30 ದಿನಗಳವರೆಗೆ ಉಚಿತ ಹೊಲಿಗೆ ತರಬೇತಿ : ಅದರೊಂದಿಗೆ ಏನೇನು ಸೌಲಭ್ಯ ಸಿಗಲಿವೆ ಗೊತ್ತಾ? ಇಲ್ಲಿದೆ ನೋಡಿ ಪಟ್ಟಿ

ಆತ್ಮೀಯರೇ,ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆವತಿಯಿಂದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಲೇಖನದ ಮೂಲಕ ನೀವು ಏನೆಲ್ಲಾ ತಿಳಿದುಕೊಳ್ಳಬಹುದು ಎಂದರೆ :

-ತರಬೇತಿ ಯಾವಾಗ ಪ್ರಾರಂಭವಾಗುತ್ತದೆ

-ತರಬೇತಿ ಪಡೆಯಲು ಅರ್ಹತೆ

-ತರಬೇತಿ ನಂತರ ಸಿಗುವ ಸೌಲಭ್ಯಗಳು

ತರಬೇತಿ ಯಾವಾಗ ಪ್ರಾರಂಭವಾಗುತ್ತೆ?

18 ಮಾರ್ಚ 2024 ರಿಂದ ಈ ತರಬೇತಿ ಆರಂಭವಾಗಿ 18 ಏಪ್ರಿಲ್ 2024 ಕ್ಕೆ ಮುಕ್ತಾಯವಾಗುತ್ತದೆ ಒಟ್ಟು 30 ದಿನಗಳ ತರಬೇತಿ ಇದಾಗಿರುತ್ತದೆ.

ಅರ್ಹತೆ :

1) 18 ರಿಂದ 45 ವರ್ಷದ ವಯೋಮಾನದವರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರು.

2) ಕನ್ನಡ ಓದು ಬರಹ ಬಲ್ಲವರಾಗಿರಬೇಕು.

3) ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು.

4) ಗ್ರಾಮೀಣ ಭಾಗದ ಬಿ.ಪಿ.ಎಲ್ ಕಾರ್ಡಾ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಅದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿದೆ:

ಹೌದು ಮಿತ್ರರೇ ಈ ತರಬೇತಿಯು ಒಟ್ಟು 30 ದಿನ ನಡೆಯಲಿದ್ದು ತರಬೇತಿ ಭಾಗವಹಿಸುವವರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದ ಈ 9449860007, 9538281989, 9916783825, 8880444612 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಅಗತ್ಯ ವಿವರಗಳನ್ನು ಒದಗಿಸಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

ಬಳಿಕ ತರಬೇತಿ ಆರಂಭವಾಗುವ ದಿನ ನಿಮ್ಮ ಅಧಾರ್‌ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ, ಪೋಟೋ ತೆಗೆದುಕೊಂಡು ನೇರವಾಗಿ ತರಬೇತಿಯಲ್ಲಿ ಭಾಗವಹಿಸಬಹುದು.

ತರಬೇತಿ ಎಲ್ಲಿ ನೀಡಲಾಗುತ್ತೆ?

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ

ಸಂಸ್ಥೆ, ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343

ತರಬೇತಿ ನಂತರ ಸಿಗುವ ಸೌಲಭ್ಯಗಳು :

ಈ ಕೇಂದ್ರದಲ್ಲಿ ತರಬೇತಿ ಪಡೆಯುವ ಅವಧಿಯಲ್ಲಿ ಯಾವೆಲ್ಲ ಯೋಜನೆಯಡಿ ನೀವು ಸ್ವ-ಉದ್ಯೋಗವನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಬ್ಸಿಡಿಯಲ್ಲಿ ಸಾಲವನ್ನು ಪಡೆಯಬಹುದು ಎಂದು ತಿಳಿಸಲಾಗುತ್ತದೆ ಜೊತೆಗೆ ಸಾಲಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಸಹ ಒದಗಿಸಲಾಗುತ್ತದೆ. ಒಂದಿಷ್ಟು ಯೋಜನೆಗಳ ಕುರಿತು ಈ ಕೆಳಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

1) ವಿಶ್ವಕರ್ಮ ಯೋಜನೆ:

ಈ ವರ್ಷದಿಂದ ಜಾರಿಗೆ ಬಂದಿರುವ ಜನಪ್ರಿಯ ಯೋಜನೆಯಲ್ಲಿ ಈ ಯೋಜನೆಯು ಒಂದಾಗಿದೆ ಸ್ವ- ಉದ್ಯೋಗ ಆರಂಭಿಸಲು ಸಬ್ಸಿಡಿಯಲ್ಲಿ ಬ್ಯಾಂಕ್ ಮೂಲಕ ಶೇ 5% ಬಡ್ಡಿಯಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ.

2)  ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ:

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ(PMEGP) ಈ ಯೋಜನೆಯ ಮೂಲಕವು ನೀವು ಸ್ವ-ಉದ್ಯೋಗವನ್ನು ಆರಂಭಿಸಲು ಶೇ 35 ಸಬ್ಸಿಡಿಯಲ್ಲಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಬಹುದು.

 

 

By Raju

Leave a Reply

Your email address will not be published. Required fields are marked *