗಳು ಜಮೆ? ನಿಮ್ಮ ಖಾತೆಗೂ ಜಮೆಯಾಗಿದೆಯೇ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಘೋಷಿಸಿದಂತಹ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಈಗಾಗಲೇ ಶಕ್ತಿ ಯೋಜನೆ, ಗೃಹಜೋತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈಗ ಅನ್ನ ಭಾಗ್ಯ ಯೋಜನೆಯ ಹಣವು ಕೂಡ ಖಾತೆಗಳಿಗೆ ಜಮಯಾಗುತ್ತಿವೆ.

ಕಾಂಗ್ರೆಸ್ ಸರ್ಕಾರ ತಾವು ಘೋಷಸಿದಂತಹ ಗ್ಯಾರಂಟಿಯ ಪ್ರಕಾರ, ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿಗಳನ್ನು ನೀಡಲು ನಿರ್ಧರಿಸಿತು, ಆದರೆ ಅಕ್ಕಿಯ ಅಭಾವದಿಂದ ಕೇವಲ 5 ಕೆ.ಜಿ ಅಕ್ಕಿಗಳನ್ನು ಪ್ರತಿಯೊಬ್ಬರಿಗೂ ನೀಡಿ ಇನ್ನುಳಿದ 5 ಕೆಜಿ ಅಕ್ಕಿ ಹಣವನ್ನು ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಪ್ರತಿಯೊಬ್ಬ ವ್ಯಕ್ತಿಗೆ 170 ರೂಪಾಯಿಗಳನ್ನು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.

ಕಾಡಿನಲ್ಲಿ ಎಷ್ಟು ಜನ ಇರುತ್ತಾರೆ ಅದರ ಪ್ರಕಾರವಾಗಿ, ಮನೆಯ ಯಜಮಾನಿಯ ಖಾತೆಗೆ ಹಣವು ಜಮೆಯಾಗುತ್ತದೆ. ಈಗಾಗಲೇ ಬಹುತೇಕ ಜನರ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಹಣವು ಜಮೆಯಾಗಿದ್ದು, ಇಂದು ನನ್ನ ಖಾತೆಗೆ ಎರಡನೇ ತಿಂಗಳ ಅನ್ನಭಾಗ್ಯ ಯೋಜನೆಯ 510 ರೂಪಾಯಿಗಳು ಜಮೆಯಾಗಿದ್ದು, ನಮ್ಮ ಖಾತೆಗಳಿಗೆ ಜಮೆಯಾಗದಿದ್ದರೆ ಈ ಕೂಡಲೇ ಈ ಕೆಳಗೆ ನೀಡುವ ಸ್ಟೆಪ್ಸ್ ಗಳನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಚೆಕ್ ಮಾಡಲು ಬೇಕಾದ ದಾಖಲೆಗಳು :

ರೇಷನ್ ಕಾರ್ಡ್

ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಗೂಗಲ್ ನಲ್ಲಿ AHARA ಎಂದು ಸರ್ಚ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :https://ahara.kar.nic.in/

ನಂತರ ಎಡಗಡೆ ಕಾಣುವಂತಹ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, ಈ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಆಗ ಅದರಲ್ಲಿ ಇರುವಂತಹ ಡಿಬಿಟಿ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ನಂತರ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯ ಆಯ್ಕೆಯನ್ನು ಆಯ್ಕೆ ಮಾಡಿ

ನಂತರ ಓಪನ್ ಆಗುವಂತಹ ಮತ್ತೊಂದು ಹೊಸ ಪೇಜ್ ನಲ್ಲಿ ನೇರ ವರ್ಗಾವಣೆ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಮೇಲೆಯದ್ದು ತಿಳಿಯಲಿಲ್ಲವೆಂದರೆ ಕೆಳಗಡೆ ನೀಡಿರುವಂತಹ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/status2/status_of_dbt.aspx

ಜುಲೈ ತಿಂಗಳನ್ನು ಆಯ್ಕೆ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮಗೆ ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗುತ್ತದೆ ಎಂಬ ಮಾಹಿತಿ ಸಿಗುತ್ತದೆ.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

 

Read these alos:

1.Gruhajyoti ಯೋಜನೆ ಅಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ, ಅದರಲ್ಲಿ ಒಂದು ಗ್ಯಾರೆಂಟಿಯಾದಂತಹ ಗೃಹ ಜ್ಯೋತಿ(Gruhajyoti) ಯೋಜನೆ ಅಡಿ ಪ್ರತಿಯೊಂದು ಮನೆಗೆ ಎರಡು ನೂರು ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದೆ.

2.(Insurance) ಬೆಳೆ ವಿಮೆ ತುಂಬುವ ರೈತರು ನಿಮ್ಮ ಖಾತೆಗೆ ಹಣ ಜಮಾ ಆಗಬೇಕೆಂದರೆ ಈ ಕೆಲಸವನ್ನು ತಪ್ಪದೇ ಮಾಡಲೇಬೇಕು, ಏನು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ನೀವು ಏನಾದರೂ ನಿಮ್ಮ ಬೆಳೆಗಳಿಗೆ ಬೆಳೆ ವಿಮೆ(insurance) ಮಾಡಿಸಿದ್ದೀರಾ? ಕೇವಲ ಬೆಳೆ ವಿಮೆ ಮಾಡಿಸಿದರೆ ಸಾಕಾಗುವುದಿಲ್ಲ ನಿಮ್ಮ ಖಾತೆಗಳಿಗೆ ಹಣಬರಬೇಕಾದರೆ ನೀವು ಈ ಕೆಲಸವನ್ನು ಮಾಡಲೇಬೇಕು, ಬನ್ನಿ ಏನು ಅಂತ ತಿಳಿದುಕೊಳ್ಳೋಣ.(insurance)

3.Free bus:ಉಚಿತ ಬಸ್ ಪ್ರಯಾಣದಿಂದಾಗಿದ್ದ ಬಸ್ ಗಳೆಲ್ಲ ಫುಲ್ ಆದ ಬೆನ್ನಲ್ಲೇ ಸಾರಿಗೆ ಸಚಿವರಿಂದ ಮಹತ್ವದ ನಿರ್ಧಾರ ಪ್ರಕಟ

ಆತ್ಮೀಯ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಕಾಂಗ್ರೆಸ್(congress) ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಹೆಣ್ಣು ಮಕ್ಕಳಿಗೆ ಉಚಿತ ಬಸ್ (free bus) ಪ್ರಯಾಣವನ್ನು ಇದೀಗ ಜಾರಿಗೆ ತಂದಿದ್ದು,

4.ಪ್ರತಿಯೊಬ್ಬ ರೈತರು 27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.

ಆತ್ಮೀಯ ಬಾಂಧವರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಜಾರಿಗೆ ತರಲು ನಿರ್ಧರಿಸಿ ನಿರ್ಧರಿಸಿದೆ, ಅದರಂತೆ ಈಗಾಗಲೇ ಶಕ್ತಿ ಯೋಜನೆಯಡಿ (shakti yojana) ಮಹಿಳೆಯರಿಗೆ ರಾಜ್ಯದಕ್ಕೂ ಪ್ರಯಾಣಿಸಲು ಉಚಿತ ಪ್ರಯಾಣವನ್ನು(free bus) ನೀಡಿದೆ.

32 thoughts on “ನನ್ನ ಖಾತೆಗೆ ಇಂದು ಎರಡನೇ ತಿಂಗಳ ಅನ್ನಭಾಗ್ಯ ಯೋಜನೆಯ 510 ರೂಪಾಯಿಗಳು ಜಮೆ? ನಿಮ್ಮ ಖಾತೆಗೂ ಜಮೆಯಾಗಿದೆಯೇ ಈಗಲೇ ಚೆಕ್ ಮಾಡಿಕೊಳ್ಳಿ”

Leave a Comment