6 HOUIRS CURRENT

 ” ರಾಜ್ಯದ ಅನೇಕ ರೈತರು ನೀರಾವರಿ ( Irrigation )ಅಂತರ್ಜಲ (Ground Water ) ನೀರಿನ ಮೇಲೆ ಅವಲಂಬಿತವಾಗಿದ್ದು, ಸರಿಯಾದ ಕರೆಂಟ್ ಇಲ್ಲದೆ, ತಮ್ಮ ಬೆಳಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದಾರೆ. ಆದ್ದರಿಂದ ಸರ್ಕಾರವು ರೈತರ ಅನುಕೂಲಕ್ಕಾಗಿ ಇನ್ನು ಮುಂದೆ ದಿನಕ್ಕೆ ಆರು ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುವುದು ಎಂದು ಹೇಳಿದೆ “

ನೀರಾವರಿ ಪಂಪ್ ಸೆಟ್‌ಗಳಿಗೆ ( Irrigation Pump set ) ಹಗಲಿನಲ್ಲಿ 4  ಗಂಟೆ ( 4 hours in day time ) ಮತ್ತು ರಾತ್ರಿ 2  ಗಂಟೆ ( 2 hours in night time ) ವಿದ್ಯುತ್ ನೀಡಲಾಗುವುದು ಎಂದು ಆಶ್ವಾಸನೆ ಕೊಟ್ಟಿದೆ. ಈ ಕ್ರಮವನ್ನು ಜಾರಿಗೆಗೊಳಿಸಲು ಕರ್ನಾಟಕ ಸರ್ಕಾರವು ಗ್ರಾಮೀಣ ನೀರಾವರಿ ಪಂಪ್‌ಸೆಟ್‌ಗಳಿಗೆ ಮೊದಲಿಗಿದ್ದ 5 ಗಂಟೆಯ ವಿದ್ಯುತ್ ನ್ನು  6 ಗಂಟೆ ವಿದ್ಯುತ್ ನೀಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ( Electricity Supply company ) ಸೂಚನೆ ನೀಡಿದೆ.

ಈ ಮೂಲಕ ಬೆಳೆದು ನಿಂತಿರುವ ಬೆಳೆಯನ್ನು ಉಳಿಸಲು ಇದು ರೈತರ ಕೈ ಹಿಡಿಯಲಿದೆ.ಬೆಂಗಳೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ರೈತರಿಗೆ ಹೆಚ್ಚುವರಿ ವಿದ್ಯುತ್ ನೀಡಲಾಗುವುದು.

ಸಾಧ್ಯವಿರುವ ಕಡೆಗಳಲ್ಲಿ ಆರು ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡಲು ಅಧಿಕಾರಿಗಳು ಕೆಲಸ ಮಾಡಲಿದ್ದಾರೆ ಎಂದು ಈ ಕುರಿತು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ. ಇಲ್ಲದಿದ್ದಲ್ಲಿ ಹಗಲಿನಲ್ಲಿ ನಾಲ್ಕು ತಾಸು ಹಾಗೂ ರಾತ್ರಿ ಎರಡು ತಾಸು ವಿದ್ಯುತ್ ಸರಬರಾಜು ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 ಕಳೆದ ಕೆಲವು ತಿಂಗಳುಗಳಿಂದ ರೈತರಿಗೆ ಐದು ಗಂಟೆಯ ವಿದ್ಯುತ್ ನೀಡಲಾಗುತ್ತಿದ್ದು, ಹಗಲಿನಲ್ಲಿ ಮೂರು ಗಂಟೆ ಮತ್ತು ರಾತ್ರಿಯಲ್ಲಿ ಎರಡು ಗಂಟೆಗಳಾಗಿ ಕೊಡುತ್ತಿದ್ದರು. ಆದರೆ ರೈತರಿಗೆ ಬರಗಾಲಕ್ಕೆ ಮುನ್ನವೇ ಏಳು ಗಂಟೆ ವಿದ್ಯುತ್ ಸಿಗುತ್ತಿತ್ತು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (Hubballi electricity supply Company ) – HESCOM ಅಧಿಕಾರಿಗಳು ಹೇಳುವ ಪ್ರಕಾರ, ಆರು ಗಂಟೆ ವಿದ್ಯುತ್ ಸರಬರಾಜು ಮಾಡಿದರೆ , ಸರಾಸರಿ ಲೋಡ್ ಗಂಟೆಗೆ ಸುಮಾರು 3,200 ಮೆಗಾ ವ್ಯಾಟ್ ಆಗುತ್ತದೆ. ಏಕೆಂದರೆ ರೈತರು ಮುಂಜಾನೆ ಅಥವಾ ಸಂಜೆಗಿಂತ ಹಗಲು ಹೊತ್ತಿನಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ.

ಆದ್ದರಿಂದ ರೈತರಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸಿದರೆ ಹೆಚ್ಚು ಸಹಾಯವಾಗಬಲ್ಲದು. ಸೌರ ಫಲಕಗಳು ಗರಿಷ್ಠ ಸೌರ ಸಮಯದಲ್ಲಿ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಕಾರಣವೂ ಆಗಿದೆ,” ಎಂದು ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಷನ್ ಹೇಳಿದರು. 

READ THIS ALSO:

1.ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?

ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ? ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

2.Mailara Lingeshwar Karnika 2023: ರೈತರ ಕಷ್ಟದ ಬಗ್ಗೆ ಭವಿಷ್ಯ ಹೇಳಿದ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ.

“ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್”! ಎಂಬ ನುಡಿಯನ್ನು ಐತಿಹಾಸಿಕ ಸ್ಥಳವಾದ ದೇವರಗುಡ್ಡದ ಗೊರವಜ್ಜನ ಕಾರ್ಣಿಕ ಇದಾಗಿದೆ. ಈ ನುಡಿಯು ರೈತರ ಬರಗಾಲದ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದವರು ಹೇಳಿದ್ದಾರೆ.

3.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

5.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

6.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

 

 

By Raju

Leave a Reply

Your email address will not be published. Required fields are marked *