ಪ್ರತಿ ಎಕರೆಗೆ 5,715 ರೂಪಾಯಿ ಬೆಳೆ ವಿಮೆ ಬಿಡುಗಡೆ :ನೀವು ಬೆಳೆ ವಿಮೆ ಮಾಡಿಸಿದ್ದರೆ ಈ ಕೂಡಲೇ ಚೆಕ್ ಮಾಡಿಕೊಳ್ಳಿ.

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಸಿ ಸುದ್ದಿ ಎಂದು ಸಿಕ್ಕಿದೆ, ಪ್ರತಿ ಎಕರೆಗೆ 5,715 ರೂಪಾಯಿಗಳು ಕ್ಲೇಮ್ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆಯಾಗಲಿವೆ.

2022-23ನೇ ಸಾಲಿನ ಹಿಂಗಾರಿ ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದಂತಹ, ರೈತರ ಬೆಳೆಗಳಿಗೆ ಬೆಳೆ ವಿಮೆ ಬಿಡುಗಡೆಯಾಗಿದ್ದು. ನಾನು ಗದಗ ಜಿಲ್ಲೆ, ಗದಗ್ ತಾಲೂಕಿನ ಬೆಟಿಗೇರಿ ಹೋಬಳಿಯಲ್ಲಿ ಬರುವಂತಹ ಹೊಂಬಳ ಗ್ರಾಮದ ರೈತನಾಗಿದ್ದು, ನಾನು 11 ಎಕರೆ ಏಳು ಗುಂಟೆಗಳಿಗೆ ಜೋಳವನ್ನು ಬೆಳೆ ವಿಮೆ ಮಾಡಿಸಿದೆನು, 41% ಕ್ಲೇಮ್ ಆಗಿದ್ದು ಪ್ರತಿ ಎಕರೆಗೆ 5715 ರೂಪಾಯಿಗಳಂತೆ ಒಟ್ಟು 63,854 ರೂಪಾಯಿಗಳು ಜಮೆಯಾಗಲಿವೆ.

ನೀವು ಬೆಳೆವಿಮೆ ಮಾಡಿಸಿದ್ದರೆ ಯಾವ ಬೆಳೆಗಳಿಗೆ ಎಷ್ಟು ಬೆಳೆ ವಿಮೆ ಬರುತ್ತದೆ ಎಂದು ಆನ್ಲೈನ್ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ, ಬನ್ನಿ ಹೇಗೆ ಅಂತ ನೋಡೋಣ.

ಮೊಟ್ಟ ಮೊದಲಿಗೆ ನೀವು ಮೂರು ವಿಧಗಳಲ್ಲಿ ಅದನ್ನು ಚೆಕ್ ಮಾಡಬಹುದಾಗಿದೆ.

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://samrakshane.karnataka.gov.in/

 

Samrakshane

ಆಗ ನೀವು ಸಂರಕ್ಷಣೆ ವೆಬ್ಸೈಟ್ನ ಮುಖ್ಯ ಪೇಜ್ ನಲ್ಲಿ ಬರುತ್ತೀರಿ, ಅಲ್ಲಿ ವರ್ಷ ಹಾಗೂ ಋತುವನ್ನು ಆಯ್ಕೆ ಮಾಡಿ

ವರ್ಷ :2022-23

Season :ಹಿಂಗಾರಿ /rabi

ಮೇಲೆ ತಿಳಿಸಿದಂತಹ ವರ್ಷ ಹಾಗೂ ಋತುವನ್ನು ಆಯ್ಕೆ ಮಾಡಿ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಆಗ ನೀವು ಸಂರಕ್ಷಣೆ ವೆಬ್ಸೈಟ್ನ ತಲುಪುವಿರಿ

samrakshane

ಅದರಲ್ಲಿ ಫಾರ್ಮರ್ಸ್ ಎಂಬ ವಿಭಾಗದಲ್ಲಿ, ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://samrakshane.karnataka.gov.in/Premium/CheckStatusMain_aadhaar.aspx

ಆಗ ನಿಮಗೆ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ಮೂರು ಆಯ್ಕೆಗಳಿರುತ್ತವೆ

1. ಪ್ರೊಪೋಸಲ್ ನಂಬರ್

2. ಮೊಬೈಲ್ ನಂಬರ್

3. ಆಧಾರ್ ನಂಬರ್

ನೀವು ಬೆಳೆ ವಿಮೆ ಮಾಡಿಸಿದಾಗ ಅವರು ನೀಡುವ ರಶೀದಿ ನಿಮ್ಮ ಬಳಿ ಇದ್ದರೆ ಅದರ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ ಅದರಲ್ಲಿ ಪ್ರಪೋಸಲ್ ನಂಬರ್ ಅಂದರೆ ಅಪ್ಲಿಕೇಶನ್ ನಂಬರ್ ಇರುತ್ತದೆ, ಅದರ ಮೂಲಕ ನೀವು ಚೆಕ್ ಮಾಡಬಹುದಾಗಿದೆ, ಅದು ಇಲ್ಲದಿದ್ದರೂ ಕೂಡ ನೀವು ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹಾಕಿಯೂ ಕೂಡ ಚೆಕ್ ಮಾಡಬಹುದು.

1. ಪ್ರೊಪೋಸಲ್ ನಂಬರ್ ಎಂಬ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ

samrakshane

ಅಲ್ಲಿ ನಿಮ್ಮ ಪ್ರಪೋಸಲ್ ನಂಬರನ್ನು ಟೈಪ್ ಮಾಡಿ, ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ

ಆಗ ನಿಮಗೆ ಕೆಳಗಡೆ ಚಿತ್ರದಲ್ಲಿ ನೀಡಿರುವಂತೆ ಅದರ ರಿಪೋರ್ಟನ್ನು ತೋರಿಸುತ್ತದೆ, ಅದರಲ್ಲಿ ನೀವು ವೀಕ್ಷಿಸುವ ಹಾಗೆ ಅದರಲ್ಲಿ ಶಾರ್ಟ್ ಫಾಲ್ 41% ಅಂತ ಇದೆ, ಅಂದರೆ ವಾಡಿಕೆಯಿಂದ ಶೇಕಡ 41% ರಷ್ಟು ಇಳುವರಿ ಕಡಿಮೆಯಾಗಿದ್ದು ನಾವು ಬೆಳೆ ವಿಮೆ ಮಾಡುತ್ತಿದ್ದಂತಹ ಬೆಳೆಗೆ ಬೆಳೆ ವಿಮೆ ಕ್ಲೇಮ್ ಆಗುತ್ತದೆ ಎಂದು ಅರ್ಥ.

ಒಂದು ವೇಳೆ ಅದು -41 ಇದ್ದರೆ ಬೆಳವಿಮೆ ಕ್ಲೇಮ್ ಆಗುವುದಿಲ್ಲ ಎಂದು ಅರ್ಥ, ಅಂದರೆ ವಾಡಿಕೆಗಿಂತ ಶೇಕಡ 41ರಷ್ಟು ಹೆಚ್ಚಿನ ಇಳುವರಿ ಬಂದಿದೆ ಎಂದು ಅರ್ಥ.

2. ಇನ್ನು ನಿಮ್ಮ ಬಳಿ ಪ್ರಪೋಸಲ್ ನಂಬರ್ ಇಲ್ಲವೆಂದರೆ ಇದೇ ರೀತಿ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

 

Leave a Comment