bele vime

 ಆತ್ಮೀಯ ರೈತ ಬಾಂಧವರೇ,  ಈ ಜಿಲ್ಲೆಯ ರೈತರಿಗೆ ಶೇಕಡ 25 ರಷ್ಟು ಮಧ್ಯಂತರ ಬೆಳೆವಿಮೆ (bele vime)ಬಿಡುಗಡೆ ಮಾಡಲು ಸರ್ಕಾರವು ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದೆ. ಅನಾವೃಷ್ಟಿಯ ಕಾರಣದಿಂದಾಗಿ ಈ ಬಾರಿ ಕರ್ನಾಟಕ ರಾಜ್ಯದಲ್ಲಿ, ಬಹುತೇಕ ಬೆಳೆಗಳು ಹಾನಿಯಾಗಿದ್ದು ಮಳೆ ಇಲ್ಲದೆ ರೈತನ ಜೀವನ  ಸಂಕಷ್ಟದಲ್ಲಿದೆ.

 ಎರಡು ಮೂರು ಬಾರಿ ಬಿತ್ತನೆ ಮಾಡಿದರು ,   ಬೀಜ, ಗೊಬ್ಬರ, ಎಣ್ಣೆ ಹೀಗೆ  ರೈತ ಹಣ ಖರ್ಚು ಮಾಡಿ ಎಂದು ಸರಿಯಾದ ಬೆಳೆ ಇಲ್ಲದೆ ಕಷ್ಟದಲ್ಲಿದ್ದಾನೆ,  ಇದಕ್ಕಾಗಿ ಸ್ಪಂದಿಸಿರುವಂತಹ ಸರ್ಕಾರವು ಈಗಾಗಲೇ ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು ಈ ತಾಲೂಕುಗಳಿಗೆ ಸದ್ಯದಲ್ಲಿಯೇ ಬೆಳೆ ಪರಿಹಾರವನ್ನು ನೀಡಲಾಗುವುದು.

 ಇನ್ನೂ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಶೇಕಡ 25% ರಷ್ಟು ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಸರ್ಕಾರ ಆದೇಶಿಸಿದೆ. ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಧ್ಯಂತರ ಬೆಳೆವಿಮೆ ಬಿಡುಗಡೆಗೆ ಆದೇಶಿಸಲಾಗಿದೆ ಎಂದು ಶಾಸಕರಾದಂತಹ ಶ್ರೀನಿವಾಸ್ ಮಾಣೆ ಅವರು ತಿಳಿಸಿದ್ದಾರೆ.

ಆನ್ಲೈನ್ ಮೂಲಕ ಬೆಳಗಿನ ಜಮೆ ಆಗಿರುವುದನ್ನು ಚೆಕ್ ಮಾಡುವುದು ಹೇಗೆ:

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ

ನೀವು ಗಮನಿಸಬಹುದು ನಾವು 2022-23 ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಹೆಸರು ಬೆಳೆ ವಿಮೆಯನ್ನು ಮಾಡಿಸಿದ್ದೆವು, ನಮಗೆ ಮಧ್ಯಂತರ ಪರಿಹಾರವಾಗಿ 11 ಎಕರೆ 7 ಗುಂಟೆ ಜಮೀನಿಗೆ 9,435 ರೂಪಾಯಿಗಳು ಜಮಾ ಆಗಿದ್ದವು.

samrakshane crop insurance

 

ಹಾಗಾಗಿ ನಿಮ್ಮ ಖಾತೆಗಳಿಗೂ ಜಮೆ ಆಗಿರಬಹುದು ಆದ ಕಾರಣ ಮೇಲೆ ತಿಳಿಸಿದಂತಹ ಸ್ಟೆಪ್ಸ್ ಗಳನ್ನು ಅನುಸರಿಸಿ ನಿಮಗೂ ಜಮೆಯಾಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ.

ನಮ್ಮ ರಾಜ್ಯದಲ್ಲಿ ಇರುವಂತಹ ಇನ್ಸೂರೆನ್ಸ್ ಕಂಪನಿಗಳ ಪಟ್ಟಿ ಇಂತಿದೆ

Bajaj allianz GIC

SBI General Insurance

Future general India Insurance Company

HDFC ergo General Insurance Company Limited

Universal sompo GIC

SBI General Insurance

Agriculture insurance company of India

ICICI Lombard GIC

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

– ಮೊಟ್ಟ ಮೊದಲಿಗೆ ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

– ಡೈರೆಕ್ಟರ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.samrakshane.karnataka.gov.in/

insurance

ಆಗ ಓಪನ್ ಆಗುವಂತಹ ಹೊಸ ಟ್ಯಾಬ್ ನಲ್ಲಿ, ವರ್ಷ ಹಾಗೂ ಋತುವನ್ನು ಆಯ್ಕೆ ಮಾಡಿ ಸಮ್ಮಿಟ್ ಬಟನ್ ಮೇಲೆ ಒತ್ತಿ

– ಆಗ ನಿಮಗೆ ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ಓಪನ್ ಆಗುತ್ತದೆ

insurance

– ಅದರಲ್ಲಿ ಫಾರ್ಮರ್ಸ್ ವಿಭಾಗದಲ್ಲಿ know your Insurance Company ಎಂಬ ಆಕ್ಷನ್ ಮೇಲೆ ಕ್ಲಿಕ್ ಮಾಡಿ.

– ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

PMFBY

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕೇಂದ್ರ ಸರ್ಕಾರದ ಬಂದು ಅದ್ಭುತ ಯೋಜನೆಯಾಗಿದ್ದು, ಯೋಜನೆಯಡಿ ನಾವು ಬೆಳೆಯುವಂತಹ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ.

ನಾವು ನಮ್ಮ ಜೀವನದಲ್ಲಿ ನಮ್ಮ ವಾಹನಗಳಿಗೆ, ಮೊಬೈಲ್ ಗಳಿಗೆ ಹೇಗೆ ಹಲವಾರು ವಸ್ತುಗಳಿಗೆ ವಿಮೆಯನ್ನು ಮಾಡಿಸುತ್ತೇವೆ, ಆಗ ಅವುಗಳಿಗೆ ಏನಾದರೂ ಡ್ಯಾಮೇಜದಲ್ಲಿ ಇನ್ಸೂರೆನ್ಸ್ ಕಂಪನಿಯಿಂದ ನಮಗೆ ವಿಮೆ ಕ್ಲೇಮ್ ಆಗುತ್ತದೆ.

ಅದೇ ರೀತಿ ಹಲವಾರು ವರ್ಷಗಳಿಂದ ರೈತರ ಬೆಳೆಗಳು ಹಾನಿಯಾಗುತ್ತಿದ್ದು ರೈತರಿಗೆ ನೆರವಾಗಲು ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ರೈತರು ತಮ್ಮ ಹೊಲದಲ್ಲಿ ತಾವು ಬೆಳೆಯುವಂತಹ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು, ಹಾಗೂ ಮುಂದೆ ಬೆಳಗಳು ಆನೆಯದಲ್ಲಿ ರೈತರಿಗೆ ಜೆರಾಕ್ಸ್ ಕಂಪನಿಗಳ ವತಿಯಿಂದ ಬೆಳೆವಿಮೆ ಕ್ಲೇಮ್ ಆಗುತ್ತದೆ.

By Raju

Leave a Reply

Your email address will not be published. Required fields are marked *