ಹನಿ ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ:ಶೇಕಡಾ 90% ಸಬ್ಸಿಡಿ

ಗದಗ ಜಿಲ್ಲೆಯ ನೀರಾವರಿ ಸೌಲಭ್ಯಯುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಆಸಕ್ತಿ ಇರುವ ರೈತರ ಜಮೀನಿಗೆ ಹನಿ ನೀರಾವರಿ ಅಳವಡಿಕೆಗೆ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮೊದಲ ಎರಡು ಹೆಕ್ಟೇರ್ ಪ್ರದೇಶದವರಿಗೆ ೯೦ % ರಷ್ಟು, ಎರಡು ಹೆಕ್ಟೇರ ಮೇಲ್ಪಟ್ಟು ಮೂರು ಹೆಕ್ಟೇರ್‌ವರೆಗೆ ೪೫% ರಷ್ಟು, ಸಾಮಾನ್ಯ ರೈತರಿಗೆ ಮೊದಲ ಎರಡು ಹೆಕ್ಟೇರ್ ಪ್ರದೇಶದವರಿಗೆ ೭೫% ರಷ್ಟು, ಎರಡು ಹೆಕ್ಟೇರ ಮೇಲ್ಪಟ್ಟು ಮೂರು ಹೆಕ್ಟೇರ್‌ವರೆಗೆ ೪೫% ರಷ್ಟು ಸಹಾಯಧನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.(drip irrigation)

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಉಳಿದ ಜಿಲ್ಲೆಯ ರೈತರು ತಮ್ಮ ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಸಂಪರ್ಕಿಸಬೇಕಾಗಿ ವಿನಂತಿ.

 

Leave a Comment