ಕೃಷಿ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆ ಆರಂಭ: ಹಿಂದಿ ಅರ್ಜಿ ಸಲ್ಲಿಸಿ ಹಾಗೂ ಸರ್ಕಾರಿ ಸೀಟು ಪಡೆಯಿರಿ

ಬೆಂಗಳೂರು.ಮೇ.25-ಕೃಷಿ ಕೋಟಾದಡಿ ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ವಿವಿಧ ಪದವಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ.

ಅರ್ಹ ವಿದ್ಯಾರ್ಥಿಗಳು ನಾಳೆ ಮಧ್ಯರಾತ್ರಿ 12.00 ಗಂಟೆವರೆಗೆ ಮೂಲದಾಖಲಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್ ಲಿಂಕ್‌ನ ಮೂಲಕ ಅಪ್‌ಲೋಡ್ ಮಾಡಬಹುದಾಗಿದೆ.

ಕೃಷಿಕೋಟಾದಡಿ ಅರ್ಹ/ಅರ್ಹರಲ್ಲದ ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣಗಳಲ್ಲಿ ಮೇ.29ರಂದು ಪ್ರಕಟಿಸಲಾಗುತ್ತದೆ. ಅನರ್ಹ ಅಭ್ಯರ್ಥಿಗಳಿಗೆ ಮಾತ್ರದಾಖಲೆಗಳ ಬಗ್ಗೆ ಸ್ಪಷ್ಟಿಕರಣ ಪಡೆಯಲು ಅವಕಾಶವಿದ್ದು, ಮೇ.31ರ ಸಂಜೆ 4.00 ಗಂಟೆಯವರೆಗೆ ಸ್ಪಷ್ಟಿಕರಣ ಪಡೆಯಬಹುದಾಗಿದೆ.

ಪ್ರಾಯೋಗಿಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನುಜೂನ್.2ರಂದು ಪ್ರಕಟಿಸಲಾಗುವುದುಬಳಿಕ ಪ್ರಾಯೋಗಿಕ ಪರೀಕ್ಷೆಯನ್ನು ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ 16 ಕೇಂದ್ರಗಳಲ್ಲಿ ಏಕಕಾಲಕ್ಕೆ ಜೂನ್ 6ರ ಬೆಳಿಗ್ಗೆ 9.00 ಗಂಟೆಯಿಂದ ಪ್ರಾರಂಭಿಸಲಾಗುವುದು.ಪ್ರಾಯೋಗಿಕ ಪರೀಕ್ಷಾ ಫಲಿತಾಂಶವನ್ನುಜೂ.19ರಂದು ಪ್ರಕಟಿಸಲಾಗುವುದು.

ಫಲಿತಾಂಶಕ್ಕೆ ಸಂಬಂಧಿಸಿದಂತೆಆಕ್ಷೇಪ/ಮನವಿಗಳೇನಾದರೂ ಇದ್ದಲ್ಲಿ ಜೂ,10ರಿಂದ 120 ಸಂಜೆ 4.00ರ ಒಳಗೆ ಸಂಬಂಧಿತ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ.

ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳಲ್ಲಿ ಶೇ.50, ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳಲ್ಲಿ ಶೇ.25 ಹಾಗೂ ಪದವಿಪೂರ್ವ ಶಿಕ್ಷಣ ಮಂಡಳಿ (PUC) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಲ್ಲಿ ಶೇ.25ನ್ನು ಗಣನೆಗೆ ತೆಗೆದುಕೊಂಡುಬ್ಯಾಂಕಿಂಗ್‌ ಪಟ್ಟಿಯನ್ನು ಸಿದ್ಧಪಡಿಸಿ ವಿವಿಧ ವರ್ಗಗಳಿಗೆ ನೀಡಲಾಗಿರುವ ಕರ್ನಾಟಕ ಸರ್ಕಾರದ ಮೀಸಲಾತಿಗನುಗುಣವಾಗಿಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.

ಹೆಚ್ಚನ ಮಾಹಿತಿಗಾಗಿ ಹಾಗೂ ದಾಖಲಾತಿಗಳನ್ನು ಅಪ್‌ ಲೋಡ್ ಮಾಡಲುಈ ಅಧಿಕೃತ ಜಾಲತಾಣಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಡಾ. ಕೃಷಿವಿವಿಯಶಿಕ್ಷಣನಿರ್ದೆಶಕ ಕೆ.ಸಿ. ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1) www.uasbangalore.edu.in

ಜೂನ್.2ರಂದು ಪ್ರಕಟಿಸಲಾಗುವುದು.

2) www.uasd.karnataka.gov.in

3.www.uasraichur.edu.in

4) www.uhsbagalkot.karnataka.gov.in

5) www.uahs.edu.in

6) www.kvafsu.edu.in

7)http://kea.kar.nic.in

ಜೂ.19ರಂದು ಪ್ರಕಟಿಸಲಾಗುವುದು. ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು

By Raju

Leave a Reply

Your email address will not be published. Required fields are marked *