subsidy

ವಿಜಯಪುರ: ಪಶುಪಾಲನಾ ಮತ್ತು ಪಶುವೈದ್ಯಕೀಯಸೇವಾ ಇಲಾಖೆವತಿಯಿಂದ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಒಂದು ಮಿಶ್ರ ತಳಿ ಘಟಕ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷ ಘಟಕ ಯೋಜನೆಯಡಿ 42 ಮತ್ತು ಗಿರಿಜನ ಉಪಯೋಜನೆಯಡಿ 8 ಗುರಿ ನಿಗದಿಪಡಿಸಿದ್ದು, ಘಟಕದ ವೆಚ್ಚ ₹65000 ಇದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗ ಡದ ಫಲಾನುಭವಿಗಳಿಗೆ ಶೇ.90ರಷ್ಟು ಸಹಾಯಧನ ಹಾಗೂ ಶೇ.10ರಷ್ಟು ಫಲಾನುಭವಿಗಳವಂತಿಗೆ ಅಥವಾ ಬ್ಯಾಂಕಿನ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು.

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ನ.24 ಕೊನೆಯ ದಿನಾಂಕವಾಗಿದೆ. 

ಮಹಿಳೆಯರಿಗೆ ಶೇ.33 ಮತ್ತು ವಿಕಲಚೇತನರಿಗೆ ಶೇ.3ರಷ್ಟು ಮೀಸಲಾತಿ ಇದೆ. ನಿಗದಿತ ಅರ್ಜಿ ನಮೂನೆ ಹಾಗೂ ಈ ಕುರಿತಂತೆ ಮಾಹಿತಿಗಾಗಿ ಜಿಲ್ಲೆಯ ಆಯಾ ತಾಲೂಕಾ ಪಶುವೈದ್ಯಾಧಿ ಕಾರಿಗಳ ಕಚೇರಿ ಯನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ

Read this also:

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ತಿಳಿದಿರುವ ಹಾಗೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಬೆಳೆ ವಿಮೆಯ ಹಣವನ್ನು ಬಿಡುಗಡೆ ಮಾಡಲಾಗಿದೆ.

ಆದರೆ ಅನೇಕ ಕಾರಣಗಳಿಂದಾಗಿ  ಅನೇಕ ರೈತರ ಖಾತೆಗಳಿಗೆ ಇನ್ನೂ ಬೆಳೆ ವಿಮೆಯ ಹಣ ತಲುಪಿಲ್ಲ,  ಹಾಗಾಗಿ ಗದಗ್ ಜಿಲ್ಲೆಯ ಗದಗ್ ತಾಲೂಕಿನ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಹೆಸರಿರುವವರು ಕೂಡಲೇ ಆ ತಪ್ಪನ್ನು ತಿದ್ದುಪಡಿಸಿಕೊಂಡು ಬೆಳೆವಿಮೆಯ ಹಣವನ್ನು ಪಡೆಯಬೇಕಾಗಿ ವಿನಂತಿ.

ಆತ್ಮೀಯರೇ, 2023-24 ನೇ ಸಾಲಿನ ಮುಂಗಾರು ಹಂಗಾಮಿನ ಹೆಸರು ಬೆಳೆಯ ಬೆಳೆ ವಿಮೆ ತುಂಬಿದ ರೈತರ “ಬಿತ್ತನೆಗೆ ತಡೆ (Preventive Sowing)” ಕ್ಲೇಮ್ಸ್ ಮೊತ್ತ ವಿವಿಧ ಕಾರಣಗಳಿಂದ ಜಮೆ ಆಗದ ರೈತರ ಪಟ್ಟಿ ಇದಾಗಿದ್ದು, ಸದರಿ ರೈತರು ಈ ಕೂಡಲೇ ಮೇಲೆ ತಿಳಿಸಿದ ಕಾರಣಗಳಿಗನುಸಾರ ತಮ್ಮ ಬ್ಯಾಂಕ್ ಖಾತೆ ಗಳಲ್ಲಿ ಸರಿಪಡಿಸಿಕೊಂಡಲ್ಲಿ ವಿಮೆ ಮೊತ್ತ ಜಮೆ ಆಗಲು ಅವಕಾಶವಿರುತ್ತದೆ. 

List link:Click hereGadag taluk 2023-24 Green gram Payment failed cases

ರೈತ ಬಾಂದವರಲ್ಲಿ ವಿನಂತಿ ☝🏾ಮೇಲೆ ಹಾಕಿದ ಲಿಸ್ಟಲ್ಲಿ  ಹೆಸರು ಬೆಳೆ ವಿಮೆ ಜಮೆ ಆಗದೆ ಇರುವ ರೈತರ ಹೆಸರುಗಳು ಇವೆ,ಅವರು ತಮ್ಮ ಬ್ಯಾಂಕ್ ಗೆ ಬೇಟಿ ನೀಡಿ ~ ಆಧಾರ್ ಆಕ್ಟಿವ್ & ಆಧಾರ್ ಮ್ಯಾಪ್ಡ್ & ಆಧಾರ್ ಲಿಂಕ್ ಮಾಡಿಸಿದಲ್ಲಿ ಬೆಳೆ ವಿಮೆ ಜಮಾ ಮಾಡಲಾಗುವುದು.

Read this also:

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು ಹಲವು ದಿನಗಳ ಹಿಂದೆ ಗದಗ್ ಜಿಲ್ಲೆಯ ಕೆಲವೊಂದಿಷ್ಟು ಹಳ್ಳಿಗಳಿಗೆ ಬೆಳೆವಿಮೆಯ ಹಣ ಜಮೆಯಾಗಿತ್ತು, . ಆದರೆ ಇದೀಗ ನಮ್ಮ ಹಳ್ಳಿಗೂ ಕೂಡ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು ರೈತರಲ್ಲಿ , ಖುಷಿ ತರಿಸಿದೆ.

ಆನ್ಲೈನ್ ಮೂಲಕ ನಿಮ್ಮ ಖಾತೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಜಮೆಯಾಗಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ನಿಮಗೆ ನಿಮ್ಮ ಖಾತೆಗಳಿಗೆ ಎಷ್ಟು ಹಣ ಯಾವಾಗ ಯಾವ ಖಾತೆಗೆ ಜಮೆಯಾಗಿದೆ ಎಂದು ಅಲ್ಲಿ ನೀವು ವೀಕ್ಷಿಸಬಹುದಾಗಿದೆ.

ಬೆಳೆ ವಿಮೆಯ ಹಣ ನಿನ್ನೆ ತಾನೆ ಬಿಡುಗಡೆಯಾಗಿದ್ದು, ಆನ್ಲೈನ್ ನಲ್ಲಿ ಅಪ್ ಡೇಟ್ ಆಗಲು ಕೆಲವು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗಾಗಿ ನೀವು ಒಂದೆರಡು ದಿನ ಬಿಟ್ಟು ನೋಡಿದರೆ ನೀವು ಆನ್ಲೈನ್ ನಲ್ಲಿ ಯಾವ ಖಾತೆಗಳಿಗೆ ಯಾವ ದಿನಾಂಕದಂದು ಎಷ್ಟು ಹಣ ಜಮೆಯಾಗಿದೆ ಎಂಬುದರ ಖಚಿತ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.

READ THIS ALSO:

1.ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?

ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ? ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

2.Mailara Lingeshwar Karnika 2023: ರೈತರ ಕಷ್ಟದ ಬಗ್ಗೆ ಭವಿಷ್ಯ ಹೇಳಿದ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ.

“ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್”! ಎಂಬ ನುಡಿಯನ್ನು ಐತಿಹಾಸಿಕ ಸ್ಥಳವಾದ ದೇವರಗುಡ್ಡದ ಗೊರವಜ್ಜನ ಕಾರ್ಣಿಕ ಇದಾಗಿದೆ. ಈ ನುಡಿಯು ರೈತರ ಬರಗಾಲದ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದವರು ಹೇಳಿದ್ದಾರೆ.

3.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

5.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

6.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

 

By Raju

Leave a Reply

Your email address will not be published. Required fields are marked *