parihara

ಧಾರವಾಡ: ಜಿಲ್ಲೆಯ ಬರ ಘೋಷಿತ ತಾಲೂಕುಗಳಲ್ಲಿ ಬೆಳೆ ನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಭೂವಿವರ ಇರುವ ಎಫ್‌ಐಡಿ ಗುರುತಿನ ಸಂಖ್ಯೆ ಹೊಂದುವುದು ಕಡ್ಡಾಯ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ನೇತೃತ್ವದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳುಮತ್ತು ಅಧೀನ ಕಚೇರಿಗಳಲ್ಲಿ ರೈತರ ಪೂಟ್ಸ್‌ಐಡಿ ಸೃಷ್ಟಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಎಫ್‌ಐಡಿಯಲ್ಲಿ ದಾಖಲಿಸಿದ ಜಮೀನಿನ ವಿಶ್ವೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯಬಿದೆ. ಆದ್ದರಿಂದ ಜಿಲ್ಲೆಯ ರೈತರು ತಮ್ಮ ಎಲ್ಲ ಜಮೀನಿನ ಸರ್ವೇ ನಂಬರ್‌, ವಿಶ್ವೀರ್ಣಗಳನ್ನು ಕೂಡಲೇ ಫ್ರೂಟ್ಟ್‌ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು.

ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದಾಗ ಡಿಬಿಟಿ ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ಫ್ರೂಟ್ಸ್‌ ಐಡಿ ಬರ ಪರಿಹಾರದ ಹಣ ಮಾತ್ರವಲ್ಲದೆ, ಬೆಳೆವಿಮೆ, ಕನಿಷ್ಠ ಬೆಂಬಲ ಬೆಲೆ  ಯೋಜನೆಯಡಿ ಕೃಷಿ ಉತ್ಪನ್ನ, ಮಾರಾಟ ಮಾಡಲು ಮತ್ತು ಸರ್ಕಾರದ ಎಲ್ಲ ಯೋಜನೆಗಳ ಸೌಲಭ್ಯ ಹಾಗೂ ಬ್ಯಾಂಕ್‌ ಸಾಲ ಪಡೆಯಲು ಕಡ್ಡಾಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗತ್ಯ ದಾಖಲೆಗಳು: 

ಫ್ರೂಟ್ಸ್‌ ಐಡಿ ಮಾಡಿಸಲು ಆಧಾರ್‌ಕಾರ್ಡ್‌, ಬ್ಯಾಂಕ್‌ ಖಾತೆ ಪುಸ್ತಕದ ಪ್ರತಿ, ಎಲ್ಲ ಜಮೀನುಗಳ ಪಹಣಿ, ಮೊಬೈಲ್‌ ಸಂಖ್ಯೆ ಹಾಗೂ ಅಗತ್ಯವಿದ್ದಲ್ಲಿ ಜಾತಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಬೇಕು. 

ಕಂದಾಯ, ‘ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಚೇರಿಗಳಲ್ಲಿ ಐಡಿ ಮಾಡಿಸಬಹುದು.

ಸರ್ಕಾರಕ್ಕೆ ಪ್ರಸ್ತಾವ:

 ಜಿಲ್ಲೆಯ 8 ತಾಲೂಕುಗಳನ್ನು ಸರ್ಕಾರ ಈಗಾಗಲೇ ಬರಪೀಡಿತ ಎಂದು ಘೋಷಿಸಿದೆ. ಬರದಿಂದ 2.11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ಜಿಲ್ಲಾಡಳಿತದಿಂದ 212 ಕೋಟಿ ರೂ. ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಕ್ಷಿಸಲಾಗಿದೆ.

Read this also:

 ಆತ್ಮೀಯ ರೈತ ಬಾಂಧವರೇ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದಂತಹ HAVERI DISTRICT ರೈತರಿಗೆ 126.75 ಕೋಟಿ ಮಧ್ಯಂತರ ಬೆಳೆವಿಮೆ ಬಿಡುಗಡೆಯಾಗಿದೆ.

 ಇದು ಕರ್ನಾಟಕ ರಾಜ್ಯದ ಸಂಪೂರ್ಣ ಸುದ್ದಿಯಲ್ಲ ಇದು ಕೇವಲ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾದಂತ ಹಾವೇರಿ ಜಿಲ್ಲೆಗೆ ಬಿಡುಗಡೆಯಾದಂತಹ ಮಧ್ಯಂತರ  ಬೆಳವಿಮೆಯ ಹಣ. 

ಹಾವೇರಿ ಜಿಲ್ಲೆಯ ಆದಂತಹ ಎಲ್ಲಾ ತಾಲೂಕಿನ ರೈತರಿಗೆ ಬೆಳೆ ವಿಮೆಯ ಶೇಕಡ 25ರಷ್ಟು ಹಣವನ್ನು ಮಧ್ಯಂತರ ಬೆಳೆ ವಿಮೆಯ ಹಣವಾಗಿ ರೈತರ ಖಾತೆಗಳಿಗೆ  ಜಮಾ ಮಾಡಲಾಗಿದೆ.

ಅಧಿಕಾರಿಗಳು ನೀಡಿದಂತಹ ಸಮಯದಲ್ಲಿ ಮಾಡಿದಂತಹ ಅಚ್ಚುಕಟ್ಟಿನ ಕೆಲಸದಿಂದಾಗಿ ಹಾವೇರಿ ಜಿಲ್ಲೆ, ಇಡೀ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಧ್ಯಂತರ ಬೆಳೆ ವಿಮೆ ಹಣವನ್ನು ಪಡೆದಂತಹ ಜಿಲ್ಲೆಯಾಗಿದೆ.

126.75 ಕೋಟಿ ರೂಪಾಯಿಗಳಲ್ಲಿ ಈಗಾಗಲೇ 40 ಕೋಟಿ ರೂಪಾಯಿ ರೈತರ ಖಾತೆಗಳಿಗೆ ಬಿಡುಗಡೆಯಾಗಿದ್ದು,  ಮುಂದಿನ ಹಂತಗಳಲ್ಲಿ 40 ಕೋಟಿ ರೂಪಾಯಿ ಹಾಗೂ ಉಳಿದ ಹಣವನ್ನು ಕೂಡ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಬರ ಪರಿಹಾರದ ಕುರಿತು ಮಾಹಿತಿ:

ಮಾಹಿತಿ ನೀಡಿದಂತಹ ಸಚಿವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ನೀಡಲು ಬರ  ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು ಕೇಂದ್ರ ಸರ್ಕಾರ ಏನ್ ಡಿ ಆರ್ ಎಫ್ ಅಡಿ ಬರ ಪರಿಹಾರವನ್ನು ಬಿಡುಗಡೆ ಮಾಡಿದ ತಕ್ಷಣವೇ ರಾಜ್ಯ ಸರ್ಕಾರವು ಕೂಡ ಎಸ್ ಡಿ ಆರ್ ಎಫ್ ಅಡಿ ಹಣವನ್ನು ಬಿಡುಗಡೆ ಮಾಡಿ ರೈತರಿಗೆ ಬರ ಪರಿಹಾರದ ಹಣವನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದರು.

ಆನ್ಲೈನ್ ಮೂಲಕ ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಪರಿಹಾರ ಪೇಮೆಂಟ್ ಎಂದು ಸರ್ಚ್ ಮಾಡಿ

 ಡೈರೆಕ್ಟ್ ಲಿಂಕ್: https://landrecords.karnataka.gov.in/PariharaPayment/

ಅಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ,  ನಿಮ್ಮ ಬಳಿ ಪರಿಹಾರ ಐಡಿ ಇದ್ದರೆ ಪರಿಹಾರ ಐಡಿ ಮೇಲೆ ಕ್ಲಿಕ್ ಮಾಡಿ ಅಥವಾ ಆಧಾರ್ ನಂಬರ್ ಮೇಲೆ ಕ್ಲಿಕ್ ಮಾಡಿ

parihara

ಅಲ್ಲಿ ಕೇಳುವಂತ ಎಲ್ಲ ಮಾಹಿತಿಯನ್ನು ನಮೂದಿಸಿ ಹೆಚ್ಚು ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

 ಆಗ ಅಲ್ಲಿ ನೀವು ನಿಮ್ಮ ಯಾವ ಖಾತೆಗೆ ಎಷ್ಟು ಪರಿಹಾರದ ಹಣ ಯಾವಾಗ ಜಮೆಯಾಗಿದೆ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

ಆನ್ಲೈನ್ ಮೂಲಕ ನಿಮ್ಮ ಖಾತೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಜಮೆಯಾಗಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ನಿಮಗೆ ನಿಮ್ಮ ಖಾತೆಗಳಿಗೆ ಎಷ್ಟು ಹಣ ಯಾವಾಗ ಯಾವ ಖಾತೆಗೆ ಜಮೆಯಾಗಿದೆ ಎಂದು ಅಲ್ಲಿ ನೀವು ವೀಕ್ಷಿಸಬಹುದಾಗಿದೆ.

 

 

By Raju

Leave a Reply

Your email address will not be published. Required fields are marked *