324 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಎಷ್ಟು ಹಣ ಜಮ ಆಗಿದೆ ಎಂದು ಚೆಕ್ ಮಾಡುವುದು ಹೇಗೆ?

 ಆತ್ಮೀಯ ರೈತ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದ್ದು ಸರ್ಕಾರ ಈಗಾಗಲೇ  ರಾಜ್ಯದ 235 ತಾಲೂಕುಗಳ ಪೈಕಿ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು,  ಇದೀಗ 324 ಕೋಟಿ ರೂಪಾಯಿ ಬರ ಪರಿಹಾರವನ್ನು ಕೂಡ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.

216 ತಾಲೂಕುಗಳನ್ನು ಬರಬೇಡಿ ತಂದು ಘೋಷಿಸಿದ ನಂತರ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು,  ಅದಾದ ನಂತರ ಕೇಂದ್ರದಿಂದ ತಂಡಗಳು ಬಂದು ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿಗಳನ್ನು ಸಲ್ಲಿಸಲಾಗಿದೆ .

ಇನ್ನು ಕೂಡ ಕೇಂದ್ರ ಸರ್ಕಾರದಿಂದ ಯಾವುದೇ ತರಹದ ಬರ ಪರಿಹಾರದ ಹಣ ಬಿಡುಗಡೆಯಾಗದ ಕಾರಣಗಳಿಂದಾಗಿ ಸಂಕಷ್ಟದಲ್ಲಿ ಇರುವಂತಹ ರೈತರ ನೆರವಿಗಾಗಿ ರಾಜ್ಯ ಸರ್ಕಾರವು SDRF  ಅಡಿ ಬರ ಪರಿಹಾರದ ಹಣವನ್ನು ಬಿಡುಗಡೆ  ಮಾಡಿದೆ.

ಆನ್ಲೈನ್ ಮೂಲಕ ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಪರಿಹಾರ ಪೇಮೆಂಟ್ ಎಂದು ಸರ್ಚ್ ಮಾಡಿ

 ಡೈರೆಕ್ಟ್ ಲಿಂಕ್: https://landrecords.karnataka.gov.in/PariharaPayment/

ಅಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ,  ನಿಮ್ಮ ಬಳಿ ಪರಿಹಾರ ಐಡಿ ಇದ್ದರೆ ಪರಿಹಾರ ಐಡಿ ಮೇಲೆ ಕ್ಲಿಕ್ ಮಾಡಿ ಅಥವಾ ಆಧಾರ್ ನಂಬರ್ ಮೇಲೆ ಕ್ಲಿಕ್ ಮಾಡಿ

parihara

ಅಲ್ಲಿ ಕೇಳುವಂತ ಎಲ್ಲ ಮಾಹಿತಿಯನ್ನು ನಮೂದಿಸಿ ಹೆಚ್ಚು ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

 ಆಗ ಅಲ್ಲಿ ನೀವು ನಿಮ್ಮ ಯಾವ ಖಾತೆಗೆ ಎಷ್ಟು ಪರಿಹಾರದ ಹಣ ಯಾವಾಗ ಜಮೆಯಾಗಿದೆ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬರಪರಿಸ್ಥಿತಿಯ ವರದಿಯನ್ನು ಸಲ್ಲಿಸಿ 17000 ಕೋಟಿ ರೂಪಾಯಿಗಳ ಬರ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿತ್ತು. ಆದರೆ ಕೇಂದ್ರ ಸರ್ಕಾರದಿಂದ ಇದುವರೆಗೆ ಯಾವುದೇ ತರಹದ  ಪ್ರತಿಕ್ರಿಯೆ ಕಾರಣ ಕಷ್ಟದಲ್ಲಿರುವಂತಹ  ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಎಸ್ ಡಿ ಆರ್ ಎಫ್  ಅಡಿ 324 ಕೋಟಿ ರೂಪಾಯಿಗಳನ್ನು 216  ಬರ ಪೀಡಿತ ತಾಲೂಕುಗಳಿಗೆ ಬಿಡುಗಡೆ ಮಾಡಿದೆ.

 ನಾವು ಜಿಲ್ಲಾವಾರು ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಗಮನಿಸುವುದಾದರೆ:

ಗದಗ-10.50 ಕೋಟಿ.

ಹಾವೇರಿ-12 ಕೋಟಿ.

ಧಾರವಾಡ-12 ಕೋಟಿ.

ಶಿವಮೊಗ್ಗ-10.50 ಕೋಟಿ.

ಹಾಸನ- 12 ಕೋಟಿ.

ಚಿಕ್ಕಮಗಳೂರು-12 ಕೋಟಿ.

ಕೊಡಗು-7.50 ಕೋಟಿ.

ದಕ್ಷಿಣ ಕನ್ನಡ- 3 ಕೋಟಿ.

ಉಡುಪಿ- 4.50 ಕೋಟಿ.

ಉತ್ತರ ಕನ್ನಡ-16.50 ಕೋಟಿ.

ಯಾದಗಿರಿ-9 ಕೋಟಿ.

ವಿಜಯನಗರ-9 ಕೋಟಿ

ಬೆಂಗಳೂರು ನಗರ- 7.50 ಕೋಟಿ.

ಬೆಂಗಳೂರು ಗ್ರಾಮಾಂತರ- 6 ಕೋಟಿ.

ರಾಮನಗರ-7.50 ಕೋಟಿ.

ಕೋಲಾರ – 9 ಕೋಟಿ.

ಚಿಕ್ಕಬಳ್ಳಾಪುರ- 9 ಕೋಟಿ.

ತುಮಕೂರು-15 ಕೋಟಿ.

ಚಿತ್ರದುರ್ಗ- 9 ಕೋಟಿ.

ದಾವಣಗೆರೆ- 9 ಕೋಟಿ.

ಚಾಮರಾಜನಗರ-7.50 ಕೋಟಿ

ಮೈಸೂರು – 13.50 ಕೋಟಿ.

ಮಂಡ್ಯ- 10.50 ಕೋಟಿ.

ಬಳ್ಳಾರಿ- 7.50 ಕೋಟಿ.

ಕೊಪ್ಪಳ- 10.50 ಕೋಟಿ.

ರಾಯಚೂರು- 9 ಕೋಟಿ.

ಕಲಬುರ್ಗಿ- 16.50 ಕೋಟಿ.

ಬೀದರ್- 4.50 ಕೋಟಿ.

ಬೆಳಗಾವಿ- 22.50 ಕೋಟಿ.

ಬಾಗಲಕೋಟೆ- 13.50 ಕೋಟಿ.

ವಿಜಯಪುರ- 18 ಕೋಟಿ.

1 thought on “324 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಎಷ್ಟು ಹಣ ಜಮ ಆಗಿದೆ ಎಂದು ಚೆಕ್ ಮಾಡುವುದು ಹೇಗೆ?”

Leave a Comment