ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಉದ್ಯೋಗ:322 ಸ್ಥಾನಗಳಿಗಾಗಿ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ (ಸಿಎಪಿಎಫ್) ಅಗತ್ಯವಿರುವ ಅಸಿಸ್ಟೆಂಟ್ ಕಮಾಂಡಂಟ್ (ಎಸಿ) ಹುದ್ದೆಗಳ ಭರ್ತಿಗೆ ಪರೀಕ್ಷಾ ಅಧಿಸೂಚನೆ ಬಿಡುಗಡೆ ಮಾಡಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಾದ ಬಿಎಸ್‌ಎಫ್‌, ಸಿಆ‌ ಪಿಎಫ್, ಸಿಐಎಸ್‌ಎಫ್‌, ಐಟಿಬಿಪಿ, ಎಸ್‌ಎಸ್‌ಬಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸತಕ್ಕದ್ದು.

ಅರ್ಜಿ ಶುಲ್ಕ:

-ಎಸ್‌ಸಿ, ಎಸ್‌ಟಿ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಅನ್ವಯವಾಗುವುದಿಲ್ಲ.

-ಇತರ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ಅನ್ವಯವಾಗಲಿದ್ದು, ಆನ್‌ಲೈನ್ ಮೂಲಕ ಮಾತ್ರ ಪಾವತಿ ಮಾಡಬೇಕು.

ಅರ್ಹತೆಗಳೇನು?

-ಅಧಿಸೂಚನೆಯ ಪ್ರಕಾರ ಆಸಕ್ತ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

-01-08-2023 20 ತರ ವರ್ಷ ಮತ್ತು ಗರಿಷ್ಠ 25 ವರ್ಷ ವಯೋಮಿತಿ ಹೊಂದಿರಬೇಕು.

-ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿಎಸ್‌ಟಿಗೆ 5 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ

ಹೀಗಿರಲಿದೆ ಆಯ್ಕೆ ಪ್ರಕ್ರಿಯೆ:

-ಲಿಖಿತ ಪರೀಕ್ಷೆ, ಫಿಸಿಕಲ್ ಸ್ಟ್ಯಾಂಡರ್ಡ್ಸ್/ಫಿಸಿಕಲ್ ಎಫಿಶಿಯನ್ಸಿ ಮತ್ತು ಮೆಡಿಕಲ್ ಸ್ಟ್ಯಾಂಡರ್ಡ್ ,ಟೆಸ್ಟ್/ಸಂದರ್ಶನ ಅಂತಿಮ ಆಯ್ಕೆ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

-ಯುಪಿಎಸ್‌ಸಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ವೇತನವಿರಲಿದೆ

ಹುದ್ದೆಯ ವಿವರ:

-ಗಡಿ ಭದ್ರತಾ ಪಡೆ (ಬಿಎಸ್ಎಫ್): 86

-ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್): 55

-ಕೇಂದ್ರ ಕೈಗಾರಿಕಾ ಭದ್ರತಾ ಪಡೆ: 91

-ಇಂಡೊ ಟಿಬೇಟಿಯನ್ ಬಾರ್ಡರ್ ಪೊಲೀಸ್‌ (ಐಟಿಬಿಪಿ): 60

-ಸರ್ವೀಸ್ ಸೆಲೆಕ್ಷನ್ ಬೋರ್ಡ್ (ಎಸ್‌ಎಸ್‌ಬಿ): 30

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏ.26ರಿಂದ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು https:// www.upsconline.nic.in ವೆಬ್‌ಸೈಟ್ ಮೂಲಕ ಆನ್ ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇತರ ಯಾವುದೇ ವಿಧಾನ ಅನುಮತಿಸಲಾಗುವುದಿಲ್ಲ.

ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.

ಆಯೋಗದ ವೆಬ್ ಸೈಟ್‌ನಲ್ಲಿ ಲಭ್ಯವಿರುವ ಒನ್ ಟೈಮ್ ರಿಜಿಸ್ಟ್ರೇಶನ್ (OTR) ಫಾರ್ಮ್ ನಲ್ಲಿ ಮೊದಲು ನೋಂದಾಯಿಸಿಕೊಳ್ಳುವುದು ಅತ್ಯಗತ್ಯ.

ನಂತರ ಆನ್ಲೈನ್ ಅರ್ಜಿ ಭರ್ತಿ ಮಾಡಬೇಕು.

OTR ಅನ್ನು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನೋಂದಾಯಿಸಬೇಕು.

ಈಗಾಗಲೇ

ನೋಂದಾಯಿಸಿಕೊಂಡಿದ್ದರೆ, ನೇರವಾಗಿ ಅರ್ಜಿ ಭರ್ತಿ ಮಾಡಬಹುದು.

ಅರ್ಜಿ ಸಲ್ಲಿಸಲು ಕೊನೇ ದಿನ 16.05.202

Leave a Comment